4

ಶ್ಲಾಘನೀಯ ಕಳಕಳಿ

Published:
Updated:

‘ನಮ್ಮ ಮೆಟ್ರೊ’ ರೈಲು ನಿಲ್ದಾಣ ನಿರ್ಮಾಣಕ್ಕೆ ಇನ್ಫೊಸಿಸ್ ಫೌಂಡೇಶನ್ ₹ 200 ಕೋಟಿ ದೇಣಿಗೆ ನೀಡಿರುವುದು ಶ್ಲಾಘನೀಯ. ಫೌಂಡೇಶನ್‌ ಮುಖ್ಯಸ್ಥೆ ಸುಧಾ ಮೂರ್ತಿ ಅವರ ಸಾಮಾಜಿಕ ಕಳಕಳಿ ಮೆಚ್ಚುವಂಥದ್ದು. ಕಾರ್ಪೊರೇಟ್ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆಯಲು ಈ ರೀತಿ ಸಹಾಯ ಮಾಡುವುದು ವಾಡಿಕೆಯಲ್ಲಿದ್ದರೂ ಕರ್ನಾಟಕ ಸರ್ಕಾರಕ್ಕೆ ಒಮ್ಮೆಲೇ ಇಷ್ಟು ದೊಡ್ಡ ಮೊತ್ತದ ಚೆಕ್ ನೀಡಿರುವುದು ಇದೇ ಮೊದಲು. ‘ಕೆರೆಯ ನೀರನು‌ ಕೆರೆಗೆ ಚೆಲ್ಲಿ’ ಎಂಬಂತೆ ಕಾರ್ಪೊರೇಟ್ ಕಂಪನಿಗಳು ತಾವು ಪಡೆದ ಲಾಭಾಂಶದಲ್ಲಿ ಒಂದಷ್ಟು ಪಾಲನ್ನು ಸಾಮಾಜಿಕ ಕೆಲಸಗಳಿಗೆ ಮೀಸಲಿಟ್ಟರೆ ಸರ್ವಜನರ ಕಲ್ಯಾಣ ಆಗುವುದು.

ಇದೇ ರೀತಿ ಉಳ್ಳವರು ಇಲ್ಲದವರ ಅಭಿವೃದ್ಧಿಗೆ ಕೈ ಜೋಡಿಸಿದರೆ ‘ಪ್ರಪಂಚದಲ್ಲಿ ಎಲ್ಲರೂ ಸಮಾನವಾಗಿ ಜೀವಿಸಬೇಕು’ ಎಂಬ ಕನಸು ನನಸಾದೀತು.

-ಸಿ.ಜಿ. ವೆಂಕಟೇಶ್ವರ, ಗೌರಿಬಿದನೂರು

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !