ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಥ ಪದ ಬಳಕೆ ತರವೇ?

Last Updated 31 ಮಾರ್ಚ್ 2021, 21:40 IST
ಅಕ್ಷರ ಗಾತ್ರ

ರಾಜಕೀಯ ಜಂಜಾಟದಲ್ಲಿ ಸಿಲುಕಿರುವ ಒಬ್ಬ ಹೆಣ್ಣುಮಗಳ ಬಗ್ಗೆ ಕೆಲವು ಮಾಧ್ಯಮಗಳು ಸುದ್ದಿ ಬಿತ್ತರಿಸುತ್ತಿರುವ ಪರಿ ಬಹಳ ಬೇಸರ ತರಿಸುವಂತಿದೆ. ಆಕೆಯ ಹೆಸರನ್ನು ಬಹಿರಂಗಪಡಿಸದೇ ಇರುವುದು ಸರಿ. ಆದರೆ, ಆಕೆಯನ್ನು ‘ಸಿ.ಡಿ. ಲೇಡಿ’ ಎಂದು ಸಂಬೋಧಿಸುತ್ತಿರುವುದು ಎಷ್ಟು ನ್ಯಾಯಸಮ್ಮತ ಎಂದು ಕೇಳಬೇಕಿದೆ. ಸಂವೇದನೆಯೇ ಇಲ್ಲದಿದ್ದರೆ ಹೇಗೆ?

ಈ ಹೆಣ್ಣುಮಗಳ ಕುರಿತು ಅವಹೇಳನಕಾರಿಯಾಗಿ ಮಾತನಾಡುವ ಹಕ್ಕನ್ನು ಇವರಿಗೆ ನೀಡಿದವರು ಯಾರು? ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯಲು ನಮ್ಮಿಂದ ಇನ್ನೂ ಆಗಿಲ್ಲ. ಅದರೊಂದಿಗೆ ಇಂತಹ ಮಾತುಗಳು ಬೇರೆ! ಇವು ಕೂಡ ಅಷ್ಟೇ ಪರಿಣಾಮ ಬೀರುತ್ತವೆ ಎಂಬುದನ್ನು ಅರಿಯಬೇಕು. ಮಹಿಳೆಯರ ಕುರಿತು ಸಮಾಜದ ಮನೋಭಾವ ಬದಲಾಗಬೇಕಿದೆ. ಈ ದಿಸೆಯಲ್ಲಿ ಅರಿವು ಮೂಡಿಸುವ ಜವಾಬ್ದಾರಿ ಹೊತ್ತಿರುವವರೇ ಹೀಗೆ ಮಾತನಾಡಿದರೆ, ಇನ್ನು ಜನಸಾಮಾನ್ಯರು ಹೇಗೆ ವರ್ತಿಸಿಯಾರು? ಇಂತಹ ಪದ ಬಳಕೆಯನ್ನು ಇನ್ನಾದರೂ ನಿಲ್ಲಿಸಲಿ.

ಗಿರಿಜಾ ಕೆ.ಎಸ್., ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT