ಗುರುವಾರ , ಜೂನ್ 24, 2021
27 °C

ವಾಚಕರ ವಾಣಿ | ಸಿಂಧುತ್ವ ಪ್ರಮಾಣಪತ್ರ: ಆತಂಕ ನಿವಾರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿರುವವರಿಗೆ ಸಿಂಧುತ್ವ ಪ್ರಮಾಣಪತ್ರಕ್ಕಾಗಿ ಅಧಿಕೃತ ಜಾಲತಾಣದಲ್ಲಿ ತಮ್ಮ ದಾಖಲೆಗಳನ್ನು ಸಲ್ಲಿಸುವಂತೆ ತಿಳಿಸಲಾಗಿದೆ. ಆದರೆ, ಈ ಜಾಲತಾಣ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಎಲ್ಲ ತರಹದ ಸಿಂಧುತ್ವಗಳಿಗೂ ಒಂದೇ ಜಾಲತಾಣವನ್ನು ನೀಡಿದ್ದು, ದಿನದ ಇಪ್ಪತ್ತನಾಲ್ಕು ಗಂಟೆಯೂ ‘ಸರ್ವರ್‌ ಎರರ್‌’ ಎಂದು ತೋರಿಸುತ್ತಿದೆ. ದೂರು ಹೇಳಲು ಅಥವಾ ಸಹಾಯ ಕೇಳಲು ಸಹಾಯವಾಣಿ ನಂಬರನ್ನೂ ನೀಡಿಲ್ಲ. ಇದರಿಂದ ಆಕಾಂಕ್ಷಿಗಳು ಸಮಯಕ್ಕೆ ಸರಿಯಾಗಿ ಪ್ರಮಾಣಪತ್ರವನ್ನು ಸಲ್ಲಿಸಲಾಗದೆ ಕಂಗಾಲಾಗಿದ್ದಾರೆ. ಸರ್ಕಾರ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. 

-ಓಬಳೇಶ ಎನ್., ತುಮಕೂರು
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು