ಮಂಗಳವಾರ, ನವೆಂಬರ್ 12, 2019
27 °C

ಅಕ್ರಮ ಗಳಿಕೆಯನ್ನು ಪತ್ತೆ ಹಚ್ಚುವುದು ತಪ್ಪೇ?

Published:
Updated:

ಐ.ಟಿ. ದಾಳಿ ಎಂದರೆ ಯಾಕಿಷ್ಟು ಭಯ? ಯಾವುದೇ ಒಬ್ಬ ರಾಜಕಾರಣಿಯ ಮನೆ ಮೇಲೆ ಐ.ಟಿ. ದಾಳಿಯಾದರೆ ಸಂಬಂಧಪಟ್ಟ ಪಕ್ಷದವರು ಬೊಬ್ಬೆ ಹೊಡೆಯುತ್ತಾರೆ. ಹಾಗಾದರೆ ಐ.ಟಿ. ದಾಳಿ ಮಾಡುವುದು ತಪ್ಪೇ? ಭ್ರಷ್ಟರನ್ನು, ಅಕ್ರಮವಾಗಿ ಆಸ್ತಿ ಸಂಪಾದಿಸಿದವರನ್ನು ಪತ್ತೆಹಚ್ಚುವುದು ಬೇಡವೇ? ಭ್ರಷ್ಟಾಚಾರಿಗಳನ್ನು ಹಾಗೆಯೇ ಬಿಡಬೇಕೇ?

ಹಣ, ಆಸ್ತಿಪಾಸ್ತಿ ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಸರಿಯಾಗಿದ್ದರೆ ಯಾರೂ ಯಾರಿಗೂ ಹೆದರ ಬೇಕಾದ ಅವಶ್ಯಕತೆ ಇರದು. ಯಾರೇ ಆಗಿರಲಿ, ಯಾವುದೇ ಪಕ್ಷದವರಾಗಿರಲಿ ಕಾನೂನನ್ನು ಎಲ್ಲರೂ ಗೌರವಿಸಬೇಕು. ಐ.ಟಿ., ಇ.ಡಿ. ದಾಳಿ ಪ್ರತಿಭಟಿಸಿ ಬೀದಿಗಿಳಿದು  ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡುವುದು, ಬಂದ್‌ಗೆ ಕರೆ ನೀಡಿ ಜನರಿಗೆ ತೊಂದರೆ ಕೊಡುವುದು ಎಷ್ಟು ಸರಿ? ಜನ ಎಲ್ಲಿಯವರೆಗೆ ಪ್ರಜ್ಞಾವಂತರಾಗುವುದಿಲ್ಲವೋ ಅಲ್ಲಿಯವರೆಗೂ ರಾಜಕೀಯ ವ್ಯವಸ್ಥೆ ಸರಿಯಾಗುವುದಿಲ್ಲ.

- ಮುರುಗೇಶ ಡಿ., ದಾವಣಗೆರೆ
 

ಪ್ರತಿಕ್ರಿಯಿಸಿ (+)