ಐಪಿಎಲ್‌ನಂತೆ ಎಂಎಲ್‌ಎಎಲ್‌ ಇರಲಿ!

7

ಐಪಿಎಲ್‌ನಂತೆ ಎಂಎಲ್‌ಎಎಲ್‌ ಇರಲಿ!

Published:
Updated:

ಪ್ರತಿವರ್ಷ ಐಪಿಎಲ್ ಆರಂಭಕ್ಕೂ ಮುನ್ನ ಆಟಗಾರರನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಿ, ಅವರ ಸಾಮರ್ಥ್ಯ ಮತ್ತು ಪ್ರಸ್ತುತ ಪ್ರದರ್ಶನದ ಆಧಾರದ ಮೆಲೆ ಕೋಟ್ಯಂತರ ರೂಪಾಯಿ ಕೊಟ್ಟು ಅವರನ್ನು ಖರೀದಿಸಿ ತಂಡ ಕಟ್ಟಲಾಗುತ್ತದೆ.

ಅದೇ ರೀತಿ ನಮ್ಮ ರಾಜ್ಯದ 224 ಶಾಸಕರನ್ನೂ ಹರಾಜು ಪ್ರಕ್ರಿಯೆಗೆ ಒಳಪಡಿಸಿ, ಅವರನ್ನು ಖರೀದಿಸಿ ಸರ್ಕಾರ ರಚನೆ ಮಾಡಿ, ಅದಕ್ಕೆ ಎಂಎಲ್‌ಎಎಲ್‌ (Member of Legislative Assembly League) ಎಂದು ಹೆಸರಿಟ್ಟು ಅಧಿಕಾರ ನಡೆಸಬಹುದಲ್ಲವೇ?

ಏಕೆಂದರೆ, ಶಾಸಕರ ‘ವ್ಯಾಪಾರ’ ಈಗ ಗುಟ್ಟಾಗೇನೂ ಉಳಿದಿಲ್ಲ. ಇಂತಹ ಬೆಳವಣಿಗೆಗಳಿಂದ ಭಾರತೀಯ ಪ್ರಜಾಪ್ರಭುತ್ವ ಜಾಗತಿಕ ಮಟ್ಟದಲ್ಲಿ ಅವಮಾನಕ್ಕೆ ಒಳಗಾಗುತ್ತಿದೆ. ಹೀಗಿರುವಾಗ, ಅಧಿಕೃತವಾಗಿಯೇ ಶಾಸಕರ ಹರಾಜು ಪ್ರಕ್ರಿಯೆ ನಡೆಯುವುದು ಒಳ್ಳೆಯದು.

ಅಶೋಕ ಅಂಬಾಜಿ, ಸುಟ್ಟಟ್ಟಿ, ಅಥಣಿ

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !