ಶುಕ್ರವಾರ, ಅಕ್ಟೋಬರ್ 18, 2019
20 °C

ನೆರೆ ಪರಿಹಾರ ವಿತರಣೆ: ಕಟ್ಟೆಚ್ಚರ ಅಗತ್ಯ

Published:
Updated:

ಈಗ ಕೇಂದ್ರ ಸರ್ಕಾರಕ್ಕೆ ಕರ್ನಾಟಕದಲ್ಲಿ ನೆರೆಯಿಂದ ಆದ ನಷ್ಟ ಮತ್ತು ಸಂತ್ರಸ್ತರ ಕಷ್ಟ ಗಮನಕ್ಕೆ ಬಂದಂತಿದೆ. ಇಷ್ಟರಲ್ಲೇ ಪರಿಹಾರದ ಹಣವೂ ಬಿಡುಗಡೆ ಆಗಬಹುದು. ಈ ಹಣಕ್ಕಾಗಿ ಸಂತ್ರಸ್ತರಿಗಿಂತಲೂ ಹೆಚ್ಚು ಕಾತರದಿಂದ ಪಟ್ಟಭದ್ರ ಹಿತಾಸಕ್ತಿಗಳು ಕಾದಿರುವುದನ್ನು ಸರ್ಕಾರ ಮರೆಯಬಾರದು.

ಬಿಡುಗಡೆಯಾದ ಹಣವನ್ನು ನೇರವಾಗಿ ಸಂತ್ರಸ್ತರಿಗೆ ತಲುಪಿಸುವ ದೊಡ್ಡ ಜವಾಬ್ದಾರಿ ಜಿಲ್ಲಾಧಿಕಾರಿಗಳ ಮೇಲಿದೆ. ಸಂಸದರು, ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಕಣ್ಗಾವಲಲ್ಲಿ ಪರಿಹಾರ ವಿತರಣೆ ಕಾರ್ಯ ಕ್ರಮಬದ್ಧವಾಗಿ ನಡೆಯಬೇಕಿದೆ.

ಬಿಡುಗಡೆಯಾದ ಹಣ ಸ್ವಲ್ಪ ಎಚ್ಚರ ತಪ್ಪಿದರೂ ಗುಳುಂ ಆಗುವ ಸಾಧ್ಯತೆ ಇರುತ್ತದೆ. ಇಂತಹ ಗುಳುಂ ಕುಳಗಳು ಸರ್ಕಾರದಲ್ಲೇ ಇರುತ್ತವೆ. ಕಠಿಣ ಶಿಕ್ಷೆಯಿಂದ ನಿಯಂತ್ರಿಸಲು ಸಾಧ್ಯ. ಪರಿಹಾರ ಹಣದ ಸಮರ್ಪಕ ವಿತರಣೆಯು ಸರ್ಕಾರದ ಜನಪರ ಕಾಳಜಿಗೆ ಮತ್ತು ಅದರ ಸಾಮರ್ಥ್ಯಕ್ಕೆ ಅಗ್ನಿಪರೀಕ್ಷೆ. ವಿರೋಧ ಪಕ್ಷಗಳೂ ಸರ್ಕಾರದೊಡನೆ ಕೈಜೋಡಿಸಿ ಸಹಕರಿಸಲಿ.

– ಸತ್ಯಬೋಧ, ಬೆಂಗಳೂರು

Post Comments (+)