ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ರಾಜ್ಯೋತ್ಸವವೇ ಸೂಕ್ತ

Last Updated 4 ನವೆಂಬರ್ 2022, 19:45 IST
ಅಕ್ಷರ ಗಾತ್ರ

ಕನ್ನಡ ರಾಜ್ಯೋತ್ಸವದ ಬದಲಿಗೆ ಕರ್ನಾಟಕ ರಾಜ್ಯೋತ್ಸವ ಎಂದು ಹೆಸರಿಸಬೇಕೆಂದು ಕೆಲವರು ಅಭಿಪ್ರಾಯಪಡುತ್ತಿರುವುದು ಸೂಕ್ತವಲ್ಲ. ಕರ್ನಾಟಕವು ಕನ್ನಡಿಗರ ನಾಡು. ಕನ್ನಡವೆಂಬುದು ನಮ್ಮ ಕರುಳಿನ ಭಾಷೆ. ಇಲ್ಲಿ ವಿವಿಧ ಉಪಭಾಷೆ, ಸೋದರ ಭಾಷೆಗಳು ಇದ್ದರೂ ಆಡಳಿತ ಭಾಷೆ ಕನ್ನಡಕ್ಕೆ ಮಹತ್ವ ಇರಬೇಕು.

ರಾಜ್ಯವೆಲ್ಲಾ ಕರ್ನಾಟಕ ರಾಜ್ಯೋತ್ಸವ ಆಚರಿಸಿ ಕನ್ನಡಿಗರು ಮಾತ್ರ ಕನ್ನಡೋತ್ಸವ ಆಚರಿಸಲು ಕನ್ನಡಿಗರೇನು ಹೊರಗಿನಿಂದ ಬಂದು ಇಲ್ಲಿ ಸೇರಿರುವವರಲ್ಲ! ಕನ್ನಡ ಭಾಷೆ ಕರುಳಿನಿಂದ ಹಬ್ಬಿ ಬಳ್ಳಿಯಂತೆ ಬೆಳೆದಿದೆ. ಹಾಗಾಗಿ ನಮ್ಮ ಕನ್ನಡ ಭಾಷೆಗೆ ಕನ್ನಡ ರಾಜ್ಯೋತ್ಸವವೇ ಸೂಕ್ತ.

- ಆರ್.ವೆಂಕಟರಾಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT