ಕೃಷಿ ಕ್ಲಿನಿಕ್‌ಗಳನ್ನು ಡಿಪ್ಲೊಮಾ ಪಡೆದವರೂ ಆರಂಭಿಸಬಹುದಿತ್ತು. ಆ ಯೋಜನೆ ಹಳತು. 2012 ಮತ್ತು 2015ರಲ್ಲಿ ಪರಿಶೀಲಿಸಿದ ಬಳಿಕವೂ ಅದು ವೇಗ ಪಡೆದಿಲ್ಲ. ಈಗ ಮಾರಾಟಗಾರರು ಪ್ರಮಾಣಪತ್ರ ಪಡೆದ ಮೇಲೆ ಅಂಗಡಿಗೆ ಬೇಡಿಕೆ ಹೆಚ್ಚುತ್ತದೆ. ಆದರೆ ಅವರು ಉತ್ಪನ್ನಗಳ ಬಗೆಗೆ ಮಾಹಿತಿ ನೀಡಬಲ್ಲರಷ್ಟೆ. ಅದು ಸಮಗ್ರ, ಸಾಕ್ಷ್ಯಾಧಾರಿತ, ಪಕ್ಷಪಾತರಹಿತ ಜ್ಞಾನ ಆಗಿರಲಿಕ್ಕಿಲ್ಲ.