ಗುರುವಾರ , ಏಪ್ರಿಲ್ 15, 2021
27 °C

ಅನುಮತಿ ಕೊಟ್ಟಿದ್ದಾದರೂ ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿಯಲ್ಲಿ ಬಿಜೆಪಿ ಆಯೋಜಿದ್ದ ಜನಸೇವಕ ಸಮಾವೇಶದಲ್ಲಿ ಸಾವಿರಾರು ಜನ ಸೇರಿದ್ದರು. ಅಲ್ಲಿ ಹಲವರು ಮಾಸ್ಕ್ ಹಾಕದ, ಅಂತರ ಕಾಯ್ದುಕೊಳ್ಳದ ಬಗ್ಗೆ ಸಚಿತ್ರ ವರದಿಯಾಗಿದೆ (ಪ್ರ.ವಾ., ಜ. 18). ದೇಶದ ಗೃಹ ಸಚಿವರು, ಮುಖ್ಯಮಂತ್ರಿ ಸೇರಿದಂತೆ ಅನೇಕ ಪ್ರಮುಖರು ವೇದಿಕೆಯಲ್ಲಿದ್ದರು. ಜನಸಾಮಾನ್ಯರು ಮಾಸ್ಕ್ ಧರಿಸದೇ ಇದ್ದರೆ ದಂಡ ವಿಧಿಸುವ ಪೊಲೀಸರೂ ಈ ಸಭೆಯಲ್ಲಿ ರಕ್ಷಣೆ ಒದಗಿಸುವ ಕೆಲಸ ಮಾಡಿದರು.

ಮದುವೆ ಮತ್ತಿತರ ಸಭೆ–ಸಮಾರಂಭಗಳಲ್ಲಿ ಜನ ಜಮಾಯಿಸುವುದಕ್ಕೆ ಮಿತಿ ಹೇರಲಾಗಿದೆ. ಸಿನಿಮಾ ಥಿಯೇಟರ್‌
ಗಳಲ್ಲಿ ಅಂತರ ಕಾಯ್ದುಕೊಳ್ಳುವ ಸಲುವಾಗಿಯೇ ಕೇವಲ ಅರ್ಧದಷ್ಟು ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಈ ಸಮಾವೇಶದಲ್ಲಿ ಕಾನೂನು ಉಲ್ಲಂಘಿಸಿದವರ ಮೇಲಾಗಲೀ ಆಯೋಜಕರ ಮೇಲಾಗಲೀ ಕ್ರಮ ಕೈಗೊಂಡ ವರದಿ ಇಲ್ಲ. ಇಂತಹ ಸಮಾವೇಶಕ್ಕೆ ಪೊಲೀಸರು, ಜಿಲ್ಲಾಧಿಕಾರಿ ಅನುಮತಿ ಕೊಟ್ಟಿದ್ದಾದರೂ ಹೇಗೆ? ನಾಡಿನ ನೇತಾರರೇ ಕಾನೂನು ಉಲ್ಲಂಘಿಸಿದರೆ, ಕಾನೂನು ಪಾಲಿಸಿ ಎಂದು ಜನಸಾಮಾನ್ಯರಿಗೆ ಹೇಳುವುದಾದರೂ ಹೇಗೆ?

ಅತ್ತಿಹಳ್ಳಿ ದೇವರಾಜ, ಹಾಸನ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು