ಗುರುವಾರ , ಫೆಬ್ರವರಿ 27, 2020
19 °C

ಹೊನ್ನಾಳಿಯಲ್ಲಿ ಗುಪ್ತ ಮತದಾನ ನಡೆದಿಲ್ಲವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮುಸ್ಲಿಮರು ನನಗೆ ವೋಟು ಹಾಕಿಲ್ಲ. ಆದ್ದರಿಂದ ಆ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವುದಿಲ್ಲ’ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಹೇಳಿರುವುದು (ಪ್ರ.ವಾ., ಜ. 23) ಖಂಡನೀಯ. ಶಾಸಕನಾಗಿ ಆಯ್ಕೆಯಾದ ಮೇಲೆ ತನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಬೇಕಾದುದು ಆ ಶಾಸಕನ ಕರ್ತವ್ಯ. ‘ಯಾವುದೇ ಭೇದಭಾವ ತೋರದೆ ಕ್ಷೇತ್ರದ ಜನರ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿ, ಈ ರೀತಿ ಉಡಾಫೆಯಿಂದ ಮಾತನಾಡುವುದು ಅಕ್ಷಮ್ಯ ಮತ್ತು ಸಂವಿಧಾನಕ್ಕೆ ಎಸಗುವ ದ್ರೋಹ.

ಮುಸ್ಲಿಮರು ತಮಗೆ ಮತ ಹಾಕಿಲ್ಲ ಎಂದು ಇವರಿಗೆ ತಿಳಿಸಿದ್ದು ಯಾರು? ಚುನಾವಣಾ ಆಯೋಗವೇ? ಹಾಗಾದರೆ ಇವರದ್ದು ನ್ಯಾಯಬದ್ಧ ಆಯ್ಕೆ ಅಲ್ಲವೇ? ಹೊನ್ನಾಳಿಯಲ್ಲಿ ಗುಪ್ತ ಮತದಾನ ನಡೆದಿಲ್ಲವೇ? ಪ್ರವಾಹ ಸಂತ್ರಸ್ತರನ್ನು ರಕ್ಷಿಸುವ ನೆಪದಲ್ಲಿ, ಒಂದು ಅಡಿ ನೀರಿನಲ್ಲಿ ದೋಣಿ ನಡೆಸಿ ನಗೆಪಾಟಲಿಗೆ ಗುರಿಯಾಗಿದ್ದ ಶಾಸಕರು, ಇನ್ನಾದರೂ ಸ್ವಲ್ಪ ಜವಾಬ್ದಾರಿ ಅರಿತು ಮಾತನಾಡಲಿ.

–ವಿ.ತಿಪ್ಪೇಸ್ವಾಮಿ, ಹಿರಿಯೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು