ಹೊಸ ಸರ್ಕಾರ: ಜನರ ತೆರಿಗೆ ಹಣ ವ್ಯರ್ಥ

ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿಯ ಪದಗ್ರಹಣಕ್ಕೆ ತಯಾರಿ ನಡೆದಿದೆ. ಹೊಸ
ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಜನರ ತೆರಿಗೆ ಹಣವೂ ವ್ಯರ್ಥವಾಗುತ್ತದೆ. ಇದಕ್ಕೆ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳ ಮೇಲೆ ಅಳವಡಿಸಿರುವ ಸರ್ಕಾರಿ ಯೋಜನೆ
ಗಳ ಕುರಿತ ಪೋಸ್ಟರ್ಗಳೇ ನಿದರ್ಶನ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ
ಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬಸ್ಗಳ ಮೇಲೆ ಹಾಕಿರುವ ಪೋಸ್ಟರ್, ಜಾಹೀರಾತು, ಬ್ಯಾನರ್ ಇತ್ಯಾದಿ ಬದಲಾಯಿಸಿ ಹೊಸದಾಗಿ ಅಳವಡಿಸಬೇಕಿದೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚಾಗುತ್ತದೆ. ಈಗಾಗಲೇ ಸರ್ಕಾರವು ಗ್ಯಾರಂಟಿ ಯೋಜನೆಗಳಿಂದ ಬಸವಳಿದಿದೆ. ಹಾಗಾಗಿ, ಈ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಿ ಸಾರ್ವಜನಿಕರ ಹಣ ಪೋಲಾಗದಂತೆ ಎಚ್ಚರವಹಿಸಲಿ.

⇒ಗೋವಿಂದ ಎಸ್. ಭಟ್, ಶಿರಸಿ

ಮಕ್ಕಳು ಕೌಟುಂಬಿಕ ಪರಿಸರದ ಕನ್ನಡಿ!

ಮಕ್ಕಳು ಓದುತ್ತಿಲ್ಲವೆಂದು ಪೋಷಕರು ದೂರುವುದು ಸರ್ವೇ ಸಾಮಾನ್ಯ. ಆದರೆ, ಮನೆಗಳಲ್ಲಿ ಪೋಷಕರು ಹೇಗೆ ನಡೆದುಕೊಳ್ಳುತ್ತಾರೆ, ಮನೆಯ ವಾತಾವರಣ ಹೇಗಿದೆ ಎನ್ನುವುದರ ಮೇಲೆ ಮಕ್ಕಳು ಸ್ವಯಂಪ್ರೇರಿತರಾಗಿ ಓದುತ್ತಾರೆ. ಕೆಲವು ಮಕ್ಕಳು ಆ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳಲು ಆಗದೆ ಓದದೇ ಇರಬಹುದು. ಪೋಷಕರು ಮೊಬೈಲ್ ನೋಡುತ್ತಾ ಕೂರುವುದು, ಧಾರಾವಾಹಿ ನೋಡುವುದು, ಸಣ್ಣಪುಟ್ಟ ವಿಚಾರಗಳಿಗೆ ದಂಪತಿ ನಡುವೆ ಜಗಳ – ಇವೆಲ್ಲ ಮಕ್ಕಳ ಬೌದ್ಧಿಕತೆಯ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ, ಮನೆಯಲ್ಲಿನ ಹಿರಿಯರು ಶಿಸ್ತು, ಬದ್ಧತೆ, ತಾಳ್ಮೆ, ಸಹನೆ ಹಾಗೂ ಕ್ರಿಯಾತ್ಮಕವಾಗಿ ನಡೆದುಕೊಳ್ಳಬೇಕು.

⇒ಪ್ರಸನ್ನಕುಮಾರ್ ಕೆ., ಪೆತ್ತಾಂಡ್ಲಳ್ಳಿ

ಬದುಕಿನ ಗಾಯನ ಮುಗಿಸಿದ ಸುಮನ್

ಸುಪ್ರಸಿದ್ಧ ಹಿನ್ನೆಲೆ ಗಾಯಕಿ ಸುಮನ್ ಕಲ್ಯಾಣಪುರ್ ಅವರು ನಿಧನರಾಗಿದ್ದಾರೆ. ಬಾಂಗ್ಲಾದೇಶದ ಢಾಕಾದಲ್ಲಿ ಜನಿಸಿದ್ದ ಅವರ ಬೇರುಗಳು ಕರ್ನಾಟಕದ ಉಡುಪಿ
ಯಲ್ಲೂ ಬೆಸೆದುಕೊಂಡಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಕನ್ನಡದ ಕೆಲವು ಚಿತ್ರಗಳ ಹಾಡಿಗೆ ಅವರು ಜೀವ ತುಂಬಿದ್ದಾರೆ. ಅದರಲ್ಲೂ ‘ಕಲಾವತಿ’ ಚಿತ್ರದ ‘ಒಡನಾಡಿ ಬೇಕೆಂದು...’ ಹಾಡು ಈಗಲೂ ಕೇಳಬೇಕೆನ್ನುವಷ್ಟು ಮಧುರವಾಗಿದೆ. ಲತಾ ಮಂಗೇಶ್ಕರ್ ಅವರ ಪ್ರಭಾವದ ನಡುವೆಯೂ ಬಾಲಿವುಡ್ನಲ್ಲಿ ಸ್ವಂತಿಕೆ ಉಳಿಸಿಕೊಂಡಿದ್ದು ಅವರ ಹೆಗ್ಗಳಿಕೆ. ಎಂಬತ್ತೊಂಬತ್ತು ವರ್ಷಗಳ ಸಾರ್ಥಕ ಬದುಕು ಸಾಗಿಸಿದ ಅವರಿಗೆ ಭಾವಪೂರ್ಣ ನಮನ.

⇒ಚಂದ್ರಶೇಖರ್, ಕಣಜನಹಳ್ಳಿ

ತಬ್ಬಲಿ ಸಮುದಾಯ ತಬ್ಬುವವರು ಯಾರು?

‘ಹಕ್ಕಿಲ್ಲದ ಹಕ್ಕಿಪಿಕ್ಕಿಗಳು’ ವರದಿಯು (ಒಳನೋಟ, ಪ್ರ.ವಾ., ಮೇ 31) ತಬ್ಬಲಿ ಸಮುದಾಯ ಅನುಭವಿಸುತ್ತಿರುವ ಸಂಕಷ್ಟವನ್ನು ತೆರೆದಿಟ್ಟಿದೆ. ಸ್ವಾತಂತ್ರ್ಯ ಬಂದು ಏಳೂವರೆ ದಶಕಗಳು ಉರುಳಿದರೂ ಈ ಜನಾಂಗ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಎಂಬುದಿಲ್ಲ. ಇಂದಿಗೂ ಇವರ ಪರಿಸ್ಥಿತಿ ಶೋಚನೀಯವಾಗಿದೆ. ಇದು ಆಳುವ ವರ್ಗದ ನಿರ್ಲಕ್ಷ್ಯವನ್ನು ಬಯಲುಗೊಳಿಸಿದೆ. ಸತ್ತಾಗ ಹೂಳಲು ಸ್ಮಶಾನ ಇಲ್ಲ; ಶಿಕ್ಷಣವಂತು ಗಗನಕುಸುಮವಾಗಿದೆ. ಇನ್ನಾದರೂ ಅವರ ಬಗ್ಗೆ ಕರುಣೆ ತೋರಿ ಸಂವಿಧಾನದತ್ತವಾದ ಸೌಲಭ್ಯ ನೀಡಲು ಸರ್ಕಾರ ಮುಂದಾಗಲಿ.

⇒ಯಲುವಹಳ್ಳಿ ಸೊಣ್ಣೇಗೌಡ, ಚಿಕ್ಕಬಳ್ಳಾಪುರ

ಅಂಚೆ ಕಚೇರಿಗಳಿಗೆ ಬೇಕಿದೆ ತಾಂತ್ರಿಕ ಸ್ಪರ್ಶ

ಭಾರತೀಯ ಅಂಚೆ ಇಲಾಖೆಯು ವಿಶ್ವದಲ್ಲಿಯೇ ಅತಿ ದೊಡ್ಡದಾದ ಸೇವಾಜಾಲ ಹೊಂದಿದೆ. ಅದು ದೇಶದ ಭಾವನಾತ್ಮಕ ಕೊಡುಗೆಯೂ ಹೌದು. ಖಾಸಗಿ ಸಂಸ್ಥೆ
ಗಳು ಲಾಭವಿಲ್ಲದ ಕಡೆ ಸೇವೆ ನೀಡಲು ಹಿಂಜರಿಯುವಾಗ ಅಂಚೆ ಇಲಾಖೆಯು ಜನಸಾಮಾನ್ಯರ ಪಾಲಿಗೆ ಆಶಾಕಿರಣವಾಗಿದೆ. ಜನಸಾಮಾನ್ಯರ ದೃಷ್ಟಿಯಿಂದ ಇದರ ಅಗತ್ಯವೂ ಇದೆ. ಆದರೆ, ಅಂಚೆ ಕಚೇರಿಗಳಲ್ಲಿ ಸಮರ್ಪಕವಾಗಿ ತಂತ್ರಜ್ಞಾನದ ಬಳಕೆಯಾಗುತ್ತಿಲ್ಲ. ಇದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಸಿಬ್ಬಂದಿ ಕೊರತೆಯು ಗ್ರಾಹಕರ ಸೇವೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.ಕೇಂದ್ರ ಸರ್ಕಾರವು ಇಲಾಖೆಯ ಪ್ರಗತಿ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಿದೆ.

⇒ಬಿ.ಎಸ್. ಮುಳ್ಳೂರ ಹಲಗತ್ತಿ, ರಾಮದುರ್ಗ

ಜನರ ಸಂಕಷ್ಟಗಳಿಗೆ ಬಂಡೆ ಬೆಣ್ಣೆಯಾಗಲಿ

‘ಕನಕಪುರದ ಬಂಡೆ’ ಎಂದೇ ಹೆಸರಾದ ಡಿ.ಕೆ. ಶಿವಕುಮಾರ್ ಅವರು ಮುಖ್ಯ
ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಅವರಿಗೆ ಅವರೇ ಕೇಳುವಂತೆ ‘ಕೂಲಿ’ ದೊರಕಿದೆ. ಮುಖ್ಯ
ಮಂತ್ರಿ ಗಾದಿಯಲ್ಲಿ ಕುಳಿತು ಅಹವಾಲು ಸಲ್ಲಿಸುವವರಿಗೆ, ಜನರ ಬೇಡಿಕೆಗಳಿಗೆ ಕರಗದ ಬಂಡೆಯಾಗದೆ, ತಕ್ಷಣವೇ ಸ್ಪಂದಿಸಿ ಕರಗುವ ಬೆಣ್ಣೆಯಾಗಲಿ.

⇒ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಶುಲ್ಕಕ್ಕೆ ಕಡಿವಾಣ: ಇಚ್ಛಾಶಕ್ತಿ ಪ್ರದರ್ಶಿಸಿ

ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು, ಖಾಸಗಿ ಶಾಲೆಗಳ ಪ್ರವೇಶಕ್ಕಾಗಿ ಸರ್ಕಾರ ನಿಗದಿಪಡಿಸಿರುವ ಬೋಧನಾಶುಲ್ಕವನ್ನು ಸೂಚನಾ ಫಲಕದಲ್ಲಿ ಪ್ರಕಟಿಸಬೇಕು; ಹೆಚ್ಚಿನ ಶುಲ್ಕ ಪಡೆಯಬಾರದು ಎಂದು ಆದೇಶಿಸಿದ್ದಾರೆ. ಪೋಷಕರಿಂದ ದೂರು ಬಂದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಪ್ರಸಕ್ತ ಶೈಕ್ಷಣಿಕವರ್ಷದಲ್ಲಿ ಶುಲ್ಕವನ್ನು ಮನಸೋಇಚ್ಛೆ ಹೆಚ್ಚಿಸಿವೆ. ಬಹಳಷ್ಟು ಶಾಲಾ
ಕಾಲೇಜುಗಳು ರಾಜಕಾರಣಿಗಳು ಮತ್ತು ಮಠಾಧೀಶರ ಹಿಡಿತದಲ್ಲಿವೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ಅವರು ರಾಜ್ಯದಲ್ಲೂ ಶುಲ್ಕ ಕಡಿವಾಣಕ್ಕೆ ಇಚ್ಛಾಶಕ್ತಿ-ಬದ್ಧತೆ ಪ್ರದರ್ಶಿಸಲಿ.

-ಬೂಕನಕೆರೆ ವಿಜೇಂದ್ರ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.