ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಡೇರಿಸಲು ಈಗ ಯತ್ನಿಸಬಹುದಲ್ಲವೇ?

Last Updated 21 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಈ ಹಿಂದಿನ ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜರುಗಿದ ವಿಧಾನಮಂಡಲ ಅಧಿವೇಶನದಲ್ಲಿ, ಈಗ ಕಾನೂನು ಸಚಿವರಾಗಿರುವ ಮಾಧುಸ್ವಾಮಿ ಅವರು ರೈತರ ವಿದ್ಯುತ್ ಸಮಸ್ಯೆ ಕುರಿತು ಮಾತನಾಡಿದ್ದರು. ಆಗ ವಿರೋಧ ಪಕ್ಷದಲ್ಲಿದ್ದ ಅವರು, ‘ಹಗಲು ಹೊತ್ತು ಆರು ಗಂಟೆ ತ್ರಿಫೇಸ್ ವಿದ್ಯುತ್ತನ್ನು ರೈತರಿಗೆ ನೀಡಿ. ಅದು ಬಿಟ್ಟು, ರಾತ್ರಿ ಹೊತ್ತು ಕರೆಂಟ್ ಕೊಟ್ಟು ರೈತರನ್ನು ರಾತ್ರಿ ಪೂರಾ ತೋಟಗಳಲ್ಲಿ ಕಾಲ ಕಳೆಯುವಂತೆ ಮಾಡುತ್ತೀರಿ. ಹಗಲು ಹೊತ್ತು ರೈತರಿಗೆ ಹಾಗೂ ರಾತ್ರಿ ಹೊತ್ತು ಕೈಗಾರಿಕೆಗಳಿಗೆ ಕರೆಂಟ್ ನೀಡಿ’ ಎಂದು ಒತ್ತಾಯಿಸಿದ್ದರು. ಈ ಮಾತು ಜನಪ್ರಿಯವಾಗಿ, ನಮ್ಮ ಯುವ ರೈತರು ಟಿಕ್‌ಟಾಕ್‌ನಲ್ಲಿ ಮಾಧುಸ್ವಾಮಿಯವರ ಈ ಧ್ವನಿಗೆ ಟಿಕ್ ಮಾಡಿ, ಇವರನ್ನು ಮತ್ತಷ್ಟು ಜನಪ್ರಿಯಗೊಳಿಸಿದ್ದರು.

ಈಗ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದೆ. ಮಾಧುಸ್ವಾಮಿಯವರು ಸಚಿವರಾಗಿದ್ದಾರೆ. ಅಂದು ತಾವು ಇರಿಸಿದ್ದ ಬೇಡಿಕೆಯನ್ನು ಈಗ ಈಡೇರಿಸಲು ಅವರು ಪ್ರಯತ್ನಿಸಬಹುದಲ್ಲವೇ?

–ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ, ಗುಬ್ಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT