ಆತ್ಮವಿಮರ್ಶೆ ಅಗತ್ಯ!

7

ಆತ್ಮವಿಮರ್ಶೆ ಅಗತ್ಯ!

Published:
Updated:

ಶಾಸಕ ಸುರೇಶ್ ಕುಮಾರ್ ಅವರು ರಾಜಕೀಯದಲ್ಲಿ ಶುದ್ಧತೆ ಉಳಿಸಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ (ಪ್ರ.ವಾ. ಸಂದರ್ಶನ, ಜೂನ್‌ 13).

ಬೇರೆಯವರಿಗೆ ಹೋಲಿಸಿದರೆ ಸಂಭಾವಿತರಾಗಿರುವ ಇವರ ಬಗ್ಗೆಯೂ ಇತ್ತೀಚಿನ ಚುನಾವಣೆಯ ಸಂದರ್ಭದಲ್ಲಿ ಕೆಲವು ಆಪಾದನೆಗಳು ಕೇಳಿಬಂದಿದ್ದವು. ಅವುಗಳಿಗೆ ಸುರೇಶ್‌ ಸ್ಪಷ್ಟವಾಗಿ ಉತ್ತರಿಸಿದ್ದು ಕಂಡು ಬರಲಿಲ್ಲ.

ಯಡಿಯೂರಪ್ಪ ಅವರ ಮೇಲೆ ಗುರುತರ ಆರೋಪಗಳು ಬಂದಾಗ ಅವರನ್ನು ಒಂದು ಹಂತದವರೆಗೆ ಸುರೇಶ್‌ ಕುಮಾರ್‌ ಸಮರ್ಥಿಸಿಕೊಂಡಿರಲಿಲ್ಲವೇ? ಮೊದಲ ನಿಷ್ಠೆ ಯಾವುದಕ್ಕಿರಬೇಕು? ಪ್ರಾಮಾಣಿಕತೆಗೋ, ಪಕ್ಷಕ್ಕೋ? ಹೆಚ್ಚಿನ ಮಟ್ಟಿಗೆ ವಕ್ತಾರರಾಗಿಯೇ ಅವರನ್ನು ಬಳಸಲಾಗಿದೆ ಅಲ್ಲವೇ?

ತುರ್ತು ಪರಿಸ್ಥಿತಿ, ಸೆಂಟ್ರಲ್ ಜೈಲಿನ ವಾಸ ಮುಂತಾದವನ್ನು ನೆನಪಿಸಿಕೊಳ್ಳುವ ಸುರೇಶ್‌, ತಮ್ಮ ರಾಜಕೀಯ ಪಯಣ, ಮೃದುತನಗಳ ಬಗ್ಗೆ ಗಂಭೀರವಾಗಿ ಯೋಚಿಸುವುದು ಒಳ್ಳೆಯದು.

–ಎಚ್.ಎಸ್. ಮಂಜುನಾಥ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !