ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚ್ಚಾರಣೆಯಲ್ಲಿ ತಪ್ಪಲ್ಲ

Last Updated 24 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

‘ಆಸನವನ್ನು ಹಾಸನವೆಂದೂ ಅಥವಾ ಹಾಸನವನ್ನು ಆಸನವೆಂದೂ ಭಾಷೆ ಎನ್ನುವುದನ್ನು ಬಾಸೆ ಎಂದೂ ಬಡವ ಎಂಬುದನ್ನು ಭಡವ ಎಂದೂ ಬರೆದರೆ ಅಥವಾ ಉಚ್ಚರಿಸಿದರೆ ಏನೇನು ವೈಪರೀತ್ಯಗಳಾಗಬಹುದು ಎಂಬುದನ್ನು ವಿವರಿಸಬೇಕಾಗಿಲ್ಲ’ ಎಂಬ ವಿವರಣೆಯಲ್ಲಿ (ವಾ.ವಾ., ಡಿ. 24) ಇರುವಂತೆ ‘ಆಸನ/ಬಾಸೆ/ಭಡವ’ ಎಂಬ ಪದರೂಪಗಳು ಬರವಣಿಗೆಯಲ್ಲಿ ತಪ್ಪಾಗುತ್ತವೆಯೇ ಹೊರತು, ಉಚ್ಚಾರಣೆಯಲ್ಲಲ್ಲ.

ಏಕೆಂದರೆ ಕನ್ನಡ ನುಡಿ ಸಮುದಾಯದ ಪ್ರಾದೇಶಿಕ ಹಾಗೂ ಸಾಮಾಜಿಕ ಉಪಭಾಷೆಗಳ ಮಾತುಕತೆಗಳಲ್ಲಿ ‘ಅ/ಹ; ಷ/ಸ; ಬ/ಭ’ ಎಂಬ ಮಾತಿನ ಧ್ವನಿಗಳು ಒಂದರ ನೆಲೆಯಲ್ಲಿ ಮತ್ತೊಂದು ಬಳಕೆಗೊಳ್ಳುತ್ತಿರುತ್ತವೆ. ‘ಈಗ ತಾನೆ ನಾನು ಆಸನದಿಂದ ಬಂದೆ’ ಎಂಬ ಮಾತನ್ನು ಒಬ್ಬರು ಮತ್ತೊಬ್ಬರಿಗೆ ಹೇಳಿದಾಗ ಯಾವುದೇ ಗೊಂದಲವಿಲ್ಲದೆ ಮಾತು ಸಂವಹನಗೊಳ್ಳುತ್ತದೆ. ಜನರ ನಡುವೆ ಮಾತು ವಿನಿಮಯಗೊಳ್ಳುವಾಗ ಆಡುವ ಪದಗಳಿಗೆ ಸಂದರ್ಭ ಪೂರಕವಾಗಿರುತ್ತದೆ. ಇದೇ ರೀತಿ ಮೇಲ್ಕಂಡ ಎಲ್ಲಾ ಪದಗಳು ಮಾತಿನ ಸಂದರ್ಭದಲ್ಲಿ ಯಾವುದೇ ಬಗೆಯ ಅರ್ಥದ ತೊಡಕಿಲ್ಲದೆ ಬಳಕೆಗೊಳ್ಳುತ್ತವೆ.

ಹಳಗನ್ನಡ ವ್ಯಾಕರಣಕಾರನಾದ ಕೇಶಿರಾಜನು ಶಬ್ದಮಣಿದರ್ಪಣದಲ್ಲಿ ‘ಭಾಷೆ/ಭಾಸೆ’ ಎಂಬ ರೂಪಗಳೆರಡೂ ಬಳಕೆಯಲ್ಲಿ ಇದ್ದುದನ್ನು ದಾಖಲಿಸಿದ್ದಾನೆ. ಸಂಸ್ಕೃತ ಭಾಷೆಯಿಂದ ಕನ್ನಡಕ್ಕೆ ಬಂದಿರುವ ಪದರೂಪಗಳಲ್ಲಿನ ಮಹಾಪ್ರಾಣಗಳು ಅಲ್ಪಪ್ರಾಣಗಳಾಗಿ ಮತ್ತು ಶಕಾರ/ಷಕಾರಗಳು ಸಕಾರವಾಗಿ ಕನ್ನಡಿಗರ ಮಾತುಕತೆಯಲ್ಲಿ ಉಚ್ಚಾರಣೆಗೊಳ್ಳುವುದರಿಂದ ಅರ್ಥದಲ್ಲಿ ಯಾವುದೇ ಬಗೆಯ ಗೊಂದಲ ಉಂಟಾಗುವುದಿಲ್ಲ.

–ಸಿ.ಪಿ.ನಾಗರಾಜ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT