ಗುರುವಾರ , ನವೆಂಬರ್ 21, 2019
26 °C

ಹುಂಬತನದಿಂದ ಅಪಾಯ ಕಟ್ಟಿಟ್ಟ ಬುತ್ತಿ

Published:
Updated:

‘ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತದ ಜೊತೆ ಸಾಂಪ್ರದಾಯಿಕ ಯುದ್ಧ ನಡೆಯುವ ಸಾಧ್ಯತೆ ಇದೆ’ ಎಂಬ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಹೇಳಿಕೆ ಗಮನಿಸಿದರೆ (ಪ್ರ.ವಾ., ಸೆ.16), ಅವರು ಯುದ್ಧವನ್ನು ಲಘುವಾಗಿ ಪರಿಗಣಿಸಿದಂತೆ ತೋರುತ್ತದೆ. ಇಮ್ರಾನ್‌ ಅವರಿಗೆ ಮುಂದಾಲೋಚನೆ ಇದ್ದಿದ್ದರೆ, ಯುದ್ಧದಿಂದ ಎರಡೂ ದೇಶಗಳಿಗೆ ಅಪಾರ ನಷ್ಟವಾಗುತ್ತದೆ ಎಂಬುದು ತಿಳಿಯದೇ ಇರುತ್ತಿರಲಿಲ್ಲ. ‘ಯುದ್ಧದಲ್ಲಿ ಗೆದ್ದವ ಸೋತಂತೆ, ಸೋತವ ಸತ್ತಂತೆ’ ಎಂಬುದನ್ನು ಅರಿತು, ಭಯೋತ್ಪಾದಕರಿಗೆ ಸಹಾಯಹಸ್ತ ನಿಲ್ಲಿಸಿ, ತಮ್ಮ ದೇಶದ ಅಭಿವೃದ್ಧಿಯ ಕಡೆ ಅವರು ಗಮನ ಹರಿಸಲಿ. ಹುಂಬತನ ಬೇಡ.

-ರಾಜಶೇಖರ ಎಸ್. ಗುಬ್ಬಿ, ಮನಗೂಳಿ, ಬಸವನಬಾಗೇವಾಡಿ

ಪ್ರತಿಕ್ರಿಯಿಸಿ (+)