ಸೋಮವಾರ, ಸೆಪ್ಟೆಂಬರ್ 23, 2019
22 °C

ಕನ್ನಡೇತರರ ಸಂಖ್ಯೆ ವೃದ್ಧಿ; ಕನ್ನಡದ ಮಕ್ಕಳ ಬದುಕು ಹಸನಾಗಲಿ

Published:
Updated:

ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಪ್ರಾರಂಭವಾದ ಮೇಲೆ, ಮಾಲ್‍ಗಳು ತಲೆಯೆತ್ತಿದ ಮೇಲೆ ಹಾಗೂ ಮೆಟ್ರೊ ಸಂಚಾರ ಪ್ರಾರಂಭವಾದ ಮೇಲೆ ಕನ್ನಡೇತರರ ಸಂಖ್ಯೆ ವೃದ್ಧಿಸುತ್ತಾ ಸಾಗಿದೆ. ಕನ್ನಡಿಗರ ಹೋರಾಟ ಕೇವಲ ಪರಭಾಷೆಯ ಕಟೌಟ್ ತೆರವುಗೊಳಿಸುವುದಕ್ಕೆ ಸೀಮಿತವಾಗಬಾರದು. ಕನ್ನಡ ನಾಡಿನಲ್ಲಿಯೇ ಕನ್ನಡದ ಮಕ್ಕಳು ಅವಕಾಶ ವಂಚಿತರಾಗುತ್ತಿರುವುದನ್ನು ಗಮನಕ್ಕೆ ತಂದುಕೊಂಡು, ಕನ್ನಡದ ಮಕ್ಕಳ ಬದುಕನ್ನು ಹಸನು ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ.

ಸರೋಜಿನಿ ಮಹಿಷಿ ವರದಿಯನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರುವಂತೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಬೆಂಗಳೂರಿನಲ್ಲಿ ಅಷ್ಟೇ ಕೇಂದ್ರೀಕರಿಸದೆ, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸುವಂತೆ ಸರ್ಕಾರವನ್ನು ಒತ್ತಾಯಿಸುವುದು ಕನ್ನಡ ಹೋರಾಟಗಾರರ ಮುಖ್ಯ ಕೆಲಸ ವಾಗಬೇಕು. ಆಗಮಾತ್ರ ಪರಭಾಷಿಕರ ಹಾವಳಿ ಕಡಿಮೆಯಾಗಿ, ಕನ್ನಡಿಗರ ಬದುಕು ಹಸನಾದೀತು.

ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

Post Comments (+)