ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲ್ಯಾಣ ಕರ್ನಾಟಕ’ ; ಹೆಸರು ಬದಲಾದರಷ್ಟೇ ಸಾಲದು, ಬೇಕು ಅಭಿವೃದ್ಧಿ

Last Updated 8 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

‘ಹೈದರಾಬಾದ್‌ ಕರ್ನಾಟಕ’ವನ್ನು ‘ಕಲ್ಯಾಣ ಕರ್ನಾಟಕ’ ಎಂದು ನಾಮಕರಣ ಮಾಡಿರುವುದು ಐತಿಹಾಸಿಕ ನಿರ್ಧಾರ. ಆದರೆ ಹೆಸರು ಬದಲಾವಣೆಗಿಂತ ಹೆಚ್ಚಾಗಿ ಈ ಭಾಗದ ಅಭಿವೃದ್ಧಿ ಆಗಬೇಕಾದುದು ಮುಖ್ಯ. ನಿರಂತರ ಹೋರಾಟದ ಫಲವಾಗಿ, ಅಂದಿನ ಗೃಹ ಸಚಿವ ಸರ್ದಾರ್‌ ವಲ್ಲಭಭಾಯಿ ಪಟೇಲ್ ಅವರ ನೇತೃತ್ವದಲ್ಲಿ ನಿಜಾಮ ಸಂಸ್ಥಾನವು ಸ್ವತಂತ್ರ ಭಾರತದ ಒಕ್ಕೂಟದಲ್ಲಿ ವಿಲೀನವಾಯಿತು. ಅದರ ನೆನಪಿಗಾಗಿ ‘ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ’ ಆಚರಿಸಲಾಗುತ್ತದೆ. ಸಚಿವ ಜೆ.ಸಿ.ಮಾಧುಸ್ವಾಮಿ ‘ಎಲ್ಲೆಲ್ಲಿ ಹೈದರಾಬಾದ್ ಕರ್ನಾಟಕ ಪದ ಬಳಕೆಯಾಗಲಿದೆಯೋ ಅಂತಹ ಕಡೆಗಳಲ್ಲಿ ಇನ್ನು ಮುಂದೆ ಕಲ್ಯಾಣ ಕರ್ನಾಟಕ ಎಂದು ಬಳಸಲಾಗುತ್ತದೆ’ ಎಂದಿದ್ದಾರೆ. ಪ್ರಶ್ನೆ ಎಂದರೆ, ‘ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನ’ವನ್ನು ‘ಕಲ್ಯಾಣ ಕರ್ನಾಟಕ ವಿಮೋಚನಾ ದಿನ’ ಎಂದು ಆಚರಿಸಲು ಸಾಧ್ಯವೇ? ಸಚಿವರು ಸ್ಪಷ್ಟಪಡಿಸಬೇಕು. ಈ ಭಾಗದ ಜ್ವಲಂತ ಸಮಸ್ಯೆ ಗುಳೆ. ಜನರ ಈ ಬವಣೆ ನೀಗುವುದೇ? 371ಜೆ ಅಡಿಯಲ್ಲಿ ಬರುವ ಈ ಭಾಗದ ಖಾಲಿ ಹುದ್ದೆಗಳನ್ನು ತುಂಬುವುದು ಯಾವಾಗ? ಈ ಬಗ್ಗೆ ಸರ್ಕಾರ ಗಂಭೀರವಾದ ಚಿಂತನೆ ನಡೆಸಬೇಕು.

ಭೀಮಾಶಂಕರ ಹಳಿಸಗರ,ಶಹಾಪೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT