ಬುಧವಾರ, ಫೆಬ್ರವರಿ 26, 2020
19 °C

ಇಷ್ಟೊಂದು ಹೆಚ್ಚಳ ಅನಿವಾರ್ಯವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಹಾಲು ಮಹಾಮಂಡಳವು ಹಾಲಿನ ಬೆಲೆಯನ್ನು ಇತ್ತೀಚೆಗೆ ಪರಿಷ್ಕರಿಸಿದೆ. ತರಾವರಿ ಮಾದರಿಯ ಹಾಲು ಹಾಗೂ ಮೊಸರು ಸೇರಿದಂತೆ ಒಂದು ಲೀಟರಿಗೆ ಎರಡು ರೂಪಾಯಿಯನ್ನು ಏರಿಸಲಾಗಿದೆ. ಇದನ್ನೇ ಆಧಾರವಾಗಿ ಇಟ್ಟುಕೊಂಡು ಹೋಟೆಲುಗಳು ಸಹ  ಕಾಫಿ, ಚಹಾ ಅಷ್ಟೇ ಅಲ್ಲದೆ ತಿನಿಸುಗಳ ದರಗಳನ್ನೂ ಏರಿಸಿವೆ.

ಕಾಫಿ ಮತ್ತು ಚಹಾದ ಬೆಲೆಯನ್ನು ಒಂದು ಕಪ್ಪಿಗೆ ಎರಡು ರೂಪಾಯಿಯಷ್ಟು ಏರಿಸಲಾಗಿದೆ. ಒಂದು ಲೀಟರ್ ಹಾಲಿಗೆ ಎರಡು ರೂಪಾಯಿ ಏರಿಕೆಯಾದರೆ, ಒಂದು ಕಾಫಿಗೂ ಎರಡು ರೂಪಾಯಿ ಏರಿಸುವುದು ಸಮಂಜಸವೇ? ಒಂದು ಕಾಫಿಗೆ ಒಂದು ಲೀಟರ್ ಹಾಲು ಬಳಸುತ್ತಾರೆಯೇ? ಹಾಲಿನ ಬೆಲೆ ಏರಿಕೆಯಾದರೆ ತಿನಿಸುಗಳ ಬೆಲೆಯನ್ನೂ ಏರಿಸಬೇಕೇಕೆ? ಹೋಟೆಲುಗಳವರು ಕಾಫಿಗೆ ಕಡಿಮೆ ದರ ನಿಗದಿಪಡಿಸಲಿ. ಉತ್ಸಾಹ ತುಂಬುವ ಪಾನೀಯವು ಬಡವರ ಕೈಗೆಟುಕುವಂತೆ ಇರಲಿ. ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾದರೂ ಚಿಂತೆಯಿಲ್ಲ. ಈ ಕುರಿತು ಹೋಟೆಲ್ ಸಂಘಗಳವರು ಒಂದು ನಿರ್ಧಾರಕ್ಕೆ ಬರಲಿ.

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)