ಮಂಗಳವಾರ, ನವೆಂಬರ್ 12, 2019
25 °C

ಸಾಮಾಜಿಕ ಹಿತದೃಷ್ಟಿಗೆ ರಾಜಕೀಯ ಸಲ್ಲ

Published:
Updated:

‘ಅತಿವೃಷ್ಟಿಯಿಂದಾದ ಅನಾಹುತವನ್ನು ಸಕಾಲದಲ್ಲಿ ‘ಮಿಡ್ ಸೀಸನ್ ಅಡ್ವರ್ಸಿಟಿ’ ಎಂದು ರಾಜ್ಯ ಸರ್ಕಾರ ಘೋಷಿಸಿದ್ದರೆ ರೈತರಿಗೆ ಪರಿಹಾರದ ಮೊತ್ತ ಹೆಚ್ಚಾಗಿ ಸಿಗುತ್ತಿತ್ತು. ಆದರೆ ಹಾಗೆ ಮಾಡದ ಸರ್ಕಾರದ ಬೇಜವಾಬ್ದಾರಿಯಿಂದ ರೈತರಿಗೆ ನಷ್ಟ ಉಂಟಾಯಿತು’ ಎಂದು ಶಾಸಕ ಕೃಷ್ಣ ಬೈರೇಗೌಡ ವಿಧಾನಸಭೆಯಲ್ಲಿ ಹೇಳಿದ್ದಾರೆ (ಪ್ರ.ವಾ., ಅ. 12). ಹಾಗಿದ್ದರೆ ಅವರು ಮೊದಲೇ ಸರ್ಕಾರಕ್ಕೆ ಈ ಸಲಹೆ ಕೊಡಬಹುದಿತ್ತು. ಅವರು ಯಾವುದೇ ಪಕ್ಷದಲ್ಲಿರಲಿ ರೈತರ ಹಿತದೃಷ್ಟಿಯಿಂದಲಾದರೂ ಹೀಗೆ ನಡೆದುಕೊಳ್ಳಬಹುದಿತ್ತು.

ಯಾರೇ ಆಗಿರಲಿ ಇನ್ನು ಮುಂದೆಯಾದರೂ ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡದೆ ಪಕ್ಷಭೇದ ಮರೆತು, ಸಮಾಜದ ಹಿತದೃಷ್ಟಿಯಿಂದ ಇಂತಹ ವಿಚಾರಗಳನ್ನು ಸರ್ಕಾರದ ಗಮನಕ್ಕೆ ತರಲಿ. ಈ ಮೂಲಕ ರೈತರಿಗೆ ಒಳ್ಳೆಯದನ್ನು ಮಾಡಲಿ.

-ಪವನ್‍ಕುಮಾರ್ ಎಸ್., ಭೋಗನಹಳ್ಳಿ, ಚಳ್ಳಕೆರೆ

ಪ್ರತಿಕ್ರಿಯಿಸಿ (+)