ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಟ್ಟ ಸಂದೇಶ ರವಾನೆ

Last Updated 10 ಫೆಬ್ರುವರಿ 2021, 20:22 IST
ಅಕ್ಷರ ಗಾತ್ರ

ಲೇಖಕ ಭಗವಾನ್ ಅವರ ಮುಖಕ್ಕೆ ಮಸಿ ಬಳಿದ ವಕೀಲೆಯ ಕೃತ್ಯ ತಮ್ಮ ವಕೀಲಿ ವೃತ್ತಿಗೇ ಕಳಂಕ ತರುವಂತಿತ್ತು. ಇದರ ತರುವಾಯ, ಮಂಗಳೂರಿನ ಬಿಜೆಪಿ ಮುಖಂಡರೊಬ್ಬರು ಅವಹೇಳನಕಾರಿ ಹೇಳಿಕೆಯೊಂದನ್ನು ನೀಡಿದ್ದು, ಅವರ ಮುಖಕ್ಕೆ ಮಸಿ ಬಳಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಸ್ಥಳೀಯ ಕಾಂಗ್ರೆಸ್ ನಾಯಕಿಯೊಬ್ಬರು ಫೇಸ್‌ಬುಕ್‌ನಲ್ಲಿ ಘೋಷಿಸಿದ್ದಾರೆ. ಇದನ್ನೆಲ್ಲ ನೋಡಿದರೆ, ವಿದ್ಯಾವಂತ ನಾಗರಿಕರು ಎನಿಸಿಕೊಂಡವರೇ ಅನಾಗರಿಕವಾದ ರೀತಿಯಲ್ಲಿ ಸಮಾಜಕ್ಕೆ ಕೆಟ್ಟ ಸಂದೇಶಗಳನ್ನು ನೀಡುತ್ತಿದ್ದಾರೆ ಎನಿಸುತ್ತದೆ.

ಹಿಂದೆಯೂ ಕೆಲವು ಮುಖಂಡರಿಗೆ ಮಸಿ ಬಳಿದ ಕೃತ್ಯಗಳು ನಡೆದಿದ್ದವು. ರಿಯಾಲಿಟಿ ಶೋ ‘ಬಿಗ್ ಬಾಸ್’ ಸರಣಿಯಲ್ಲೂ ಸ್ಪರ್ಧಿಗಳ ನಕಾರಾತ್ಮಕ ಅಂಶಗಳನ್ನು ತಿಳಿಸಿ, ಅಂತಹವರ ಮುಖಕ್ಕೆ ಮಸಿ ಬಳಿಯಲಾಗುತ್ತಿತ್ತು. ಇದು ಕೂಡ ನಕಾರಾತ್ಮಕ ಚಿಂತನೆಗಳನ್ನು ಬೆಂಬಲಿಸುವ ಒಂದು ಕೆಟ್ಟ ಪರಿಕಲ್ಪನೆಯಾಗಿದೆ. ಮಸಿ ಬಳಿಯುವ ದುಷ್ಕೃತ್ಯದ ವಿರುದ್ಧ ಕಠಿಣ ಕಾನೂನು ಕ್ರಮದ ಅವಶ್ಯಕತೆ ಇದೆ.⇒

ಟಿ.ಎಸ್.ಪ್ರತಿಭಾ,ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT