‘ಹುಣಸೆ ಅಭಿವೃದ್ಧಿ ಮಂಡಳಿ’ ಸ್ಥಾಪಿಸಿ

ತುಮಕೂರು ಜಿಲ್ಲೆಯ ಬಹುತೇಕ ರೈತರಿಗೆ ಹುಣಸೆ ಬೆಳೆಯೇ ಜೀವನಾಧಾರ. 6,800ಕ್ಕೂ ಹೆಚ್ಚು ಹೆಕ್ಟೇರ್ನಲ್ಲಿ ಹುಣಸೆ ಮರಗಳಿವೆ. ಈ ಬಾರಿ ಉತ್ತಮ ಫಸಲು ಬಂದಿದೆ. ಕಡಿಮೆ ನೀರಿರುವ ಸಂದರ್ಭದಲ್ಲೂ ಇದರ ನಿರ್ವಹಣೆ ಸುಲಭ. ಆದರೆ, ಹುಣಸೆ ಬೆಳೆಯುವವರು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತಿಲ್ಲ. ಕಾರ್ಮಿಕರ ಕೊರತೆಯಿಂದ ಬೆಳೆಯುವುದಕ್ಕೆ ಆಸಕ್ತಿ ಕಡಿಮೆಯಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯಲ್ಲಿ ಏಳು ಸಾವಿರಕ್ಕೂ ಹೆಚ್ಚು ಹುಣಸೆ ಮರಗಳನ್ನು ರೈತರು ಕಡಿದುಹಾಕಿರುವುದೇ ಇದಕ್ಕೆ ಸಾಕ್ಷಿ. ಹುಣಸೆಯ ಮೌಲ್ಯವರ್ಧನೆಗೆ ಒತ್ತು ನೀಡಿದರೆ ರೈತರ ಜೇಬು ತುಂಬಲಿದೆ. ಇದಕ್ಕಾಗಿ ‘ಹುಣಸೆ ಅಭಿವೃದ್ಧಿ ಮಂಡಳಿ’ ಸ್ಥಾಪಿಸಬೇಕಿದೆ. ಈ ಬಾರಿಯ ಬಜೆಟ್ನಲ್ಲಿ ಈ ಕುರಿತಂತೆ ಸರ್ಕಾರ ಪ್ರಸ್ತಾಪಿಸಿಲ್ಲ. ಬಜೆಟ್ ಮೇಲಿನ ಚರ್ಚೆಯಲ್ಲಾದರೂ ಮಂಡಳಿ ಸ್ಥಾಪಿಸುವ ಬಗ್ಗೆ ಘೋಷಿಸಲಿ.

-ಮಂಜುನಾಥ್ ಅಮಲಗೊಂದಿ, ಶಿರಾ

ಗೃಹಲಕ್ಷ್ಮಿ ಹಣ: ವಿವೇಚನೆಯಿಂದ ಬಳಸಿ

ಗದಗ ತಾಲ್ಲೂಕಿನ ತಿಮ್ಮಾಪುರದ 800ಕ್ಕೂ ಹೆಚ್ಚು ಮಹಿಳೆಯರು ತಮ್ಮ ಒಂದು ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ದೇಗುಲ ನಿರ್ಮಾಣಕ್ಕೆ ನೀಡಿರುವುದು ವರದಿ ಆಗಿದೆ. ಈ ಘಟನೆಯಿಂದ ಉತ್ತೇಜಿತರಾಗಿ ಒತ್ತಾಯಪೂರ್ವಕವಾಗಿ ದೇಗುಲಗಳ ನಿರ್ಮಾಣಕ್ಕೆ ಗೃಹಲಕ್ಷ್ಮಿ ಹಣದ ವಸೂಲಿಬಾಜಿಯೂ ಹೆಚ್ಚಾಗುವ ಸಾಧ್ಯತೆಯಿದೆ. ರಾಜ್ಯ ಸರ್ಕಾರವು ಮಹಿಳೆಯರ ಸಬಲೀಕರಣದ ದೃಷ್ಟಿಯಿಂದ ಈ ಯೋಜನೆಯಡಿ ಹಣ ನೀಡುತ್ತಿದೆ. ಫಲಾನುಭವಿಗಳು ಸರ್ಕಾರದ ಉದ್ದೇಶ ಅರಿತು ಹಣವನ್ನು ವಿವೇಚನೆಯಿಂದ ಬಳಸಲಿ.

-ಅಶೋಕ ಎನ್.ಎಚ್., ಕೋಲಾರ

ವಲಸೆ ನಿಯಂತ್ರಣಕ್ಕೆ ಗ್ಯಾರಂಟಿ ಬೇಡವೆ?

ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳು ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಈ ಭಾಗದ ಜನರು ಇಂದಿಗೂ ಉದ್ಯೋಗ ಅರಸಿ ಗುಳೆ ಹೋಗುತ್ತಾರೆ. ಸರ್ಕಾರ ಹೆಸರಿಗಷ್ಟೆ ‘ಕಲ್ಯಾಣ ಕರ್ನಾಟಕ’ ಎಂದು ಹೆಸರಿಟ್ಟಿದೆ. ಈ ಜಿಲ್ಲೆಗಳ ಜನರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸುವಲ್ಲಿ ನಿರ್ಲಕ್ಷ್ಯವಹಿಸಿರುವುದು ಗುಟ್ಟೇನಲ್ಲ. ದೊಡ್ಡಮಟ್ಟದ ಕೈಗಾರಿಕೆಗಳನ್ನು ಸ್ಥಾಪಿಸಿ ಜನರಿಗೆ ಸ್ಥಳೀಯವಾಗಿಯೇ ಉದ್ಯೋಗದಅವಕಾಶ ಕಲ್ಪಿಸುವ ಕೆಲಸವಾಗುತ್ತಿಲ್ಲ. ಈ ಆಸೆಗಣ್ಣಿನಿಂದಲೇ ಪ್ರತಿ ಬಾರಿಯ ಬಜೆಟ್ ಅನ್ನು ಈ ಭಾಗದ ಜನರು ಎದುರು ನೋಡುತ್ತಾರೆ. ನಿರಾಶೆ ಕಟ್ಟಿಟ್ಟ ಬುತ್ತಿಯಾಗಿದೆ. ಈ ಬಾರಿಯೂ ಅದೇ ಸ್ಥಿತಿ ಮುಂದುವರಿದಿದೆ.

- ಚನ್ನಪ್ಪ ಯಾದವ್, ಗುರುಮಿಠಕಲ್

ದೇಶಕ್ಕೆ ಯುವಶಕ್ತಿಯ ಸಹಭಾಗಿತ್ವ ಬೇಕು

‘ಯುವಪೀಳಿಗೆಗೆ ಕಿವುಡೇಕೆ?’ ಲೇಖನವು (ಲೇ: ಚಂದ್ರಕಾಂತ ವಡ್ಡು, ಪ್ರ.ವಾ., ಮಾ. 6) ವಾಸ್ತವತೆಯಿಂದ ಕೂಡಿದೆ. ಹಳೆ ಬೇರು ಹೊಸ ಚಿಗುರು ಮರ ಸೊಬಗುಎಂಬ ಯುಕ್ತಿಯನ್ನು ಮರೆಯಬಾರದು. ಹಿರಿ ತಲೆಮಾರಿಗೆ ಹೊಸ ತಲೆಮಾರಿನಬದಲಾವಣೆ ಬಳಸಿಕೊಳ್ಳದೇ ಹೋದರೆ ಸಾಮರಸ್ಯ ಮೂಡಲು ಸಾಧ್ಯವಾಗುವುದಿಲ್ಲ. ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಔದ್ಯೋಗಿಕ ಕ್ಷೇತ್ರದಲ್ಲಿ ಯುವಪೀಳಿಗೆಯನ್ನು ಬಳಸಿಕೊಂಡಾಗ ಮಾತ್ರ ದೇಶದ ಪ್ರಗತಿ ಸಾಧ್ಯ. ಜಗತ್ತಿನ ಅತಿದೊಡ್ಡ ಯುವ ಸಮುದಾಯ ಹೊಂದಿರುವ ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯುವಶಕ್ತಿ ನಿರ್ಲಕ್ಷ್ಯಕ್ಕೆ ಒಳಗಾಗದೇ ಬಳಕೆಯಾಗಬೇಕು. ಕಿರಿಯರ ಅಭಿಪ್ರಾಯಕ್ಕೆ ಕಿವಿಯಾಗಬೇಕು.

-ಅಶೋಕ ಗೌಡ, ಶಿರಸಿ

ರಾಜ್ಯದ ಪ್ರಗತಿಗೆ ಬಜೆಟ್ ಸಾಲುವುದೆ?

ಈ ಬಾರಿ ಕರ್ನಾಟಕದ ಬಜೆಟ್ ಗಾತ್ರ 4.48 ಲಕ್ಷ ಕೋಟಿ. ಇದು ರಾಜ್ಯದ ಅಭಿವೃದ್ದಿಗೆ ಸಾಲುವುದಿಲ್ಲ. ಕರ್ನಾಟಕಕ್ಕಿಂತ ಕಡಿಮೆ ತೆರಿಗೆ ಸಂಗ್ರಹಿಸುವ ಉತ್ತರಪ್ರದೇಶ ₹9 ಲಕ್ಷ ಕೋಟಿ ಬಜೆಟ್ ಮಂಡಿಸಿದೆ. ಏಕೆಂದರೆ ಆ ರಾಜ್ಯಕ್ಕೆ ದೊಡ್ಡ ಮೊತ್ತದ ಕೇಂದ್ರದ ತೆರಿಗೆ ಪಾಲು ಹಾಗೂ ಅನುದಾನ ಹೋಗುತ್ತದೆ. ವಿಕಸಿತ ಭಾರತ ಸಾಧ್ಯ ಆಗಬೇಕಾದರೆ ದೇಶದ ಜಿಡಿಪಿಗೆ ಹೆಚ್ಚಿನ ಕೊಡುಗೆ ಕೊಡುವ ಕರ್ನಾಟಕದಂತಹ ರಾಜ್ಯಗಳು ಹೆಚ್ಚಿನ ಹಣಕಾಸು ಹೊಂದಿರಬೇಕು. ಆದರೆ, ಕೇಂದ್ರದಿಂದ ರಾಜ್ಯಗಳಿಗೆ ಅನುದಾನದ ಹಂಚಿಕೆ ನ್ಯಾಯಬದ್ಧವಾಗಿ ಇಲ್ಲ, ಸಮಾನತೆಯ ತತ್ತ್ವದಿಂದಲೂ ಕೂಡಿಲ್ಲ. ಹಾಗಾಗಿ, ರಾಜ್ಯಗಳಿಗೆ ತಮ್ಮದೇ ಆದ ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ ಇತ್ಯಾದಿ ವಿಧಿಸಲು ಕೇಂದ್ರವು ಅವಕಾಶ ನೀಡಬೇಕು. ಇಲ್ಲವಾದರೆ ಕೇಂದ್ರ ಪ್ರಾಯೋಜಿತ ಯೋಜನೆಗಳ ಅನುದಾನವನ್ನು ಸಂಪೂರ್ಣವಾಗಿ ಭರಿಸಬೇಕಿದೆ.

-ದೇವಿದಾಸ ಪ್ರಭು, ಭಟ್ಕಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.