ಕನ್ನಡ ಭಾಷಾ ಕಲಿಕೆ: ಆತಂಕಕಾರಿ ಹಿನ್ನಡೆ

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಸ್ಎಸ್ಎಲ್ಸಿ ಪರೀಕ್ಷೆಯ ಕನ್ನಡ ಭಾಷಾ ವಿಷಯ
ದಲ್ಲಿ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗುವಂತಾಗಲು 16 ಶಿಫಾರಸುಗಳನ್ನು ರೂಪಿಸಿರುವುದು ಸಮಯೋಚಿತ. ಶಿಕ್ಷಣ ಸಂಸ್ಥೆಗಳು, ಪೋಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳಷ್ಟೆ ಮುಖ್ಯವೆಂಬ ಭ್ರಾಮಕಲೋಕ ರೂಪಿಸಿಕೊಂಡಿದ್ದಾರೆ. ಇದರಿಂದ ಕನ್ನಡ ವಿಷಯ ಲೆಕ್ಕಕ್ಕೇ ಇಲ್ಲದಂತಾಗಿದೆ. ಹಾಗೆ ನೋಡಿದರೆ ಎಲ್ಲ ವಿಷಯಗಳ ಜ್ಞಾನಾರ್ಜನೆಗೆ ಮೂಲ ವಾದುದು ಭಾಷೆ. ಭಾಷೆಯ ಮೂಲಕವೇ ಜ್ಞಾನವಿಕಾಸ ಸಾಧ್ಯ. ಆದ್ದರಿಂದ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕಾಗಿದೆ. ಕನ್ನಡ ಶಿಕ್ಷಕರು ಉಳಿದ ವಿಷಯಗಳ ಶಿಕ್ಷಕರಂತೆ ಪಠ್ಯಪುಸ್ತಕದಲ್ಲಿರುವ ಗದ್ಯ–ಪದ್ಯಗಳ ಅರ್ಥ ತಿಳಿಸುವ ಕೆಲಸ ಮಾಡುತ್ತಿ ದ್ದಾರೆಯೇ ಹೊರತು ಭಾಷಾ ಕಲಿಕೆಯ ಕಡೆಗೆ ಗಮನ ಕೊಡುತ್ತಿಲ್ಲ. ಕನ್ನಡವನ್ನು ಓದುವುದು, ಬರೆಯುವುದು ಮತ್ತು ಮಾತನಾಡುವುದು ಮುಖ್ಯವಾಗಬೇಕಿದೆ.

⇒ಪು.ಸೂ. ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

ವಿದೇಶಿ ಕಲಿಕೆಯಲ್ಲಿ ಯಾವ ಹಿಂದುತ್ವವಿದೆ?

ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಹೆಗಡೆಯವರು ‘ತಮ್ಮ ಪುತ್ರ ಅಶುತೋಷ್ ವಿದೇಶದಲ್ಲಿ ಓದುತ್ತಿದ್ದಾನೆ; ಪ್ರಕರಣವೊಂದರಲ್ಲಿ ಅವನ ಪಾಸ್ ಪೋರ್ಟ್ ದಾಬಸ್ಪೇಟೆ ಪೊಲೀಸರಿಂದ ಜಪ್ತಿಯಾಗಿದೆ. ಇದರಿಂದ ಅವನ ವ್ಯಾಸಂಗಕ್ಕೆ ತೊಂದರೆಯಾಗುತ್ತಿದೆ. ಅವನನ್ನು ಪ್ರಕರಣದಿಂದ ಕೈಬಿಡಿ’ ಎಂದು ಹೈಕೋರ್ಟ್ಗೆ ಕೋರಿದ್ದಾರೆ. ಅವರ ಮಗನನ್ನು ಬಿಡಬಹುದು ಅಥವಾ ಬಿಡದೇ ಇರಬಹುದು; ಅದು ಕೋರ್ಟಿಗೆ ಬಿಟ್ಟ ವಿಚಾರ. ಪ್ರಶ್ನೆ ಇರುವುದು ಹಿಂದುತ್ವದ ಪ್ರತಿಪಾದಕರಾದ ಅವರು ಭಗವಾಧ್ವಜ, ಬಜರಂಗದಳ, ಭಗವದ್ಗೀತೆ, ಕೇಸರಿ, ಗುರುಕುಲ, ದೇವರು, ಧರ್ಮ, ಗೋವಿನ ಬಗ್ಗೆ ಬೇರೆಯವರ ಮಕ್ಕಳಿಗೆ ಭಾಷಣ ಮಾಡುತ್ತಾ, ತಮ್ಮ ಮಕ್ಕಳನ್ನು ಕಲಿಕೆಗಾಗಿ ವಿದೇಶಗಳಿಗೆ ಏಕೆ ಕಳಿಸುತ್ತಾರೆ? ವಿದೇಶ
ದಲ್ಲಿ ಯಾವ ಹಿಂದುತ್ವವಿದೆ? ತಮ್ಮ ಮಕ್ಕಳ ವ್ಯಾಸಂಗ, ಉದ್ಯೋಗ, ವ್ಯಾಪಾರ ಮತ್ತು ಸಂಬಂಧ ಬೆಳೆಸಲು ವಿದೇಶಗಳೇ ಬೇಕೆನ್ನುವ ಈ ಹಿಂದುತ್ವವಾದಿ ಮುಖಂಡರು, ಬೇರೆಯವರ ಮಕ್ಕಳಲ್ಲಿ ಕೋಮುದ್ವೇಷ ಬಿತ್ತುವುದು ಸರಿಯೇ?

-ತಾ.ಸಿ. ತಿಮ್ಮಯ್ಯ, ಬೆಂಗಳೂರು

ಸರ್ಕಾರಿ ಕಾಲೇಜುಗಳ ವ್ಯವಸ್ಥಿತ ಅವನತಿ

ಸರ್ಕಾರಿ ಪಿಯು ಕಾಲೇಜುಗಳ ಫಲಿತಾಂಶ ಕುಸಿತ ಕಂಡಿರುವುದು ಶಿಕ್ಷಣ ವ್ಯವಸ್ಥೆಯ
ಬಿಕ್ಕಟ್ಟನ್ನು ಸೂಚಿಸುತ್ತದೆ. ಖಾಸಗಿ ಕಾಲೇಜುಗಳು ಶೇ 90ರಷ್ಟು ಫಲಿತಾಂಶ ದಾಖಲಿಸುತ್ತಿದ್ದರೆ, ಸರ್ಕಾರಿ ಕಾಲೇಜುಗಳ ಫಲಿತಾಂಶ ಶೇ 65ರಿಂದ ಶೇ 70ರಷ್ಟಿದೆ.
ಉಪನ್ಯಾಸಕರ ಕೊರತೆ ಮತ್ತು ಅವರಿಗೆ ಬೋಧನೆಯ ಜೊತೆಗೆ ಇತರೆ ಇಲಾಖೆಯ
ಕೆಲಸಗಳ ಹೊರೆ ನೀಡಿರುವುದು ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಿದೆ.
ಪ್ರಯೋಗಾಲಯಗಳ ಕೊರತೆಯಿಂದ ವಿಜ್ಞಾನದಂತಹ ವಿಷಯಗಳಲ್ಲಿ ವಿದ್ಯಾರ್ಥಿ ಗಳು ಹಿಂದುಳಿಯುತ್ತಿದ್ದಾರೆ. ಸರ್ಕಾರಿ ಕಾಲೇಜುಗಳಲ್ಲಿ ನುರಿತ ಉಪನ್ಯಾಸಕರಿದ್ದಾರೆ. ಆದರೆ, ಅವರಿಗೆ ಪೂರಕ ವಾತಾವರಣದ ಅಗತ್ಯವಿದೆ. ಮೂಲಸೌಕರ್ಯದ ಕೊರತೆಯು ಫಲಿತಾಂಶದ ಹಿನ್ನಡೆಗೆ ಕಾರಣ. ಬಡ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿ ಯಿಂದ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸುವುದು ಇಂದಿನ ತುರ್ತು.

-ವಿಜಯಕುಮಾರ ಎಚ್.ಕೆ., ರಾಯಚೂರು

ಗೃಹಲಕ್ಷ್ಮಿ ಹಣ: ಖಾಸಗಿ ಕಂಪನಿಗಳ ಪಾಲು

ಆರ್ಥಿಕವಾಗಿ ಹಿಂದುಳಿದ ಬಡ ಮಹಿಳೆಯರಿಗೆ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಯಡಿ ನೀಡುತ್ತಿರುವ ಹಣವನ್ನು ಖಾಸಗಿ ಹಣಕಾಸು ಕಂಪನಿಗಳು, ತಾವು ನೀಡಿ ರುವ ಸಾಲದ ಕಂತಿಗೆ ಜಮೆ ಮಾಡಿಕೊಳ್ಳುತ್ತಿವೆ. ಇದರಿಂದ ಕೈಗೆ ಬಂದ ತುತ್ತು
ಬಾಯಿಗೆ ಬರದಂತಾಗಿದೆ. ಬಡ ಮಹಿಳೆಯರಿಗೆ ಸರ್ಕಾರದಿಂದ ಉಚಿತ ಧನ ಸಹಾಯ ದೊರೆಯುತ್ತದೆಂಬ ನಂಬಿಕೆಯ ಆಧಾರದ ಮೇಲೆ ಕಂಪನಿಯವರು ಮಹಿಳೆಯರಿಗೆ ಸಾಲ ಕೊಟ್ಟಿಲ್ಲ ಎಂಬುದನ್ನು ಮನಗಾಣಬೇಕಿದೆ. ಹಣ ಕಡಿತ ಗೊಳಿಸುತ್ತಿರುವ ಕಂಪನಿಗಳ ವಿರುದ್ಧ ಕ್ರಮ ಜರುಗಿಸಲು ಸರ್ಕಾರ ಮುಂದಾಗಿರು ವುದು ಸಮಯೋಚಿತ ನಡೆ.

-ಎಲ್. ಚಿನ್ನಪ್ಪ, ಬೆಂಗಳೂರು

ತಂತ್ರಜ್ಞಾನದ ಬೆಳಕಿನಲ್ಲಿ ಅಜ್ಞಾನದ ಕತ್ತಲು

ಉತ್ತರಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಹಾವು ಕಡಿತದಿಂದ ಅಮಿತ್ ಎಂಬ ಬಾಲಕ, ಆತನ ತಂದೆ–ತಾಯಿ ಹಾಗೂ ಊರಿನವರು ಮೌಢ್ಯಕ್ಕೆ ಬಲಿಯಾಗಿ
ರುವುದು ದುರದೃಷ್ಟಕರ. ಮಂಗಳಯಾನ, ಚಂದ್ರಯಾನ ಸಾಧ್ಯವಾಗುತ್ತಿರುವ ಈ ದೇಶದಲ್ಲಿ ಗಂಗಾನದಿಯಲ್ಲಿ ಮುಳುಗಿಸಿದರೆ ಹಾವಿನ ವಿಷ ಹೊರಹೋಗುತ್ತದೆ
ಎಂದು ನಂಬುವ ಜನರೂ ಇದ್ದಾರೆ ಎಂಬುದು ವಿಪರ್ಯಾಸ. ದೇಶವು ತಂತ್ರಜ್ಞಾನ
ದಲ್ಲಿ ಎಷ್ಟೇ ಅಭಿವೃದ್ಧಿ ಸಾಧಿಸಿದರೂ ಜನಸಾಮಾನ್ಯರಲ್ಲಿನ ಮೌಢ್ಯ ಹೋಗಲಾಡಿಸ ದಿದ್ದರೆ ಎಲ್ಲವೂ ನಿಷ್ಪ್ರಯೋಜಕ. ಆಡಳಿತದ ಚುಕ್ಕಾಣಿ ಹಿಡಿದವರು, ಸಂಘ–ಸಂಸ್ಥೆಗಳು ಮೌಢ್ಯ ತೊಲಗಿಸಲು ಕಾರ್ಯೋನ್ಮುಖರಾಗಬೇಕಿದೆ.

-ಟಿ. ಜಯರಾಂ, ಕೋಲಾರ

ಸಿಲಿಂಡರ್ ವಿತರಣೆ: ನಿಲ್ಲದ ಗೊಂದಲ

ಕೊಲ್ಲಿ ಯುದ್ಧದ ಕಾರಣದಿಂದಾಗಿ ಎಲ್ಪಿಜಿ ಸಿಲಿಂಡರ್ ಅಭಾವವಾಗಿದೆ. ಆದರೆ, ಗ್ಯಾಸ್ ಬುಕ್ಕಿಂಗ್ ಮಾಡಿದ ಬಳಿಕ ಎಷ್ಟು ದಿನಗಳಿಗೆ ವಿತರಣೆಯಾಗು ತ್ತದೆ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಎರಡು ಸಿಲಿಂಡರ್ಗಳ ಸಂಪರ್ಕ ಇದ್ದವರು ಹೇಗೋ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಆದರೆ, ಒಂದೇ ಸಿಲಿಂಡರ್ ಇದ್ದವರಿಗೆ ತೊಂದರೆಯಾಗುತ್ತಿದೆ. ಗ್ಯಾಸ್ ವಿತರಕರು ಬುಕ್ಕಿಂಗ್ ಮಾಡಿದ ಬಳಿಕ ವಿತರಣೆಯ ದಿನಾಂಕದ ಬಗ್ಗೆ ಸರಿಯಾಗಿ ಮಾಹಿತಿ ನೀಡುವುದಿಲ್ಲ. ಕೆಲವು ಏಜೆನ್ಸಿಯವರು ಒಂದು ವಾರವೆಂದರೆ, ಮತ್ತೆ ಕೆಲವರು 15 ದಿನ ಗಳ ಗಡುವು ನೀಡುತ್ತಿದ್ದು, ಈ ಬಗ್ಗೆ ಕೇಂದ್ರ ಸ್ಪಷ್ಟ ವಿವರಣೆ ನೀಡಬೇಕಿದೆ.

-ಎಸ್.ಎಂ. ಚಂದ್ರಮೌಳಿ ಸ್ವಾಮಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.