ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ: ಸ್ಥಳೀಯ ಭಾಷೆ ಕಲಿಯುವುದು ಒಳಿತಲ್ಲವೇ?

Last Updated 11 ಜನವರಿ 2022, 19:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರ ಇತ್ತೀಚೆಗೆ ಹಲವು ಬ್ಯಾಂಕುಗಳನ್ನು ಕೆಲವೇ ಕೆಲವು ಬ್ಯಾಂಕುಗಳ ಅಡಿ ತಂದು ಸಂಯೋಜಿಸಿತು. ಇದಕ್ಕೆ ಹಲವು ಬ್ಯಾಂಕುಗಳ ಆಡಳಿತ ಮಂಡಳಿಗಳು ಅಂದೇ ವಿರೋಧ ವ್ಯಕ್ತಪಡಿಸಿದ್ದವು. ಅಲ್ಲದೆ ಇದರಿಂದ ಜನಸಾಮಾನ್ಯರು ಸಹ ತೊಂದರೆ ಅನುಭವಿಸುವಂತಾಗಿದೆ. ಉದಾಹರಣೆಗೆ: ಹಿಂದೆ ಸಿಂಡಿಕೇಟ್ ಬ್ಯಾಂಕ್ ಇದ್ದಾಗ ಸ್ಥಳೀಯ ಭಾಷೆ ಬರುವವರನ್ನೇ ವ್ಯವಸ್ಥಾಪಕರನ್ನಾಗಿ ಮಾಡುತ್ತಿದ್ದರು. ಈಗ ಅದು ಕೆನರಾ ಬ್ಯಾಂಕಿಗೆ ಸೇರಿದೆ.

ಕೆನರಾ ಬ್ಯಾಂಕಿನ ಬೆಂಗಳೂರು ಮಲ್ಲತ್ತಹಳ್ಳಿಯ ಶಾಖೆಗೆ ಇತ್ತೀಚೆಗೆ ಉತ್ತರ ಭಾರತದ ಹೆಣ್ಣು ಮಗಳನ್ನು ವ್ಯವಸ್ಥಾಪಕರನ್ನಾಗಿ ನಿಯೋಜಿಸಲಾಗಿದೆ. ಅವರಿಗೆ ನಮ್ಮ ಸ್ಥಳೀಯ ಭಾಷೆಯ ಜ್ಞಾನವೇ ಇಲ್ಲ. ಹೆಚ್ಚಿನ ಗ್ರಾಹಕರಿಗೆ ಸ್ಥಳೀಯ ಭಾಷೆ ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ.ಸಾಮಾನ್ಯ ಜನರು ಅವರ ಬಳಿ ಹೇಗೆ ಕಷ್ಟ ಹೇಳಿಕೊಳ್ಳುವುದು, ಮಾಹಿತಿ ಪಡೆಯುವುದು? ಸ್ಥಳೀಯ ಭಾಷೆ ಅರಿಯದ ಅವರು ಸ್ಥಳೀಯ ಜನರೊಂದಿಗೆ ವ್ಯವಹರಿಸುವುದಾದರೂ ಹೇಗೆ? ಕಡೇಪಕ್ಷ ಅವರು ಇಲ್ಲಿಯ ಭಾಷೆಯನ್ನಾದರೂ ಕಲಿಯಲಿ, ಇಲ್ಲವಾದರೆ ಸ್ಥಳೀಯ ಭಾಷೆ ಗೊತ್ತಿರುವವರು ವ್ಯವಸ್ಥಾಪಕರಾಗಿ ನೇಮಕಗೊಳ್ಳಲಿ.

- ಮಲ್ಲತ್ತಹಳ್ಳಿ ಡಾ. ಎಚ್.ತುಕಾರಾಂ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT