ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಮಾನವೀಯ ನೆಲೆಯಲ್ಲಿ ಪರಿಗಣಿಸಿ

Last Updated 18 ಮೇ 2022, 19:45 IST
ಅಕ್ಷರ ಗಾತ್ರ

ರೈಲುಗಳ‌ಲ್ಲಿ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ನೀಡಲಾಗುತ್ತಿದ್ದ ರಿಯಾಯಿತಿಯನ್ನು ಭಾರತೀಯ ರೈಲ್ವೆ ನಿಗಮವು ನಿಲ್ಲಿಸಿದ್ದು, ಇದರಿಂದ ₹ 1,500 ಕೋಟಿ ಹೆಚ್ಚುವರಿ ವರಮಾನ ಬಂದಿದೆ ಎಂದು ವರದಿಯಾಗಿದೆ. ಮೂಲತಃ ಲಾಭದಲ್ಲೇ ಇರುವ ರೈಲ್ವೆ ಇಲಾಖೆಯು ಇನ್ನೂ ಹೆಚ್ಚು ವರಮಾನ ಪಡೆಯುವ ಉದ್ದೇಶಕ್ಕೆ ಹಿರಿಯ ನಾಗರಿಕರೇ ಗುರಿಯಾಗಬೇಕೆ? ಹಾಗೆ ನೋಡಿದರೆ ಸಾರಿಗೆ ಇಲಾಖೆಯು ನಷ್ಟವನ್ನೇ ಅನುಭವಿಸುತ್ತಿದೆ. ತನ್ನ ಚಾಲಕರಿಗೆ ಸಂಬಳ ಕಡಿತ ಮಾಡಿದೆ. ಆದರೂ ಧೃತಿಗೆಡದೆ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ರಿಯಾಯಿತಿಯನ್ನು ಮುಂದುವರಿಸಿದೆ.

ಹಿರಿಯ ನಾಗರಿಕರಿಗೆ ನೀಡಿದ್ದ ಈ ರಿಯಾಯಿತಿಯನ್ನು ತೆಗೆದಿರುವುದು ಉಚಿತವಲ್ಲ. ರೈಲ್ವೆ ಇಲಾಖೆಯು ತನ್ನ ನಿರ್ಣಯವನ್ನು ಇನ್ನಾದರೂ ಮರುಪರಿಶೀಲಿಸಿ, ಮಾನವೀಯ ನೆಲೆಯಲ್ಲಿ ಈ ಸೌಲಭ್ಯವನ್ನು ಮುಂದುವರಿಸಬೇಕು.

-ಬಾಲಕೃಷ್ಣ ಎಂ.ಆರ್., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT