ಭಾನುವಾರ, ಜೂನ್ 26, 2022
21 °C

ವಾಚಕರ ವಾಣಿ | ಸೀತಾರಾಮನ್ ಅವರಿಗೆ ಕರ್ನಾಟಕವನ್ನು ಪ್ರತಿನಿಧಿಸುವ ನೈತಿಕತೆ ಇದೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದ ಮತ್ತೊಮ್ಮೆ ರಾಜ್ಯಸಭೆಗೆ ಆಯ್ಕೆಯನ್ನು ಬಯಸಿದ್ದಾರೆ. ಆದರೆ ಕರ್ನಾಟಕದಿಂದ ಆಯ್ಕೆಯಾಗಲು ಇವರಿಗೆ ಯಾವ ನೈತಿಕತೆಯಿದೆ ಎಂಬುದು ನಾವು ಕೇಳಬೇಕಾದ ಪ್ರಶ್ನೆ.

15ನೆಯ ಹಣಕಾಸು ಆಯೋಗವು ಕರ್ನಾಟಕಕ್ಕೆ 2020-21ನೇ ಸಾಲಿಗೆ ವಿಶೇಷ ಅನುದಾನ ₹ 5,495 ಕೋಟಿ ಶಿಫಾರಸು ಮಾಡಿತ್ತು. ಕೇಂದ್ರ ಸರ್ಕಾರವು ಇದನ್ನು ನೀಡಲಿಲ್ಲ. ಒಕ್ಕೂಟ ತೆರಿಗೆ ರಾಶಿಯಲ್ಲಿ ರಾಜ್ಯಕ್ಕೆ 2019-20ರಲ್ಲಿ ₹ 30,919 ಕೋಟಿ ದೊರೆತಿತ್ತು. ಇದು 2022-23ರಲ್ಲಿ ₹ 29,783 ಕೋಟಿಗಿಳಿದಿದೆ. ಇದೇ ರೀತಿ 2019- 20ರಲ್ಲಿ ಒಕ್ಕೂಟ ಸರ್ಕಾರವು ರಾಜ್ಯಕ್ಕೆ ನೀಡಿದ್ದ ಸಹಾಯಾನುದಾನ ₹ 19,982 ಕೋಟಿ. ಇದು 2022-23ರಲ್ಲಿ ₹ 17,281 ಕೋಟಿಗಿಳಿದಿದೆ.

ಇದೆಲ್ಲವೂ ಕರ್ನಾಟಕವನ್ನು ಪ್ರತಿನಿಧಿಸುವ ನಿರ್ಮಲಾ ಅವರು ಹಣಕಾಸು ಸಚಿವೆಯಾಗಿರುವ ಅವಧಿಯಲ್ಲಿ ನಡೆದ ಅನ್ಯಾಯ. ಇವರನ್ನು ಕರ್ನಾಟಕವು ಮತ್ತೆ ರಾಜ್ಯಸಭೆಗೆ ಆಯ್ಕೆ ಮಾಡಬೇಕೆ? ಈ ಬಗ್ಗೆ ನಮ್ಮ ಶಾಸಕರು ವಿವೇಚನಾಶೀಲರಾಗಿ ತೀರ್ಮಾನ ತೆಗೆದುಕೊಳ್ಳಬೇಕಾದ ಸಮಯ ಬಂದಿದೆ.
-ಟಿ.ಆರ್.ಚಂದ್ರಶೇಖರ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು