ಗುರುವಾರ , ಸೆಪ್ಟೆಂಬರ್ 23, 2021
25 °C

ಪದ ಬಳಕೆ: ಚರ್ಚೆ ಅಪೇಕ್ಷಣೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಅದರ ಬಳಕೆಯ ಸಂಗತಿಗಳು ಸಹ ನಿರ್ಧಾರಕ ಅಂಶಗಳಾಗಿರು ತ್ತವೆ. ಸರ್ಕಾರಿ ಕಚೇರಿ, ಕಟ್ಟಡ, ಆಡಳಿತಾತ್ಮಕ ಸಂಸ್ಥೆಗಳ ಹೆಸರಿನಲ್ಲಿ ಅನೇಕ ಇಂಗ್ಲಿಷ್‌ ಹಾಗೂ ಅನ್ಯದೇಶಿ ಪದಗಳು ಬಳಕೆಯಾಗುತ್ತಾ ಬಂದಿರುವುದು ಸಾಮಾನ್ಯ ಎಂಬಂತಾಗಿದೆ.

ಕನ್ನಡ ಭಾಷೆ ಬೆಳವಣಿಗೆಯ ದೃಷ್ಟಿ ಯಿಂದ ಇಂತಹ ನಡೆ ಸೂಕ್ತ ಎನಿಸುವುದಿಲ್ಲ. ಮಿನಿ ವಿಧಾನಸೌಧದ ಹೆಸರಿನಲ್ಲಿ ‘ಮಿನಿ’ ಎಂಬ ಇಂಗ್ಲಿಷ್‌ ಪದಕ್ಕೆ ಸಾಹಿತ್ಯ ವಲಯದಿಂದ ಆಕ್ಷೇಪ ವ್ಯಕ್ತವಾಗಿರುವ ಪ್ರಯುಕ್ತ ಈ ಬಗ್ಗೆ ಸರ್ಕಾರ ಶೀಘ್ರದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದು ಕಂದಾಯ ಸಚಿವರು ಹೇಳಿರುವುದು ಸ್ವಾಗತಾರ್ಹ ನಡೆ.

ಬಹುಜನರಿಗೆ ಒಪ್ಪಿಗೆಯಾಗುವಂತಹ ಕನ್ನಡದ ಹೆಸರನ್ನು ಇಟ್ಟು ನೆಲದ ಭಾಷೆಯ ಬಲವರ್ಧನೆಗೆ ನೆರವಾಗಬೇಕಿದೆ.

ಆದಪ್ಪ ಮಲ್ಲಪ್ಪ ಗೊರಚಿಕ್ಕನವರ, ಕೂಡಲಸಂಗಮ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು