ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರೂ ಬಿಳಲಿಗೆ ಜೋತು ಬಿದ್ದವರು ಯಾರು?

Last Updated 12 ನವೆಂಬರ್ 2018, 20:15 IST
ಅಕ್ಷರ ಗಾತ್ರ

‘ನೆಹರೂ ಬಿಳಲಿಗೆ ಜೋತು ಬಿದ್ದವರು’ (ಸ್ಪಂದನ, ಪ್ರ.ವಾ., ನ. 9) ಎಂಬ ಲೇಖನದಲ್ಲಿ ರೇಣುಕಾ ನಿಡಗುಂದಿಯವರು, ‘ದೆಹಲಿಯ ತೀನ್‌ಮೂರ್ತಿ ಭವನದಲ್ಲಿರುವ ನೆಹರೂ ಸ್ಮಾರಕ ವಸ್ತು ಗ್ರಂಥಾಲಯ ಮತ್ತು ಗ್ರಂಥಾಲಯವನ್ನು ಈಗಿನ ಸರ್ಕಾರವು ದೇಶದ ಎಲ್ಲಾ ಮಾಜಿ ಪ್ರಧಾನಿಗಳ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲು ನೀಲನಕ್ಷೆ ಸಿದ್ಧಪಡಿಸಿದೆ’ ಎಂದು ಹೇಳಿದ್ದಾರೆ. ಇದು ನಿಜವಲ್ಲ ಎಂದು ಸರ್ಕಾರ ಹೇಳಿಕೊಂಡಿದೆ.

ಇತರೆಲ್ಲಾ ಮಾಜಿ ಪ್ರಧಾನಿಗಳ ಬಗೆಗಿನ ವಸ್ತುಸಂಗ್ರಹಾಲಯಕ್ಕಾಗಿ ತೀನ್‌ಮೂರ್ತಿ ಭವನದ ಹಿಂದೆ ಇರುವ ಹಲವು ಎಕರೆಗಳಷ್ಟು ಖಾಲಿ ಜಾಗದಲ್ಲಿ ಒಂದು ಹೊಸ ಕಟ್ಟಡವನ್ನು ಕಟ್ಟಲಾಗುವುದು. ಹೀಗಾಗಿ ನೆಹರೂ ವಸ್ತುಸಂಗ್ರಹಾಲಯ ಈಗಿರುವಂತೆಯೇ ಇರುತ್ತದೆ. ಮಾತೆತ್ತಿದರೆ, ‘ಸಂಘ ಪರಿವಾರದವರು ಬಹುತ್ವದ ವಿರೋಧಿಗಳು’ ಎಂದು ಆಪಾದಿಸುವ ಪ್ರಗತಿಪರರು ಈಗ ಅವರ ಸರ್ಕಾರ ನಮ್ಮ ಎಲ್ಲಾ ಮಾಜಿ ಪ್ರಧಾನಿಗಳ ಬಗ್ಗೆ ಜನರಿಗೆ ಮಾಹಿತಿ ಒದಗಿಸುವ, ಬಹುತ್ವವನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಲು ಮುಂದಾಗಿರುವಾಗ ಅದನ್ನು ಯಾಕೆ ವಿರೋಧಿಸುತ್ತಿದ್ದಾರೆ ಎಂಬುದು ತಿಳಿಯದಾಗಿದೆ.

–ಗಿರೀಶ ವಿ. ವಾಘ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT