ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಭಾಷಾ ಪ್ರೀತಿ ಅನನ್ಯ

Last Updated 12 ಜನವರಿ 2023, 19:31 IST
ಅಕ್ಷರ ಗಾತ್ರ

ಕನ್ನಡ ಭಾಷಾ ಅಭಿಮಾನಿಗಳ ಬಗೆಗೆ ಕೆ.ವಿ.ವಾಸು ಅವರು ಬರೆದಿರುವ ಪತ್ರ (ವಾ.ವಾ., ಜ. 11) ಓದಿದಾಗ, ಕನ್ನಡಕ್ಕೆ ಸಂಬಂಧಿಸಿದಂತೆ ನನ್ನ ಅನುಭವವೊಂದು ನೆನಪಾಯಿತು. 1990-93ರಲ್ಲಿ ಬ್ಯಾಂಕ್ ಅಧಿಕಾರಿ ಆಗಿದ್ದಾಗ ಹಂಪಿಯಿಂದ ಪಂಜಾಬಿನ ಪಟಿಯಾಲಕ್ಕೆ ನನಗೆ ವರ್ಗಾವಣೆಯಾಗಿತ್ತು. ಅಲ್ಲಿಗೆ ಹೋಗುವಾಗ ನನ್ನ ಹೆಸರಿನ ನಾಮಫಲಕವನ್ನು (ಇಂಗ್ಲಿಷ್‌, ಕನ್ನಡ ಹಾಗೂ ಹಿಂದಿ ಭಾಷೆ) ಸಹ ತೆಗೆದುಕೊಂಡು ಹೋಗಿದ್ದನ್ನು ನನ್ನ ಮೇಜಿನ ಮೇಲೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೆ.

ಭಾರತಾಂಬೆಯ ಸೇವೆಗೆಂದು ಸೇನೆಗೆ ಸೇರಿದ್ದ ಕರ್ನಾಟಕದ ಅನೇಕ ಯುವಕರು ಊರಿನಲ್ಲಿದ್ದ ಪೋಷಕರಿಗೆ ಹಣ ಕಳುಹಿಸಲು ಡಿಮಾಂಡ್‌ ಡ್ರಾಫ್ಟ್ ಪಡೆಯುವುದಕ್ಕಾಗಿ ಬ್ಯಾಂಕಿಗೆ ಬರುತ್ತಿದ್ದರು. ಆಗ, ಕನ್ನಡದಲ್ಲಿದ್ದ ನನ್ನ ನಾಮಫಲಕವನ್ನು ಗಮನಿಸಿ, ನನ್ನ ಹತ್ತಿರ ಬಂದು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಡಿಮಾಂಡ್ ಡ್ರಾಫ್ಟ್ ಅನ್ನು ನಾನು ಕನ್ನಡದಲ್ಲಿ ಬರೆದುಕೊಟ್ಟಾಗ ಅವರಿಗೆ ಖುಷಿಯೋ ಖುಷಿ... ಇದೇ ಅಲ್ಲವೇ ಕನ್ನಡಿಗರಿಗೆ ಕನ್ನಡ ಭಾಷೆಯ ಬಗ್ಗೆ ಇರುವ ಪ್ರೀತಿ, ವಿಶ್ವಾಸ.

-ರಘುನಾಥರಾವ್ ತಾಪ್ಸೆ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT