ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂಡಿಯಾ’ | ‘ದೇವರ ಮಕ್ಕಳು’ ನಾವು...

Last Updated 20 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ದೇಶದ ಹೆಸರನ್ನು ಇಂಡಿಯಾದ ಬದಲಾಗಿ ಭಾರತ ಎಂದು ಬದಲಿಸಲು ಸಕಾಲ ಎಂಬ ಸವಿತಾ ನಿರಂಜನ ಅವರ ಅಭಿಪ್ರಾಯವನ್ನು (ವಾ.ವಾ., ಆ. 20) ನಾನು ಒಪ್ಪುತ್ತೇನೆ. ಆದರೆ ಈ ಹೆಸರುಗಳ ಇತಿಹಾಸ ಮತ್ತು ಪ್ರಸ್ತುತ ಪ್ರಭಾವವನ್ನು ಗಮನಿಸಬೇಕಾದ ಅಗತ್ಯವಿದೆ. ಗ್ರೀಕರು, ಇಂಡಸ್ ನದಿಯ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದ ಜನರನ್ನು ಇಂಡೋಸ್ ಎಂದೂ ಅಲ್ಲಿನ ಸ್ಥಳವನ್ನು ಇಂಡಿಯಾ ಎಂದೂ ಕರೆದರು ಎಂದು ಕೆಲವು ಸಾಕ್ಷ್ಯಗಳು ಹೇಳುತ್ತವೆ. ಇನ್ನೊಂದು ಸಾಕ್ಷ್ಯದ ಪ್ರಕಾರ, ಕೊಲಂಬಸ್‌ 1515ರಲ್ಲಿ ಇಂಡಿಯಾ ಎಂದು ಕರೆದದ್ದು ಎಂದು ಹೇಳಲಾಗುತ್ತದೆ. ಆದರೆ ಲ್ಯಾಟಿನ್ ಭಾಷೆಯಲ್ಲಿ ಇಂಡಿಯಾ ಎಂದರೆ ‘ದೇವರ ಮಕ್ಕಳು’ ಎಂದರ್ಥ. ಆದ್ದರಿಂದ ‘ಅಮೆರಿಕನ್ ಇಂಡಿಯನ್’, ‘ವೆಸ್ಟ್ ಇಂಡೀಸ್’ ಎಂದು ಕರೆಯಲಾಗುತ್ತದೆ.

ಸಪ್ತ ಸಾಗರಗಳಿಗೆ ಯಾವುದೇ ಒಂದು ದೇಶದ ಹೆಸರನ್ನು ಸೂಚಿಸಲಾಗಿಲ್ಲ. ಆದ್ದರಿಂದ ಹಿಂದೂ ಮಹಾಸಾಗರಕ್ಕೆ ‘ಇಂಡಿಯನ್ ಓಷನ್’ ಎಂದು ಕರೆಯುವುದನ್ನು ಚೀನಾ ವಿರೋಧಿಸಿ ‘ವೆಸ್ಟ್ರನ್ ಓಷನ್’ ಎಂದೂ, ಇನ್ನು ಕೆಲವು ದೇಶಗಳು ‘ಏಷ್ಯನ್ ಓಷನ್’ ಅಥವಾ ‘ಆಫ್ರೇಷ್ಯನ್ ಓಷನ್’ ಎಂದೂ ಹೆಸರಿಸಬೇಕು ಎನ್ನುತ್ತಿವೆ. ಟೆಕ್ಟಾನಿಕ್ ಪ್ಲೇಟ್‍ಗೆ 1912ರಲ್ಲಿ ಆಲ್ಫ್ರೆಡ್ ವೆಜೆನರ್‌ ಅವರು ‘ಇಂಡಿಯನ್ ಪ್ಲೇಟ್’ ಎಂದು ಹೆಸರಿಸಿದ್ದಾರೆ. ಈ ಎರಡು ಕಾರಣಗಳಿಂದಾಗಿ ‘ಇಂಡಿಯನ್ ಸಬ್ ಕಾಂಟಿನೆಂಟ್’ ಎಂದು ಕರೆದು, ಭಾರತ ದೇಶವು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಆದ್ದರಿಂದ ಇಂಡಿಯಾವನ್ನು ‘ಹಿಂದೂಸ್ತಾನ್‌’ ಅಥವಾ ‘ಭಾರತ’ ಎಂದು ಹೆಸರಿಸಿದರೆ ಹೆಚ್ಚು ಖುಷಿಪಡುವುದು ಚೀನಾ, ಪಾಕಿಸ್ತಾನ ಮುಂತಾದ ದೇಶಗಳು.

-ಬಿ.ಎನ್.ಸುರೇಶ್ವರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT