ಉದ್ಯೋಗ ಭರ್ತಿ: ಮಾತು ಮರೆತ ಸರ್ಕಾರ

ಫೆಬ್ರುವರಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 56,432 ಸರ್ಕಾರಿ ಹುದ್ದೆಗಳ
ನೇಮಕಾತಿಗೆ ಒಪ್ಪಿಗೆ ನೀಡಲಾಗಿತ್ತು. ಇದು ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ಭರವಸೆಯನ್ನು ಹುಟ್ಟಿಸಿತ್ತು. ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಹೋರಾಟ ಕ್ಕಿಳಿದಾಗ ಎಚ್ಚತ್ತುಕೊಂಡಿದ್ದ ಸರ್ಕಾರ ಈಗ ಕಿವುಡಾಗಿದೆ. ಯಾವುದೇ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸದೆ ಕಾಲಹರಣ ಮಾಡುತ್ತಿದೆ. ಯುವಜನರ ವಯಸ್ಸು ಮೀರುತ್ತಿದ್ದು, ಕನಸುಗಳು ಕಮರಿಹೋಗುತ್ತಿವೆ. ಸರ್ಕಾರಿ ಉದ್ಯೋಗಕ್ಕಾಗಿ ಸಿದ್ಧತೆ
ನಡೆಸುತ್ತಿರುವ ಅಭ್ಯರ್ಥಿಗಳನ್ನು ಜನರು ಅನುಕಂಪದಿಂದ ನೋಡುತ್ತಿದ್ದಾರೆ. ಸಚಿವಾಲಯದ ಕಚೇರಿಗಳಲ್ಲಿ ಕಡತಗಳ ವಿಲೇವಾರಿಗಾಗಿ ಇ-ಆಫೀಸ್ ಕಡ್ಡಾಯ ಗೊಳಿಸಲಾಗಿದೆ. ಆಡಳಿತದಲ್ಲಿ ವೇಗ ಮತ್ತು ಪಾರದರ್ಶಕತೆ ಹೆಚ್ಚಿಸುವುದು ಇದರ ಉದ್ದೇಶ. ಆದರೆ, ಇಲ್ಲಿಯೂ ಭ್ರಷ್ಟಾಚಾರ ಮಿತಿಮೀರಿದೆ.

⇒ಶಾಂತಕುಮಾರ್ ಭಾವಿಮನಿ, ರಾಯಚೂರು

ಸೊಬಗಿನ ಯಾಣ; ಸೌಲಭ್ಯವಿಲ್ಲದೆ ಹೈರಾಣ

ಇತ್ತೀಚೆಗೆ ಸ್ನೇಹಿತರೊಂದಿಗೆ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲ್ಲೂಕಿನ ಯಾಣಕ್ಕೆ ಪ್ರವಾಸ ಹೋಗಿದ್ದೆ. ಅಲ್ಲಿ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯ, ಹೋಟೆಲ್ ಸೇರಿದಂತೆ ಯಾವುದೇ ಮೂಲಸೌಕರ್ಯ ಇಲ್ಲ. ಪ್ರವೇಶದ್ವಾರ ತೆಗೆ ದಿದ್ದು ಬೆಳಿಗ್ಗೆ 8:45ಕ್ಕೆ. ಹಸಿವಿನ ನಡುವೆಯೇ ತರಾತುರಿಯಲ್ಲಿ ವೀಕ್ಷಿಸಿ ಬೇರೆಡೆ ಉಪಾಹಾರಕ್ಕೆ ತೆರಳಿದೆವು. ಯಾಣದ ಪ್ರಕೃತಿ ಸೌಂದರ್ಯ ಸವಿಯಲು ಹೊರರಾಜ್ಯ ಸೇರಿ ರಾಜ್ಯದ ವಿವಿಧೆಡೆಯಿಂದ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇಂತಹ ಪ್ರವಾಸಿ ತಾಣಗಳಲ್ಲಿ ಕನಿಷ್ಠ ಸೌಕರ್ಯ ಕಲ್ಪಿಸದಿದ್ದರೆ ಹೇಗೆ? ಸರ್ಕಾರವು ಪ್ರವಾಸಿ ಸ್ಥಳಗಳಿಂದ ಆದಾಯ ನಿರೀಕ್ಷಿಸುವುದಕ್ಕಷ್ಟೆ ಸೀಮಿತವಾಗಬಾರದು. ಅದಕ್ಕೆ ತಕ್ಕಂತೆ ಸೌಲಭ್ಯ ಒದಗಿಸಬೇಕಲ್ಲವೆ?

⇒ಮುರುಗೇಶ ಡಿ., ದಾವಣಗೆರೆ

ಮೌಲ್ಯಮಾಪನ ಲೋಪರಹಿತವಾಗಿರಲಿ

‘ಇಂಗ್ಲಿಷ್ ಮೌಲ್ಯಮಾಪನ: ಬೇಕಿದೆ ಸ್ಪಷ್ಟ ಮಾದರಿ’ ಲೇಖನವು (ಲೇ: ಆರತಿ ಪಟ್ರಮೆ, ಪ್ರ.ವಾ., ಏ. 16) ಮೌಲ್ಯಮಾಪಕರ ಅದಕ್ಷತೆಗೆ ಹಿಡಿದ ಕನ್ನಡಿ. ಬಹುತೇಕ ಮೌಲ್ಯಮಾಪಕರು ಮೌಲ್ಯಮಾಪನ ಕಾರ್ಯವನ್ನು ತಮ್ಮ ವೃತ್ತಿಯ ಭಾಗವೆಂದು ಪರಿಗಣಿಸುವುದಿಲ್ಲ; ಅದೊಂದು ಅನವಶ್ಯಕ ಹೊರೆಯೆಂದು ಭಾವಿಸುತ್ತಾರೆ. ಕೆಲವು ಮೌಲ್ಯಮಾಪಕರಲ್ಲಿ ವಿಷಯದ ಜ್ಞಾನ, ವೃತ್ತಿಪರತೆಯ ಕೊರತೆಯಿದ್ದರೆ; ಮತ್ತೆ ಕೆಲವರು ಕಾಟಾಚಾರಕ್ಕೆ ಮೌಲ್ಯಮಾಪನ ಮಾಡುತ್ತಾರೆ. ಇಂತಹವರಿಂದ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನ ಪರಿಸ್ಥಿತಿಯಲ್ಲಿದೆ. ಪಿಯು ಮಂಡಳಿಯು ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಕರ್ತವ್ಯಲೋಪ ಎಸಗುವ ಮೌಲ್ಯಮಾಪಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.

⇒ಜಯಮಹದೇವ ಸ್ವಾಮಿ ಎಂ., ರಾಮನಗರ

ಹೆಚ್ಚುವರಿ ಬೋಗಿಗಳ ಅಳವಡಿಕೆ ಅಗತ್ಯ

ಬೆಂಗಳೂರಿನಿಂದ ಮುಂಬೈಗೆ ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿರುವುದು ಸ್ವಾಗತಾರ್ಹ. ಈ ರೈಲು ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕದ ಮಾರ್ಗವಾಗಿ ಮುಂಬೈಗೆ ಸಂಚರಿಸಲಿದೆ. ಉತ್ತರ ಕರ್ನಾಟಕ
ಭಾಗದ ಸಾವಿರಾರು ಜನರು ನಿತ್ಯ ಬೆಂಗಳೂರಿಗೆ ಭೇಟಿ ನೀಡುತ್ತಾರೆ. ಹಾಗಾಗಿ, ರಾತ್ರಿವೇಳೆ ಸಂಚರಿಸುವ ಈ ಮಾರ್ಗದ ರೈಲುಗಳಿಗೆ ಹೆಚ್ಚುವರಿಯಾಗಿ ಸಾಮಾನ್ಯ ಬೋಗಿಗಳನ್ನು ಅಳವಡಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ದಕ್ಷಿಣ
ಕರ್ನಾಟಕ ಭಾಗದ ಹಲವು ನಗರಗಳ ನಡುವೆ ಮೆಮೊ ರೈಲುಗಳ ಸಂಪರ್ಕ ಕಲ್ಪಿಸ ಲಾಗಿದೆ. ಉತ್ತರ ಕರ್ನಾಟಕ ಭಾಗದ ನಗರಗಳ ನಡುವೆ ಇಂತಹ ಸೌಲಭ್ಯವಿಲ್ಲ. ಈ ಅಸಮತೋಲನ ಸರಿಪಡಿಸಲು ರೈಲ್ವೆ ಇಲಾಖೆಯು ಕ್ರಮವಹಿಸಬೇಕಿದೆ.

⇒ಹೊನ್ನೇಶ ಯಲಿಗಾರ, ಹಾವೇರಿ

ಶಿಕ್ಷಕರ ಸಂಘ: ಚುನಾವಣೆ ಮಾದರಿ ಆಗಲಿ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ 2026–31ರ ಅವಧಿಗೆ
ಇದೇ 19ರಂದು ಚುನಾವಣೆ ನಿಗದಿಯಾಗಿದೆ. ಚುನಾವಣೆಯು ಸಾರ್ವತ್ರಿಕ
ಚುನಾವಣೆಯ ರೀತಿ ನಡೆಯದೆ ಇಡೀ ಚುನಾವಣಾ ವ್ಯವಸ್ಥೆಗೆ ಮಾದರಿಯಾಗ ಬೇಕಿದೆ. ಶಿಕ್ಷಕರ ಸಂಘಟನೆಗಳ ಪ್ರತಿನಿಧಿಯಾಗಿ ಆಯ್ಕೆಯಾಗುವುದೇ ತಮ್ಮ ವೃತ್ತಿ
ಜೀವನದ ಬಹುದೊಡ್ಡ ಗುರಿಯೆಂದು ಕೆಲವರು ಭಾವಿಸುವುದಿದೆ. ಶಿಕ್ಷಕರ ಕುಂದು
ಕೊರತೆ ಆಲಿಸಲು ಸಂಘಟನೆಗಳು ಇರಬೇಕು. ಆದರೆ, ಚುನಾವಣೆಯಲ್ಲಿ ಅವಿರೋಧ ಆಯ್ಕೆಗೂ ಒತ್ತು ನೀಡಬೇಕಿದೆ. ಅವಕಾಶವಂಚಿತ ಶಿಕ್ಷಕರಿಗೆ ವೇದಿಕೆ ಒದಗಿಸಬೇಕಿದೆ. ಮಕ್ಕಳ ದಾಖಲಾತಿ ಹೆಚ್ಚಳ, ಗುಣಮಟ್ಟದ ಶಿಕ್ಷಣ ಕುರಿತಂತೆ ಪ್ರಣಾಳಿಕೆ ಹೊರಡಿಸಬೇಕು. ವಾಮಮಾರ್ಗ ಅನುಸರಿಸುವುದು ಸರಿಯಲ್ಲ.

⇒ಮಲ್ಲಪ್ಪ ಫ. ಕರೇಣ್ಣನವರ, ಮೋಟೆಬೆನ್ನೂರು

ಬಣ್ಣದ ಮಾತು: ಪ್ರಯೋಜನ ಏನು?

ಆದಿಚುಂಚನಗಿರಿ ಮಠದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, ‘ರಾಗಿಮುದ್ದೆ ಲೋಕಪ್ರಿಯವಾಗಲು
ದೇವೇಗೌಡರು ಕಾರಣ; ಸಿರಿಧಾನ್ಯ ಬಳಕೆಯಿಂದ ಬೊಜ್ಜಿನ ಸಮಸ್ಯೆ ಪರಿಹಾರ ಆಗುತ್ತದೆ’ ಎಂದು ಹೇಳಿದ್ದಾರೆ. ಇವು ಬಣ್ಣದ ಮಾತುಗಳಷ್ಟೆ. ರಾಜ್ಯಕ್ಕೆ ನ್ಯಾಯಯುತವಾಗಿ ನೀಡಬೇಕಿರುವ ಸೌಲಭ್ಯಗಳ ಬಗ್ಗೆ ಪ್ರಸ್ತಾಪಿಸದ ಪ್ರಧಾನಿ, ಕನ್ನಡಿಗರನ್ನು ಮತ್ತೊಮ್ಮೆ ನಿರಾಸೆಗೊಳಿಸಿದ್ದಾರೆ. ಬಣ್ಣದ ಮಾತಿನ ಬದಲು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಲ್ಲಿಸಿದ ಬೇಡಿಕೆಗಳ ಪೈಕಿ ಒಂದನ್ನಾದರೂ ಈಡೇರಿಸುವ ಬದ್ಧತೆ ಪ್ರದರ್ಶಿಸಿದ್ದರೆ ಅವರ ಮೇಲೆ ಕನ್ನಡಿಗರಿಗೆ ಅಭಿಮಾನ ಇಮ್ಮಡಿಸುತ್ತಿತ್ತು. ರಾಗಿ ಬಳಕೆಯು ಆರೋಗ್ಯಕ್ಕೆ ಒಳ್ಳೆಯ ಆಹಾರ ಎಂಬುದರಲ್ಲಿ ಹೊಸ ಸಂಗತಿ ಏನೂ ಅಲ್ಲ. ರಾಗಿಮುದ್ದೆ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಆಡಿರುವ ಭಾವನಾತ್ಮಕ ಮಾತುಗಳಿಂದ ರಾಜ್ಯದ ಜನತೆಗೆ ಆಗುವ ಪ್ರಯೋಜನವಾದರೂ ಏನು?

ಎಂ.ಜಿ. ರಂಗಸ್ವಾಮಿ, ಹಿರಿಯೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.