ಅಧಿಕಾರಸ್ಥರ ಕಿವಿ ಹಿಂಡಿದ ಅನ್ನದಾತರು

ರೈತರು ತುಂಗಭದ್ರಾ ಜಲಾಶಯದಲ್ಲಿನ ಹೂಳು ತೆಗೆದಿರುವುದು ವರದಿಯಾಗಿದೆ. ಕಂಪ್ಲಿ, ಕುರುಗೋಡು, ಸಿರುಗುಪ್ಪ ಭಾಗದ ರೈತರ ಈ ನಡೆಯು ಹೆಮ್ಮೆ ಎನಿಸಿತು. ಸರ್ಕಾರದ ಮರ್ಜಿಗೆ ಕಾಯದೆ ಸ್ವಂತ ವಾಹನಗಳಲ್ಲಿ ಜಲಾಶಯದ ಹಿನ್ನೀರಿನಲ್ಲಿ ಹೂಳು ತೆಗೆದಿರುವುದು, ರೈತರ ಹಾಗೂ ಸಮಾಜದ ಹಿತಕ್ಕೆ ಪ್ರತಿಭಟನೆಯೊಂದು ಹೇಗೆ ಪೂರಕವಾಗಬಹುದು ಎಂಬುದಕ್ಕೆ ನಿದರ್ಶನದಂತಿದೆ. ಸರ್ಕಾರದ ವಿರುದ್ಧ ನಡೆಯುವ ಪ್ರತಿಭಟನೆಯಲ್ಲಿ ಗಲಾಟೆ, ಘೋಷಣೆ, ರಸ್ತೆತಡೆ, ಬಸ್ಗೆ ಕಲ್ಲುತೂರಾಟ, ಟೈರ್ಗೆ ಬೆಂಕಿ, ಮಾಧ್ಯಮಗಳ ಗಮನವನ್ನು ಸೆಳೆಯಲು ಅರಚಾಟ ಕೂಗಾಟಗಳಿರುವುದು ಸಾಮಾನ್ಯ. ಆದರೆ, ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರು ಯಾವುದೇ ರೀತಿಯ ಹಿಂಸಾತ್ಮಕ ಪ್ರತಿಭಟನೆಗೆ ಇಳಿದಿಲ್ಲ. ಸರ್ಕಾರ ಮಾಡಬೇಕಿರುವುದನ್ನು ತಾವೇ ಮಾಡಿ ತೋರಿಸಿ ಆಳುವ ವರ್ಗದ ಅಸಮರ್ಥತೆಗೆ ಕನ್ನಡಿ ಹಿಡಿದಿದ್ದಾರೆ. ಸರ್ಕಾರ ಇನ್ನಾದರೂ ಎಚ್ಚತ್ತುಕೊಂಡು ವೈಜ್ಞಾನಿಕ ವಿಧಾನದಲ್ಲಿ ಹೂಳು ತೆಗೆಸಲು ಮುಂದಾಗಬೇಕು.

⇒ಸುಘೋಷ ಸ. ನಿಗಳೆ, ಬೆಂಗಳೂರು

ಕೊಲ್ಲಿ ಯುದ್ಧದ ಅನಿಶ್ಚಿತತೆ ಕೊನೆಗೊಳ್ಳಲಿ

ಕೊಲ್ಲಿ ಯುದ್ಧದ ಬಿಕ್ಕಟ್ಟಿನ ಅಂತ್ಯ ಇನ್ನೂ ಅನಿಶ್ಚಿತ ಮಬ್ಬಿನಲ್ಲಿ ಮುಚ್ಚಿಕೊಂಡಿದೆ. ಶಾಂತಿಯ ಆಶಾಕಿರಣಗಳು ಕಾಣಿಸುತ್ತಿದ್ದರೂ ಸಂಪೂರ್ಣವಾಗಿ ಸ್ಥಿರಗೊಂಡಿಲ್ಲ. ಈ ಸಂಘರ್ಷವು ಲಕ್ಷಾಂತರ ಜನರ ಬದುಕು ಹಾಗೂ ಆರ್ಥಿಕ ಸ್ಥಿತಿಗತಿಯ ಮೇಲೆ ಆಳವಾದ ಪರಿಣಾಮ ಬೀರಿದೆ. ಯುದ್ಧದ ಹೊಗೆ ನಿಧಾನವಾಗಿ ಕರಗುತ್ತಿದ್ದರೂ ಅದರ ಗುರುತುಗಳು ಇನ್ನೂ ಉಳಿದಿವೆ. ಯುದ್ಧ ಸಾಧ್ಯತೆ ಈಗಲೂ ಬೂದಿ ಮುಚ್ಚಿದ ಕೆಂಡದಂತಿದೆ. ಇದು ಬರೀ ಒಂದು ಸಂಘರ್ಷದ ಅಂತ್ಯವಲ್ಲ; ಹೊಸ ರಾಜತಾಂತ್ರಿಕ ಅಧ್ಯಾಯದ ಆರಂಭವೂ ಆಗಬಹುದು. ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಶಾಂತಿ ಉಳಿಯುತ್ತದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

⇒ಧನುಷ್ ಜಿ., ಚಿತ್ರದುರ್ಗ

ನೀಟ್ ವೈಫಲ್ಯ: ಕೇಂದ್ರ ಆಡಳಿತಕ್ಕೆ ಕನ್ನಡಿ

ಪಾರದರ್ಶಕ ಹಾಗೂ ಸುವ್ಯವಸ್ಥಿತವಾಗಿ ‘ನೀಟ್’ ನಡೆಸುವಲ್ಲಿ ರಾಷ್ಟ್ರೀಯ ಪರೀಕ್ಷಾ
ಸಂಸ್ಥೆಯು (ಎನ್ಟಿಎ) ಮತ್ತೆ ಎಡವಿದೆ. ಇದು ವಿದ್ಯಾರ್ಥಿಗಳು ಮತ್ತು ಪೋಷಕ
ರನ್ನು ಆತಂಕದ ಮಡುವಿಗೆ ದೂಡಿದೆ. ಹನ್ನೆರಡನೇ ತರಗತಿ ಪೂರ್ಣಗೊಳಿಸಿ ‘ನೀಟ್’ಗಾಗಿ ವರ್ಷಪೂರ್ತಿ ತರಬೇತಿ ಪಡೆದು ಪರೀಕ್ಷೆ ಬರೆದವರು ಮತ್ತೆ ಪರೀಕ್ಷೆ ಬರೆಯಬೇಕಾಗಿದೆ. ಇದರಿಂದ ವೈದ್ಯರಾಗಬೇಕಾದ ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಗಾಗುವಂತಾಗಿದೆ. ನೈತಿಕ ಹೊಣೆ ಹೊರಲು ಕೇಂದ್ರ ಶಿಕ್ಷಣ ಸಚಿವರು ಸಿದ್ಧರಿಲ್ಲ. ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಮೌನವಾಗಿದ್ದಾರೆ. ತಪ್ಪಿತಸ್ಥರ ವಿರುದ್ಧ ಸರ್ಕಾರವು ಕಠಿಣ ಕ್ರಮ ಜರುಗಿಸಬೇಕು. ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಇಂಥ ಅವಾಂತರ ತಲೆದೋರದಂತೆ ಎಚ್ಚರವಹಿಸಬೇಕಿದೆ.

⇒ಬಸವರಾಜು, ಮೈಸೂರು

ರೈಲ್ವೆ ಪ್ರಗತಿ: ಹಳಿ ತಪ್ಪಿಸುವವರು ಯಾರು?

ಕೊಂಕಣ ರೈಲು ನಿಗಮವು ಟಿಕೆಟ್ರಹಿತ ಪ್ರಯಾಣಿಕರ ಪತ್ತೆಗೆ ವಿಶೇಷ ಅಭಿಯಾನ ಕೈಗೊಂಡಿದೆ. ಏಪ್ರಿಲ್ ತಿಂಗಳೊಂದರಲ್ಲಿಯೇ ಸುಮಾರು 37 ಸಾವಿರ ಟಿಕೆಟ್ರಹಿತ ಪ್ರಯಾಣಿಕರಿಂದ ₹2.90 ಕೋಟಿ ದಂಡ ವಸೂಲಿ ಮಾಡಿದೆ. ಇದು ಟಿಕೆಟ್ ಪಡೆಯದೆ ಸಿಕ್ಕಿಬಿದ್ದವರ ಸಂಖ್ಯೆ. ಸಿಕ್ಕಿಹಾಕಿಕೊಳ್ಳದೆ ಪ್ರಯಾಣಿಸಿದವರು ಮತ್ತು
ಹೊಂದಾಣಿಕೆಯಿಂದ ದಂಡ ಕೊಡದವರ ಸಂಖ್ಯೆ ಎಷ್ಟು? ಒಂದು ರೈಲು ಮಾರ್ಗದ ಕಥೆ ಹೀಗಾದರೆ ಇಡೀ ದೇಶದಲ್ಲಿ ಟಿಕೆಟ್ರಹಿತ ಪ್ರಯಾಣಿಕರ ಸಂಖ್ಯೆ
ಎಷ್ಟಿರಬಹುದು? ಕೊಂಕಣ ರೈಲು ಮಾರ್ಗದಲ್ಲಿ ಸುಮಾರು 50 ಜೊತೆ ರೈಲುಗಳು ಪ್ರಯಾಣಿಕರಿಂದ ಕಿಕ್ಕಿರಿದು ಸಂಚರಿಸುತ್ತಿವೆ. ಈ ಮಾರ್ಗ, ನಿರೀಕ್ಷಿತ ಲಾಭ ತರದಿ
ರುವ ಹಿಂದಿನ ಕಾರಣ ಇದೇ ಎನ್ನಬಹುದೇ? ಈ ಮಾರ್ಗವು ದ್ವಿಪಥ ಆಗದಿರುವು
ದಕ್ಕೆ ಮತ್ತು ಅಭಿವೃದ್ಧಿಯ ಬೇಡಿಕೆಗಳು ಸಾಕಾರಗೊಳ್ಳದಿರುವುದಕ್ಕೆ ಜನರು ಟಿಕೆಟ್
ರಹಿತವಾಗಿ ಸಂಚರಿಸುವುದು ಕಾರಣವಾಗಿದ್ದರೆ ಅಚ್ಚರಿಪಡಬೇಕಿಲ್ಲ.

⇒ರಮಾನಂದ ಎಸ್., ಬೆಂಗಳೂರು

ಭೂಮಾಪಕರ ಮುಷ್ಕರ: ರೈತರಿಗೆ ಸಂಕಷ್ಟ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದಲ್ಲಿ ಭೂಮಾಪಕರು ಕಳೆದ ಹಲವು
ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಇದರಿಂದ ಲಕ್ಷಾಂತರ ರೈತರು ಭೂಮಾಪನ ಇಲಾಖೆಗೆ ಸಲ್ಲಿಸಿದ 5.78 ಲಕ್ಷಕ್ಕೂ ಹೆಚ್ಚು ಸರ್ವೆ ಅರ್ಜಿಗಳು ಬಾಕಿ ಉಳಿದಿವೆ. ಇದು ರೈತರ ಪಾಲಿಗೆ ನುಂಗಲಾರದ ಬಿಸಿತುಪ್ಪವಾಗಿದೆ.

ಜಮೀನು ಮಾರಾಟ, ಪೋಡಿ, ಹದ್ದುಬಸ್ತು ದುರಸ್ತಿ ಸೇರಿದಂತೆ ಹಲವು
ಕಾರ್ಯಗಳಿಗೆ ತೀವ್ರ ಹಿನ್ನಡೆಯಾಗಿದೆ. ರೈತರು ನಿತ್ಯವೂ ತಾಲ್ಲೂಕು ಕಚೇರಿಗೆ ಅಲೆ
ಯುವಂತಾಗಿದೆ. ಭೂಮಾಪಕರ ಹೋರಾಟದ ಬಗ್ಗೆ ಸರ್ಕಾರ ಕಿವುಡಾಗಿರುವುದು ಸರಿಯಲ್ಲ. ನ್ಯಾಯಯುತವಾಗಿ ಅವರ ಬೇಡಿಕೆ ಈಡೇರಿಸುವ ಮೂಲಕ ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕಿದೆ.

⇒ಮಲ್ಲನಗೌಡ ಪಾಟೀಲ, ರಾಮದುರ್ಗ

ಶಕ್ತಿಕೇಂದ್ರವೋ ಧಾರ್ಮಿಕ ಸ್ಥಳವೋ?

ಶಕ್ತಿಕೇಂದ್ರವಾದ ವಿಧಾನಸೌಧದ ಮುಖ್ಯಮಂತ್ರಿ ಕಚೇರಿಗೆ ಜ್ಯೋತಿಷಿಗಳು ಭೇಟಿ ನೀಡಿ, ಕುರ್ಚಿಯ ದಿಕ್ಕು ಬದಲಿಸಿ, ಅಜ್ಜಯ್ಯನ ಫೋಟೊ ಅಳವಡಿಸಿರುವುದಾಗಿ ವರದಿಯಾಗಿದೆ. ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದವರು ನಾಗರಿಕ, ವಿದ್ಯಾರ್ಥಿ ಸಮೂಹಕ್ಕೆ ವಿಜ್ಞಾನ, ತಂತ್ರಜ್ಞಾನ ಮತ್ತು ವೈಚಾರಿಕ ಪ್ರಜ್ಞೆ ಬೆಳೆಸಲು ಒತ್ತು ನೀಡಬೇಕು. ಸಾಂವಿಧಾನಿಕ ಮಹತ್ವ ಇರುವ ಮುಖ್ಯಮಂತ್ರಿ ಕಚೇರಿಯಲ್ಲಿ ದೇವರ ಪಟಗಳನ್ನು ಇಡುವುದು ಎಷ್ಟರಮಟ್ಟಿಗೆ ಸರಿ? 2017ರಲ್ಲಿ ಕಾಂಗ್ರೆಸ್ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿತು. ಈಗ ಹಿಂತೆಗೆದುಕೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲೆ ಒತ್ತಡ ಹೆಚ್ಚಾದರೆ ಅಚ್ಚರಿಪಡುವಂತಿಲ್ಲ.

ರಾಮಚಂದ್ರ ಮಂಚಲದೊರೆ, ಗುಬ್ಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.