ಶನಿವಾರ, ನವೆಂಬರ್ 23, 2019
17 °C

ನ್ಯಾಯಮೂರ್ತಿ ತಮ್ಮ ಸ್ಥಾನಕ್ಕೆ ರಾಜೀನಾಮೆ: ಒಪ್ಪಲಾಗದ ನಡೆ

Published:
Updated:

ಮೇಘಾಲಯ ಹೈಕೋರ್ಟ್‌ಗೆ ತಮಗಾಗಿದ್ದ ವರ್ಗಾವಣೆಯನ್ನು ರದ್ದುಪಡಿಸಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ್‌ ಕೊಲಿಜಿಯಂ ತಿರಸ್ಕರಿಸಿದ ಬಳಿಕ, ಮದ್ರಾಸ್ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ತಿಳಿದು (ಪ್ರ.ವಾ., ಸೆ. 8) ಕಳವಳವಾಯಿತು. ಮುಖ್ಯ ನ್ಯಾಯಮೂರ್ತಿಯೇ ವರ್ಗಾವಣೆಗೊಂಡ ಸ್ಥಳಕ್ಕೆ ಹೋಗದೆ, ಅದನ್ನು ವಿರೋಧಿಸಿ ರಾಜೀನಾಮೆ ನೀಡಿದ್ದು ಎಷ್ಟರಮಟ್ಟಿಗೆ ಸರಿ? ಅಧಿಕಾರಿಗಳು, ನೌಕರರು ವ್ಯವಸ್ಥೆ ವಿರುದ್ಧ ತಿರುಗಿ ಬೀಳಲು ಈ ಮೂಲಕ ಪ್ರಚೋದಿಸಿದಂತೆ ಆಗುವುದಿಲ್ಲವೇ? ಸಮಾಜ ಹಾಗೂ ಕಾರ್ಯಾಂಗಕ್ಕೆ ಮಾರ್ಗದರ್ಶನ ನೀಡಿ, ನ್ಯಾಯ ದೊರಕಿಸಿಕೊಡಬೇಕಾದ ಮುಖ್ಯ ನ್ಯಾಯಮೂರ್ತಿಯವರ ಈ ನಡೆ ಒಪ್ಪುವಂತಹದ್ದಲ್ಲ.

-ಕೊಂಪಿ ಗುರುಬಸಪ್ಪ, ಬೆಂಗಳೂರು

ಪ್ರತಿಕ್ರಿಯಿಸಿ (+)