ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲದುರ್ಗ ತಾಣ ಸಂರಕ್ಷಿಸಿ

ಅಕ್ಷರ ಗಾತ್ರ

ಮೊನ್ನೆ ಜಲದುರ್ಗಕ್ಕೆ ಹೋಗಿದ್ದೆ. ಜಲದುರ್ಗದ ಸುತ್ತ ಕೃಷ್ಣಾ ನದಿ ಆವರಿಸಿಕೊಂಡಿದೆ. ಏಳು ಸುತ್ತಿನ ಕೋಟೆಯನ್ನೂ ಹೊಂದಿದೆ. ದೇವಗಿರಿಯ ಯಾದವರು ಆಡಳಿತವನ್ನು ಆರಂಭಿಸಿದ ಈ ತಾಣದಲ್ಲಿ ನಿರ್ಮಿಸಲಾಗಿದ್ದ ಹತ್ತಾರು ಸ್ಮಾರಕಗಳು ಈಗ ಅವಸಾನದ ಅಂಚಿನಲ್ಲಿವೆ. ಅಲ್ಲಿನ ಅಪರೂಪದ ಕೋಟೆ, ದೇವಾಲಯಗಳು, ಶಾಸನಗಳು, ಶಿಲ್ಪಗಳು, ಬಾವಿಗಳು, ಸಮಾಧಿಗಳು, ಮಸೀದಿಗಳು, ತೊಟ್ಟಿಲು ಬುರುಜುಗಳು, ಕಾವಲು ಗೋಪುರಗಳೆಲ್ಲವೂ ಹಾಳಾಗುತ್ತಿರುವುದು ವಿಷಾದಕರ. ಈ ಬಗ್ಗೆ ಸಂಶೋಧಕರು, ಸಾಹಿತಿಗಳು, ಸಂಘ-ಸಂಸ್ಥೆಗಳು, ಇತಿಹಾಸ ಆಸಕ್ತರು ಧ್ವನಿ ಎತ್ತಬೇಕು. ಇವುಗಳ ಸಂರಕ್ಷಣೆಗೆ ಒತ್ತಡ ಹೇರಬೇಕು.

- ಡಾ. ಶಿವರಾಜ ಯತಗಲ್,ಲಿಂಗಸುಗೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT