ಹಿಂದಿ ಶಿಕ್ಷಕರ ಬಡ್ತಿ

7

ಹಿಂದಿ ಶಿಕ್ಷಕರ ಬಡ್ತಿ

Published:
Updated:

ಸರ್ಕಾರವು ವೋಟ್‌ ಬ್ಯಾಂಕ್‌ ಸೃಷ್ಟಿಗಾಗಿ ನೌಕರರ ಬಡ್ತಿ ವ್ಯವಸ್ಥೆಯನ್ನೇ ಹಾಳು ಮಾಡಿತ್ತು. ಸುಪ್ರೀಂ ಕೋರ್ಟ್‌ ಈ ವಿಚಾರದಲ್ಲಿ ನೀಡಿದ್ದ ತೀರ್ಪು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದಿದೆ.ನನ್ನಂಥ ಅನೇಕರು ರೆಗ್ಯುಲರ್ ಹಿಂದಿ ಬಿಇಡಿ ತರಬೇತಿಯನ್ನು ಪೂರೈಸಿ ಶಿಕ್ಷಕರಾಗಿದ್ದೇವೆ. ಆದರೆ ಬಡ್ತಿಯ ವಿಚಾರದಲ್ಲಿ ಅನ್ಯಾಯಕ್ಕೆ ಒಳಗಾಗಿದ್ದೇವೆ.

ಪ್ರಚಾರ ಸಭಾದಿಂದ ಹಿಂದಿ ಬಿಇಡಿ ಮಾಡಿದ ಶಿಕ್ಷಕರಿಂದ ಗೊಂದಲ ಸೃಷ್ಟಿಯಾಗಿದೆ. ‘ಹಿಂದಿ ಪ್ರಚಾರ ಸಭಾದಿಂದ ಬಿಇಡಿ ಮಾಡಿದವರು ಬೋಧಕರಾಗಲು ಅನರ್ಹರು’ ಎಂದು ಸುಪ್ರೀಂ ಕೋರ್ಟ್‌ ತೀರ್ಪಿತ್ತಿರುವುದು ಸ್ವಾಗತಾರ್ಹ. ಶಿಕ್ಷಣ ಸಂಸ್ಥೆಗಳು ನ್ಯಾಯಾಲಯದ ತೀರ್ಪನ್ನು ಪಾಲಿಸಿ ರೆಗ್ಯುಲರ್ ಹಿಂದಿ ಬಿಇಡಿ ಮಾಡಿರುವವರಿಗೆ ನ್ಯಾಯ ಒದಗಿಸಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !