ಬುಧವಾರ, ನವೆಂಬರ್ 13, 2019
18 °C

ಪ್ರವಾಹ ‌| ಏನಾಗಿದೆ ನಮ್ಮ ನಾಯಕರಿಗೆ? ಎಲ್ಲಿ ಹೋಯಿತು ನಮ್ಮತನ?

Published:
Updated:

ಪ್ರವಾಹದಿಂದ ಬೀದಿಗೆ ಬಿದ್ದ ಉತ್ತರ ಕರ್ನಾಟಕ ಭಾಗದ ಜನರು, ಬದುಕನ್ನು ಮತ್ತೆ ಕಟ್ಟಿಕೊಳ್ಳುವ ಧಾವಂತದಲ್ಲಿದ್ದಾರೆ. ಆಶ್ರಯಕ್ಕೆ ಅನುವು ಮಾಡಿಕೊಳ್ಳುವುದಕ್ಕೇ ಒಂದಷ್ಟು ದಿನಗಳು ವ್ಯಯವಾಗಿವೆ. ಇಲ್ಲಿನ ಗ್ರಾಮ ವಾಸಿಗಳನ್ನು ನೋಡಿದರೆ ಮನ ಕಲಕುತ್ತದೆ. ಇಂತಹ ಕಷ್ಟದ ಪರಿಸ್ಥಿಯಲ್ಲೂ ಕರ್ನಾಟಕದ ಮುಂದಾಳುಗಳು, ತಮ್ಮತಮ್ಮಲ್ಲೇ ಜಗಳ ಮಾಡಿಕೊಂಡು ಕುರ್ಚಿಗಾಗಿ ಕಿತ್ತಾಡಿದ್ದನ್ನು ನೆನೆಸಿಕೊಂಡರೆ, ಎಂತಹ ಸ್ಥಿತಿಗೆ ನಾವು ಕರ್ನಾಟಕವನ್ನು ದೂಡಿದ್ದೇವೆ ಎನಿಸುತ್ತದೆ. ಯಾವುದೇ ಟಿ.ವಿ. ಚಾನೆಲ್‌ ತಿರುಗಿಸಿದರೂ ಕಾಣುವುದು, ಅಧಿಕಾರಕ್ಕಾಗಿ ಅಬ್ಬರಿಸುವ ಧ್ವನಿಗಳು. ಎಲ್ಲಿದೆ ಕರ್ನಾಟಕದ ಹಿರಿಮೆ? ಏನಾಗಿದೆ ನಮ್ಮ ನಾಯಕರಿಗೆ? ಎಲ್ಲಿ ಹೋಯಿತು ನಮ್ಮತನ?

–ಗಂಗಾ ಎಸ್‌. ಕೋರಿ, ಸಂಗೂರ, ಹಾವೇರಿ

ಪ್ರತಿಕ್ರಿಯಿಸಿ (+)