ಶುಕ್ರವಾರ, ಡಿಸೆಂಬರ್ 6, 2019
20 °C

ಚುನಾವಣೆಯು ಭ್ರಷ್ಟಾಚಾರದ ಮೂಲ

Published:
Updated:

ದುಡ್ಡಿಲ್ಲದೆ ಚುನಾವಣೆಯಿಲ್ಲ ಎಂಬುದನ್ನು ನಂಬಲೇಬೇಕು. ‘ಎಷ್ಟು ದುಡ್ಡು ಸಾಗಿಸಿದರೂ ಕೇಳುವವರಿಲ್ಲ. ಗೆಲ್ಲಲು ಎಷ್ಟು ಹಣ ಬೇಕಾದರೂ ಕೊಡುತ್ತಾರೆ’ ಎಂದು ಒಂದು ಪಕ್ಷದ ವರಿಷ್ಠರೊಬ್ಬರು ಹೇಳಿದ್ದಾರೆ. ಮತ್ತೊಂದು ಪಕ್ಷದ ಮುಂದಾಳು ಮಾತನಾಡಿ ‘ಮುಂಬೈ ಹಣ ತೆಗೆದುಕೊಂಡು ವೋಟು ಬೇರೆಯವರಿಗೆ ಕೊಡಿ’ ಎಂದಿದ್ದಾರೆ. ‘ಕುದುರೆ ವ್ಯಾಪಾರ’ ಅನ್ನುವುದಂತೂ ಬಹು ಜನಪ್ರಿಯ ಭಾಷೆ. ಜತೆಗೆ ಚಿನ್ನದ ನಾಣ್ಯಗಳ ಸದ್ದು. ಎಲ್ಲಾ ಸತ್ಯವಂತರಾದರೆ ಚುನಾಯಿತ ಪ್ರತಿನಿಧಿಗಳನ್ನು ರೆಸಾರ್ಟುಗಳಲ್ಲಿ ಕೂಡಿ ಹಾಕುವುದಾದರೂ ಏಕೆ? ಇದೂ ವ್ಯಾಪಾರವಲ್ಲವೇ? ಅದೆಷ್ಟೋ ಚುನಾವಣೆಗಳನ್ನು ಕಂಡಿರುವ ಅನುಭವಸ್ಥ ರಾಜಕಾರಣಿಗಳಿಗೆ ಇದು ಹೊಸದಲ್ಲ.

ಸಾಹಿತಿಗಳು, ಬುದ್ಧಿಜೀವಿಗಳು ಎನಿಸಿಕೊಂಡವರು ಒಂದು ಪಕ್ಷವನ್ನು ವಹಿಸಿಕೊಂಡು ಮಾತನಾಡುವುದು ಬಿಟ್ಟು, ಚುನಾವಣೆಗಳಲ್ಲಿ ಅಕ್ರಮ ಹಣ ಚಲಾವಣೆ ನಿಯಂತ್ರಣಕ್ಕೆ ಸಲಹೆ, ಸೂಚನೆಗಳನ್ನು ಕೊಡಲಿ. ರಾಜಕಾರಣಿಗಳೂ ತಮ್ಮ ಹೊಣೆ ಅರಿತು ಜನರ ಸಮಸ್ಯೆಗಳಿಗೆ ಸ್ಪಂದಿಸಲಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು