ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ವೈಯಕ್ತಿಕ ಮಟ್ಟದ ಟೀಕೆ ಸಲ್ಲದು

Last Updated 22 ಫೆಬ್ರುವರಿ 2021, 19:43 IST
ಅಕ್ಷರ ಗಾತ್ರ

‘ಅಗತ್ಯ ವಸ್ತುಗಳ ಬೆಲೆ ಏರುತ್ತಿದೆ. ಜನರಿಗೆ ಮುಖ ತೋರಿಸುವುದು ಹೇಗೆ ಎಂದು ಪ್ರಧಾನಿ ಮೋದಿ ಗಡ್ಡ ಬೆಳೆಸಿಕೊಂಡು ಜನರಿಗೆ ತಮ್ಮ ಗುರುತು ಸಿಗದ ಹಾಗೆ ಮಾಡಿಕೊಳ್ಳುತ್ತಿದ್ದಾರೆ’ ಎಂಬರ್ಥದಲ್ಲಿ ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಅವರು ಪ್ರಧಾನಿ ವಿರುದ್ಧ ವ್ಯಂಗ್ಯವಾಡಿದ್ದಾರೆ (ಪ್ರ.ವಾ., ಫೆ. 22). ಸಿದ್ದರಾಮಯ್ಯ ಅವರಿಂದ ಯಾರೇ ಆದರೂ ತೂಕದ ಮಾತುಗಳನ್ನು ಮಾತ್ರ ಕೇಳಲು ಅಪೇಕ್ಷಿಸುವರೇ ಹೊರತು ಯಾರೋ ಹೊಣೆಗೇಡಿ ಆಡಬಹುದಾದ ಕ್ಷುಲ್ಲಕ, ವ್ಯಂಗ್ಯದ ಮಾತುಗಳನ್ನಲ್ಲ.

ಒಬ್ಬ ಸಾಮಾನ್ಯ ನಾಗರಿಕನೂ ಸಾರ್ವಜನಿಕವಾಗಿ ಅಥವಾ ಸಭೆಗಳಲ್ಲಿ ತಾನು ಆಡುವ ಮಾತುಗಳು ಒಂದು ಮಿತಿಯಲ್ಲಿ ಇರತಕ್ಕದ್ದು ಎಂಬ ಎಚ್ಚರವನ್ನು ಹೊಂದಿರಬೇಕು. ಹೀಗಿರುವಾಗ ದೇಶದ ಪ್ರಧಾನಿಯ ಬಗ್ಗೆ ಟೀಕಿಸುವಾಗ, ಮುಖ್ಯಮಂತ್ರಿ ಹುದ್ದೆಯಲ್ಲಿದ್ದವರು ವೈಯಕ್ತಿಕವಲ್ಲದ ರೀತಿಯ ಟೀಕೆಗಳನ್ನು ಮಾಡಿದರೆ ಮಾತ್ರ ಅಂಥ ಟೀಕೆಗೆ ತೂಕ ಇರುತ್ತದೆ ಮತ್ತು ಟೀಕೆಯನ್ನು ಒಪ್ಪದವರೂ ಟೀಕೆಯ ರೀತಿಯನ್ನು ಮೆಚ್ಚುತ್ತಾರೆ.

ಸಾಮಗ ದತ್ತಾತ್ರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT