ಐಎಲ್‌ಎಫ್‌ಎಸ್ ನಷ್ಟ; ಎಚ್ಚರ ಇರಲಿ

7

ಐಎಲ್‌ಎಫ್‌ಎಸ್ ನಷ್ಟ; ಎಚ್ಚರ ಇರಲಿ

Published:
Updated:

ದೇಶದ ಮೂಲ ಸೌಕರ್ಯ ಯೋಜನೆಗಳಿಗೆ ಹಣ ಪೂರೈಸುವ ಸಂಸ್ಥೆಯಾಗಿ 31 ವರ್ಷಗಳ ಹಿಂದೆ ಪ್ರಾರಂಭವಾದ ‘ಇನ್‌ಫ್ರಾಸ್ಟ್ರಕ್ಚರ್ ಲೀಸಿಂಗ್ ಅಂಡ್ ಫೈನಾನ್ಶಿಯಲ್‌ ಸರ್ವಿಸಸ್’ ವಿವಿಧ ಮೂಲಗಳಿಂದ ₹ 91 ಸಾವಿರ ಕೋಟಿ ಸಾಲ ಮಾಡಿ ಈಗ ಸಂಕಷ್ಟಕ್ಕೆ ಸಿಲುಕಿದೆ. ಸಾಲಗಾರರಿಗೆ ಹಣ ಹಿಂದಿರುಗಿಸಲಾರದ ದಯನೀಯ ಸ್ಥಿತಿಗೆ ಮುಟ್ಟಿದೆ. ಅದನ್ನು ಮೇಲೆತ್ತಲು ಸದಾ ‘ಕಾಮಧೇನು’ವಿನಂತೆ ಇರುವ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮುಂದಾಗಬೇಕೆಂದು ಕೇಂದ್ರ ಸರ್ಕಾರ ಬಯಸಿದೆ.

ಸರ್ಕಾರದ ಆದೇಶ ಅಂದ ಮೇಲೆ ಸರ್ಕಾರಿ ಒಡೆತನದ ಸಂಸ್ಥೆ ಕೇಳಲೇಬೇಕಲ್ಲ? ಎಲ್‌ಐಸಿ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಇದೇ ರೀತಿ ಮತ್ತೊಂದು ಹಣಕಾಸು ಸಂಸ್ಥೆ ಐಡಿಬಿಐ ದಿವಾಳಿ ಹಂತ ಮುಟ್ಟಿದಾಗ, ಆಗಲೂ ಎಲ್‌ಐಸಿಯನ್ನೇ ಸರ್ಕಾರ ಸಹಾಯಕ್ಕೆ ಬಳಸಿತ್ತು. ಹೀಗೆ ದಿವಾಳಿಯಾಗುತ್ತಿರುವ ಸಂಸ್ಥೆಗಳ ಸಹಾಯಕ್ಕೆ ಎಲ್‌ಐಸಿಯನ್ನು ಬಳಸುತ್ತಾ ಹೋದರೆ, ಪಾಲಿಸಿದಾರರ ಹಣಕ್ಕೆ ಭದ್ರತೆ ಏನು?

ಜನಸಮುದಾಯದ ಉಳಿತಾಯದ ಹಣವನ್ನು ರಾಷ್ಟ್ರ ನಿರ್ಮಾಣದ ಕಾರ್ಯಕ್ಕೆ ವಿನಿಯೋಗಿಸುತ್ತಲೇ ಪಾಲಿಸಿದಾರರ ಹಣಕ್ಕೆ ಯೋಗ್ಯ ಪ್ರತಿಫಲವನ್ನೂ ನೀಡುತ್ತಿರುವ ಕಾರಣಕ್ಕೆ ಎಲ್ಐಸಿಯು ಜನಮನ್ನಣೆ ಗಳಿಸಿದೆ. 1956ರಲ್ಲಿ ಬರೀ ₹ 5 ಕೋಟಿ ಬಂಡವಾಳ ಹೂಡಿಕೆಯಿಂದ ಸರ್ಕಾರಿ ರಂಗದಲ್ಲಿ ಪ್ರಾರಂಭವಾದ ಭಾರತೀಯ ಜೀವ ವಿಮಾ ನಿಗಮವು ಈಗ ಎಲ್ಲರೂ ಹೆಮ್ಮೆಪಡುವಂಥ ಸಾಧನೆ ಮಾಡಿ ಲಕ್ಷಾಂತರ ಕೋಟಿ ರೂಪಾಯಿ ಆಸ್ತಿ ಹೊಂದಿದೆ. ವಿಫಲ ಸಂಸ್ಥೆಗಳ ಪುನಶ್ಚೇತನಕ್ಕೆ ಇದರ ಸಂಪನ್ಮೂಲ ಬಳಸುವ ಪ್ರಯತ್ನಗಳು ಪಾಲಿಸಿದಾರರ ಹಿತದೃಷ್ಟಿಯಿಂದ ಸರಿಯಲ್ಲ.

ಸಂಕಷ್ಟಕ್ಕೆ ಸಿಲುಕಿರುವ ಹಣಕಾಸು ಸಂಸ್ಥೆಗಳಿಗೆ ಸಹಾಯಹಸ್ತದ ಹೆಸರಿನಲ್ಲಿ ನಿಗಮವನ್ನು ನಷ್ಟದತ್ತ ತಳ್ಳಿ ಅದೇ ನೆಪದಡಿ ಖಾಸಗಿಯವರಿಗೆ ಪರಭಾರೆ ಮಾಡುವ ಕುತಂತ್ರ ಇದಾಗಿರಬಹುದೇ ಎಂಬ ಸಂಶಯ ಬರುತ್ತಿದೆ. ಪಾಲಿಸಿದಾರರು ಮತ್ತು ಸಾರ್ವಜನಿಕರು ಸರ್ಕಾರದ ಇಂತಹ ದಿವಾಳಿಕೋರ ನೀತಿಗಳ ಬಗ್ಗೆ ಎಚ್ಚರ ವಹಿಸಬೇಕು.

– ಟಿ. ಸುರೇಂದ್ರ ರಾವ್, ಬೆಂಗಳೂರು

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !