ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಮಂಡಲ ಅಧಿವೇಶನ: ಕುಸ್ತಿ ಅಖಾಡವಲ್ಲ

Last Updated 13 ಅಕ್ಟೋಬರ್ 2019, 20:01 IST
ಅಕ್ಷರ ಗಾತ್ರ

ವಿಧಾನ ಮಂಡಲದ ಅಧಿವೇಶನ ಮೂರು ದಿನ ನಡೆದಿದ್ದು ಸಂತೋಷದ ಸಂಗತಿ. ಆದರೆ, ಉಚಿತವಲ್ಲದ ಚರ್ಚೆಗಳಲ್ಲಿ ಸದಸ್ಯರು ಹೆಚ್ಚಿಗೆ ತೊಡಗಿದ್ದು ಬೇಸರ ಮೂಡಿಸಿದೆ. ಜನಪ್ರತಿನಿಧಿಗಳು ವಿಧಾನಸೌಧವೆಂಬ ಪವಿತ್ರ ಸ್ಥಳದಲ್ಲಿ ಕೂತು ಜನರ ಸಮಸ್ಯೆಗಳನ್ನು ಚರ್ಚಿಸುವ ಬದಲು ಒಬ್ಬರನ್ನೊಬ್ಬರು ಬೈದಾಡುವುದರಲ್ಲಿ ಕಾಲಹರಣ ಮಾಡಿದ್ದು ತರವಲ್ಲ.

ಕೆಲವರು ಸದನವನ್ನು ಕುಸ್ತಿಯ ಅಖಾಡ ಎಂದು ಭಾವಿಸಿದಂತಿದೆ. ಬೈದಾಟದ ಈ ಭಾವ–ಭಂಗಿಗಳನ್ನು ಟಿ.ವಿ. ಮಾಧ್ಯಮಗಳು ಎಲ್ಲಿ ಬಿತ್ತರಿಸುತ್ತವೋ ಎಂಬ ಭಯದಿಂದ ಅವರಿಗೆ ವಿಧಾನಸಭೆಗೆ ಪ್ರವೇಶ ನಿರ್ಬಂಧಿಸಿದ್ದೂ ಆಯಿತು. ಇನ್ನು ಇವರನ್ನು ಕೇಳುವವರು ಯಾರು?

-ಶ್ವೇತಾ ಎನ್.,ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT