ಬುಧವಾರ, ಏಪ್ರಿಲ್ 14, 2021
25 °C

ಸಚಿವ ಖಾತೆ ಕುಟುಂಬದ ಆಸ್ತಿಯಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಮೇಶ ಜಾರಕಿಹೊಳಿ ಅವರು ಲೈಂಗಿಕ ಹಗರಣದಲ್ಲಿ ತಮ್ಮ ವಿರುದ್ಧ ಆರೋಪ ಕೇಳಿಬಂದ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಸ್ವಾಗತಾರ್ಹ. ಆದರೆ, ಅವರು ಹೊಂದಿದ್ದ ಜಲಸಂಪನ್ಮೂಲ ಖಾತೆಯನ್ನು ಅವರ ಕುಟುಂಬದ ಸದಸ್ಯರಿಗೆ ಅಥವಾ ಅವರಿಗೆ ಆಪ್ತರಾಗಿ ಇರುವವರಿಗೇ ನೀಡಬೇಕೆಂಬ ಮತ್ತು ಆರೋಪಮುಕ್ತರಾದೊಡನೆ ಪುನಃ ಅದೇ ಖಾತೆಯನ್ನು ಅವರಿಗೆ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ ಎಂದು ಕೆಲವು ಪತ್ರಿಕೆಗಳಲ್ಲಿ ವರದಿಯಾಗಿದೆ.

ಇದು ನಿಜವೇ ಆಗಿದ್ದರೆ ಆಶ್ಚರ್ಯಕರ. ಸರ್ಕಾರದ ಜವಾಬ್ದಾರಿಗಳು, ಖಾತೆಗಳು ರಾಜ್ಯದ ಜನರ ಒಳಿತಿಗಾಗಿ ಇರುತ್ತವೇ ಹೊರತು ಸ್ವಹಿತಾಸಕ್ತಿಗೆ ಬಳಸಿಕೊಳ್ಳಲು ಅಲ್ಲ. ಖಾತೆಗಳನ್ನು ಬಸ್ಸಿನಲ್ಲಿ ಸೀಟು ಹಿಡಿಯಲು ಹಾಕುವ ಕರವಸ್ತ್ರದಂತೆ ಬಳಕೆ ಮಾಡಿಕೊಳ್ಳದೆ, ಜನರ ಶ್ರೇಯೋಭಿವೃದ್ಧಿಗೆ ಪೂರಕವಾಗುವಂತೆ ನೋಡಿಕೊಳ್ಳಬೇಕು. ಅಧಿಕಾರವನ್ನು ದಕ್ಷತೆ, ಜ್ಞಾನ ಮತ್ತು ಅನುಭವದ ಆಧಾರದ ಮೇಲೆ ಹಂಚಿಕೆ ಮಾಡಬೇಕು.

–ಮಹಾಂತೇಶ ಮಾಗನೂರ, ಬೆಂಗಳೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು