ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಕುಲದ ಮೃಗಗಳ ನಿಯಂತ್ರಣ ಹೇಗೆ?

Last Updated 20 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಮನುಕುಲದಲ್ಲಿ ಮೃಗಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ನಿವೃತ್ತ ಸೇನಾಧಿಕಾರಿಯೊಬ್ಬರು
ಕಳವಳ ವ್ಯಕ್ತಪಡಿಸಿದ್ದಾರೆ (ಪ್ರ.ವಾ., ಕಿಡಿನುಡಿ, ನ. 20). ಅದೇ ದಿನ ಕಾಸರಗೋಡಿನ ಮಂಜೇಶ್ವರದಲ್ಲಿ ರಸ್ತೆಯಲ್ಲಿ ನಿಂತಿದ್ದ ಬಾಲಕಿಯನ್ನು ದುರುಳನೊಬ್ಬ ನಿಷ್ಕರುಣವಾಗಿ ಹೊಡೆದು ರಸ್ತೆಗೆ ಬಿಸಾಡಿದ್ದು (ಪ್ರ.ವಾ., ನ. 18) ಸೇನಾಧಿಕಾರಿಯ ಆತಂಕಕ್ಕೆ ಪುಷ್ಟಿ ನೀಡುವಂತಿದೆ. ಹೌದು, ಇತ್ತೀಚಿನ ದಿನಗಳಲ್ಲಿ ಸೌಮ್ಯ ಮುಖವಾಡದ, ಕರಾಳ ಆಂತರ್ಯ ಹೊಂದಿರುವವರ ಸಂಖ್ಯೆ ಹೆಚ್ಚುತ್ತಿದೆ. ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ.

ಬಹಳಷ್ಟು ಸಂದರ್ಭಗಳಲ್ಲಿ ಹಿಂಸೆಗೆ ಒಳಗಾದ ಮಕ್ಕಳ ಬಗೆಗೆ ಕಾಳಜಿ ವ್ಯಕ್ತವಾಗುವ ಬದಲು, ಮೃಗೀಯ ವರ್ತನೆ ತೋರಿದವರ ಪರವಾಗಿಯೇ ರಾಜಕೀಯ ಹಾಗೂ ಜಾತಿ ಆಧಾರದ ಮೇಲೆ ಕಾಳಜಿ ವ್ಯಕ್ತವಾಗುತ್ತಿರುವುದು ಘೋರ ಅಪರಾಧವೇ ಸರಿ. ಸಮಾಜದಲ್ಲಿ ನೈತಿಕತೆಯ ಮಟ್ಟ ಅಧಃಪತನಕ್ಕೆ ಇಳಿಯದಂತೆ ನೋಡಿಕೊಳ್ಳಲು ನಾಗರಿಕ ಸಮಾಜ ಜಾಗೃತಗೊಳ್ಳಬೇಕಾದ ಅಗತ್ಯವಿದೆ.

⇒ನಾರಾಯಣರಾವ ಕುಲಕರ್ಣಿ,ಹಿರೇಅರಳಿಹಳ್ಳಿ, ಯಲಬುರ್ಗಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT