ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಭಾಷಾ ದಿನ: ಆಚರಣೆಗಷ್ಟೇ ಸೀಮಿತ

Last Updated 25 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಎಲ್ಲ ಶಾಲಾ– ಕಾಲೇಜುಗಳು ಫೆ. 21ರಂದು ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನು ಕಡ್ಡಾಯವಾಗಿ ಆಚರಿಸಿ ಅದರ ವರದಿಯನ್ನು ಒಪ್ಪಿಸುವಂತೆ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಆದರೆ ಅದು ಕೇವಲ ಆಚರಣೆಗೆ ಸೀಮಿತವಾದದ್ದು ವಿಷಾದಕರ ಸಂಗತಿ. ಮಾತೃಭಾಷಾ ದಿನಾಚರಣೆಗೆ ಕರೆ ಕೊಡುವ ಸರ್ಕಾರ, ಆಯಾ ರಾಜ್ಯದ ಆಡಳಿತ ಭಾಷೆ ಅಥವಾ ಪ್ರಾದೇಶಿಕ ಭಾಷೆಗಳ ಉಳಿವಿಗೆ ಕ್ರಮ ಕೈಗೊಳ್ಳುವಲ್ಲಿ ಆಸಕ್ತಿ ತೋರದೆ ಹಿಂದಿ ಭಾಷೆಯನ್ನು ಹೇರಲು ಹೆಚ್ಚು ಕಾತರವಾಗಿರುವುದು ಕಂಡುಬರುತ್ತದೆ.

ಕರ್ನಾಟಕದಲ್ಲಿ ಕನ್ನಡ ನುಡಿ ಅನೇಕ ಕಾರಣಗಳಿಂದಾಗಿ ಅವನತಿಯ ಹಾದಿ ಹಿಡಿದಿದೆ. ‘ಸಾಯುತಿದೆ ನಿಮ್ಮ ನುಡಿ ಓ ಕನ್ನಡದ ಕಂದಗಳಿರಾ’, ‘ಹೊರ ನುಡಿಯ ಹೊರೆಯಿಂದ ಕುಸಿದು ಕುಗ್ಗಿ...’ ಎಂಬ ಕುವೆಂಪು ಅವರ ಪದಗಳು ಇಂದಿಗೂ ಪ್ರಸ್ತುತ ಎಂಬಂತಿವೆ. ಇಂಗ್ಲಿಷ್ ಮಾಧ್ಯಮ ಶಾಲೆಗಳ ವಿರುದ್ಧದ ಸ್ಪರ್ಧೆಯಲ್ಲಿ ಕನ್ನಡ ಶಾಲೆಗಳುಮೂಲೆಗುಂಪಾಗಿರುವಾಗ, ಹೊರ ನುಡಿಯ ಹೊರೆ ಹೇರುವ ತವಕ ಸಹಿಸಲು ಅಸಾಧ್ಯ.

ಕೃಷ್ಣಮೂರ್ತಿ ಎಚ್.,ಲಕ್ಕಂಪುರ, ಜಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT