ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪೂರ್ಣ ಲಾಕ್‌ಡೌನ್‌ ತರವೇ?

Last Updated 28 ಜೂನ್ 2020, 19:30 IST
ಅಕ್ಷರ ಗಾತ್ರ

ಭಾನುವಾರ ಲಾಕ್‌ಡೌನ್ ಸುದ್ದಿ (ಪ್ರ.ವಾ., ಜೂನ್‌ 28) ಓದಿ, ರಾಜ್ಯ ಸರ್ಕಾರದ ಅನಿಶ್ಚಿತ ಧೋರಣೆ ಬೇಸರ ತಂದಿತು. ರಾತ್ರಿ ಕರ್ಫ್ಯೂ ಅವಧಿಯನ್ನು ಒಂದು ಗಂಟೆ ಏರಿಕೆ ಮಾಡುವುದರಿಂದ ಏನು ಸಾಧಸಲಾಗುತ್ತದೆ? ಭಾನುವಾರ ‘ಸಂಪೂರ್ಣ’ ಲಾಕ್‌ಡೌನ್ ಮಾಡುವ ಕಾರಣ ಶನಿವಾರ ಜನಜಂಗುಳಿ ಹೆಚ್ಚಾಗಬಹುದಲ್ಲವೇ? ವಾರಾಂತ್ಯದ ಶಾಪಿಂಗ್ ಮಾಡುವವರು ಈಗ ದೂರ ಹೋಗುತ್ತಿಲ್ಲ.

ಸೋಂಕಿತರು, ಮೃತರ ಸಂಖ್ಯೆ ಅಸಹಜವಾಗಿಯೇನೂ ಏರಿಲ್ಲ. ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಿದರೆ ಇನ್ನಷ್ಟು ವಾಸ್ತವಿಕ ಸ್ಥಿತಿ ತಿಳಿದೀತು. ಕೆಲವೆಡೆ ತಪ್ಪು ನಿರ್ಣಯಗಳಾಗಿವೆ. ರಾಜ್ಯಕ್ಕೆಲ್ಲ ಒಂದು ವಿಧಾನ ಅನುಸರಿಸುವ ಸ್ಥಿತಿ ಈಗಿಲ್ಲ.

ಕರ್ನಾಟಕ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಜನರಿಗೆ ಮಾಹಿತಿ ರವಾನಿಸುವುದರಲ್ಲಿ ಕೊರತೆ ಇದೆ. ತೀರ್ಮಾನಗಳನ್ನು ರಾಜಕಾರಣಿಗಳೇ ತೆಗೆದುಕೊಳ್ಳಲಿ. ಆದರೆ ಪ್ರತಿದಿನ ಸಂಬಂಧಪಟ್ಟ ಉನ್ನತ ಅಧಿಕಾರಿಗಳು ನಿಶ್ಚಿತ ಸಮಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪ್ರಶ್ನೆಗಳಿಗೆ ಉತ್ತರ ನೀಡುವ ಪದ್ಧತಿ ಅನುಸರಿಸಲಿ.

-ಎಚ್.ಎಸ್.ಮಂಜುನಾಥ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT