ಬದಲಾವಣೆಯೇ ಪ್ರಜಾತಂತ್ರದ ಉಸಿರು

ಪಂಚ ರಾಜ್ಯಗಳ ಚುನಾವಣೆಯು ಪ್ರಜಾಪ್ರಭುತ್ವದ ಶಕ್ತಿಯನ್ನು ಅಭಿವ್ಯಕ್ತಿಸಿದೆ. ಮತದಾರರು ಆಡಳಿತ ಪಕ್ಷದ ವೈಖರಿಗೆ ರೋಸಿ ಹೋಗಿದ್ದರೆನಿಸುತ್ತದೆ. ಹೊಸ ನಾಯಕತ್ವದ ನಿರೀಕ್ಷೆಯಲ್ಲಿ ಪ್ರಜೆಗಳು ಮತ ಚಲಾಯಿಸಿದ್ದಾರೆ. ಮತದಾನ ಪ್ರಜಾಪ್ರಭುತ್ವದ ಪ್ರಬಲ ಅಸ್ತ್ರವೆಂದು ಮತ್ತೊಮ್ಮೆ ಸಾಬೀತಾಗಿದೆ. ಜನರು ಪೂರ್ಣ ಪ್ರಮಾಣದಲ್ಲಿ ಮತದಾನ ಮಾಡಿದರೆ ಬೇರುಬಿಟ್ಟಿರುವ ರಾಜಕೀಯ ಪಕ್ಷಗಳಿಗೆನಡುಕ ಉಂಟಾದೀತು. ಹೊಸ ಪಕ್ಷಗಳ ಮೇಲೆ ಭರವಸೆ ಇಟ್ಟಿರುವ ಜನರ ನಂಬಿಕೆ
ಉಳಿಸಿಕೊಂಡರಷ್ಟೇ ಗೆದ್ದವರಿಗೆ ಉಳಿಗಾಲ. ಚುನಾವಣೆ ಪ್ರತಿ ಸಲ ಏಕಮುಖ
ವಾಗದೆ ವಿವಿಧ ಆಯಾಮಗಳಿಂದ ಹೊಸತನ ಹುಡುಕಿಕೊಳ್ಳಬೇಕೆಂಬುದಕ್ಕೆ ಈ
ಚುನಾವಣೆ ಸಾಕ್ಷಿಯಾಗಿದೆ. ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷವು ಗೆಲುವು ಸಾಧಿಸು
ವಂತೆ ಕರ್ನಾಟಕಕ್ಕೂ ಸಮರ್ಥ ಪ್ರಾದೇಶಿಕ ಪಕ್ಷದ ಕೊರತೆ ಇದೆ. ಕನ್ನಡಿಗರ ಪ್ರೇಮ
ಸಾಹಿತ್ಯ, ಸಂಸ್ಕೃತಿಗೆ ಸೀಮಿತವಾಗದೆ ರಾಜ್ಯದಲ್ಲಿ ಹೊಸ ಪ್ರಾದೇಶಿಕ ಪಕ್ಷಕ್ಕೂ ಜನ
ಮನ್ನಣೆ ಕೊಡುವಂತಾಗಲಿ. ಬದಲಾವಣೆ ಜನತಂತ್ರದ ಉಸಿರಾಗಲಿ.

-ರಾಜೇಂದ್ರಕುಮಾರ್ ಮುದ್ನಾಳ್, ಯಾದಗಿರಿ

ಅಂಗಾಂಗ ದಾನ: ಅಳಿದ ಮೇಲೆ ಉಳಿವು

‘ಗೋಲ್ಡನ್ ಗಳಿಗೆ’ಯ ಆಜೂಬಾಜು ಲೇಖನವು (ಲೇ: ನಾಗೇಶ ಹೆಗಡೆ, ಪ್ರ.ವಾ., ಮೇ 5) ಅಂಗಾಂಗ ದಾನದ ಮಹತ್ವವನ್ನು ತೆರೆದಿಟ್ಟಿದೆ. ನಮ್ಮ ಅಂಗಾಂಗಗಳಿಂದ ಹಲವು ಜೀವಗಳು ಬದುಕಬಲ್ಲವು. ದೇಹ ಪಂಚಭೂತಗಳಲ್ಲಿ ಲೀನವಾಗುವ ಬದಲು, ಮತ್ತೊಬ್ಬರ ಕಣ್ಣಲ್ಲಿ ಬೆಳಕಾಗಿ, ಹೃದಯದಲ್ಲಿ ಮಿಡಿತವಾಗಿ ಉಳಿಯುವುದು ನಿಜವಾದ ಪುನರ್ಜನ್ಮ. ದಾನದಿಂದ ಹಲವರಿಗೆ ಜೀವನ ನೀಡಲು ಸಾಧ್ಯಇದ್ದು, ಸಮಾಜದಲ್ಲಿ ಈ ಕುರಿತು ಅರಿವು ಮೂಡಿ ತಪ್ಪುಕಲ್ಪನೆಗಳು ದೂರವಾಗ
ಬೇಕು. ಹೆಚ್ಚಿನ ಜಾಗೃತಿ ಮೂಲಕ ಹೆಚ್ಚು ಜನರನ್ನು ದಾನಿಗಳಾಗಿ ನೋಂದಾವಣೆ ಮಾಡಲು ಪ್ರೇರೇಪಿಸಬೇಕು.

-ರಮೇಶ್ ಪಾಟೀಲ್, ರಾಯಚೂರು

ಆಡಳಿತಾಧಿಕಾರಿಗಳಿಂದ ಸಿಗದ ಸ್ಪಂದನ

ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗಿದೆ. ಹಾಗಾಗಿ, ಜಿಲ್ಲಾಡಳಿತದಿಂದ ತಾತ್ಕಾಲಿಕವಾಗಿ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಆದರೆ, ಈ ಅಧಿಕಾರಿಗಳು ಗ್ರಾ.ಪಂ. ಕಚೇರಿ ಕಡೆಗೆ ತಲೆಹಾಕುತ್ತಿಲ್ಲ. ಚುನಾಯಿತ ಪ್ರತಿನಿಧಿಗಳಿಲ್ಲದ ಈ ಮಧ್ಯಂತರ ಅವಧಿಯಲ್ಲಿ ಆಡಳಿತಾಧಿಕಾರಿಗಳ ಪಾತ್ರ ಹಿರಿದು. ಗ್ರಾಮದ ಜನರ ನಿತ್ಯದ ಹಲವಾರು ಸಮಸ್ಯೆಗಳಿಗೆ ಆಯಾ ಸಂದರ್ಭದಲ್ಲೇ ಪರಿಹಾರ ಒದಗಿಸುವುದು ಇವರ ಹೊಣೆಯಾಗಿದೆ. ಸದ್ಯ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಕೆಲವು ಗ್ರಾಮಗಳಲ್ಲಿ ಅನೈರ್ಮಲ್ಯೀಕರಣದಿಂದ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ. ಆದರೆ, ಈ ಸಮಸ್ಯೆ ಕೇಳಿಸಿಕೊಳ್ಳುವವರೇ ಇಲ್ಲ. ಆಡಳಿತಾಧಿಕಾರಿಗಳು ನಿಯಮಿತವಾಗಿ ಗ್ರಾ.ಪಂ.ಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತಿರಬೇಕು. ಹಾಗಾಗಿ ಜಿಲ್ಲಾಡಳಿತವು ತಕ್ಷಣ ಎಚ್ಚತ್ತುಕೊಂಡು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕಿದೆ.

-ನಾಗಭೂಷಣ ಜೆ.ಟಿ., ಚಳ್ಳಕೆರೆ

ಜಾತೀಯತೆ ಸಮಾಜದ ದೊಡ್ಡ ಪಿಡುಗು

ಮಠಾಧೀಶರಾಗಿದ್ದುಕೊಂಡು ತಾವೂ ಜಾತೀಯತೆಯ ಸೋಂಕನ್ನು ಅನುಭವಿಸಿ
ರುವುದಾಗಿ ಚಿತ್ರದುರ್ಗದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರು
ಹೇಳಿರುವುದು ವರದಿಯಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಏಳೂವರೆ ದಶಕ
ವಾದರೂ ಇನ್ನೂ ಜಾತಿಯ ಸೋಂಕು ಜೀವಂತವಾಗಿದೆ. ಇದು ಕಾನೂನುಗಳು ಹಲ್ಲಿಲ್ಲದ ಹಾವಿನಂತೆ ಆಗಿರುವುದಕ್ಕೆ ಸಾಕ್ಷಿ. ತಮ್ಮದು ಜಾತ್ಯತೀತ ರಾಷ್ಟ್ರವೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ಭಾರತೀಯರು, ಮುಖ್ಯವಾಗಿ ಪ್ರಬಲ ಸಮುದಾಯಗಳು ದುರ್ಬಲ ವರ್ಗದವರನ್ನು ಕೀಳಾಗಿ ನೋಡದೆ ಪ್ರೀತಿ, ವಿಶ್ವಾಸದಿಂದ ಕಾಣಬೇಕಿದೆ. ಜಾತೀಯತೆ ತೊಲಗದ ಹೊರತು ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ವಿಶಾಲದೃಷ್ಟಿಯಿಂದ ಸಮಾಜವನ್ನು ಒಂದುಗೂಡಿಸುವ ಪ್ರಯತ್ನ ಪ್ರಬಲ ಸಮುದಾಯ
ಗಳಿಂದ ತುರ್ತಾಗಿ ಆಗಬೇಕಿದೆ.

-ಡಿ. ಪ್ರಸನ್ನಕುಮಾರ್, ಬೆಂಗಳೂರು

ದ್ರಾವಿಡ ನೆಲದ ವರ್ಣರಂಜಿತ ರಾಜಕಾರಣ

ರಾಷ್ಟ್ರದ ರಾಜಕಾರಣದಲ್ಲಿ ತಮಿಳುನಾಡಿನ ರಾಜಕೀಯ ಇತಿಹಾಸ ವಿಶಿಷ್ಟ ಮತ್ತು ವಿಭಿನ್ನತೆಗೆ ಹೆಸರುವಾಸಿ. ಆಡಳಿತ ಪಕ್ಷವನ್ನು ಅಧಿಕಾರದಿಂದ ದೂರ ಇಡುವುದು ಮತ್ತು ರಾಜಕೀಯದಲ್ಲಿ ಎಂದಿಗೂ ಪಳಗದ ವ್ಯಕ್ತಿಯ ಕೈಗೆ ಅಧಿಕಾರ ನೀಡುವುದು ಸಾಮಾನ್ಯ ಸಂಗತಿಯಲ್ಲ. ತಮಿಳುನಾಡಿನ ಮತದಾರರು ಯಾವುದೇ ಆಸೆ, ಆಮಿಷಕ್ಕೆ ಬಲಿಯಾಗದೆ ಜಾತಿಯನ್ನು ಮೀರಿ ತಮ್ಮ ಜವಾಬ್ದಾರಿ ಅರಿತು ಟಿವಿಕೆ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಸಂದ ಗೆಲುವು. ಜೋಸೆಫ್ ವಿಜಯ್ ಅವರ ಈ ಸಾಧನೆ ಅಭೂತಪೂರ್ವವಾದುದು.

-ಸೋಮನಾಥ ಎಚ್. ಜಂಪಾ, ಯಾದಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.