ಸ್ವಿಫ್ಟ್ ಸಿಟಿ: ರೈತರ ಪಾಲಿಗೆ ಮರಣಶಾಸನ

‘ಸ್ವಿಫ್ಟ್ ಸಿಟಿ’ ಯೋಜನೆಯಿಂದಾಗಿ ಆನೇಕಲ್ ತಾಲ್ಲೂಕಿನ ರೈತರು ಭೂಮಿ ಕಳೆದು
ಕೊಳ್ಳುವ ಭೀತಿಯಲ್ಲಿದ್ದಾರೆ. ಈ ಯೋಜನೆಯು ರೈತರ ಪಾಲಿಗೆ ಮರಣಶಾಸನ
ಆಗಿದೆ. ಉಳ್ಳವರಿಗೆ ಮಣೆ ಹಾಕುವ ಇರಾದೆ ಇದರ ಹಿಂದಿದೆ. ಎಷ್ಟು ಸಾಧ್ಯವೋ ಅಷ್ಟನ್ನು ನುಂಗಲು ಅಧಿಕಾರಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಉಳಿದ ಭೂಮಿ ಕಬಳಿಸಲು ರಿಯಲ್ ಎಸ್ಟೇಟ್ ಕುಳಗಳು ಕಾಯುತ್ತಿದ್ದಾರೆ. ಹಳ್ಳಿಗಳ ಸಂಸಾರಗಳನ್ನು ಬೀದಿಪಾಲು ಮಾಡುತ್ತಿರುವ ಮಧ್ಯವರ್ತಿಗಳು ಈ ಕುಳಗಳೊಂದಿಗೆ ಕೈಜೋಡಿಸಿ
ದ್ದಾರೆ. ಇವರೆಲ್ಲರಿಗೆ ರಾಜಕಾರಣಿಗಳು ಶ್ರೀರಕ್ಷೆಯಾಗಿದ್ದಾರೆ. ಭೂಮಿಯ ಉಳಿವಿ
ಗಾಗಿ ವರ್ಷದಿಂದಲೂ ಹೋರಾಡುತ್ತಿರುವ ರೈತರ ನೋವಿಗೆ ಬೆಲೆ ಇಲ್ಲದಂತಾಗಿದೆ.

⇒ಎಚ್.ಎಸ್. ಸನತ್ ಕುಮಾರ್, ಚಂದಾಪುರ

ಬೆಳಗಾವಿ: ಹಗ್ಗ ಕೊಟ್ಟು ಕೈಕಟ್ಟಿಸಿಕೊಳ್ಳದಿರಿ

ಬೆಳಗಾವಿ ಕರ್ನಾಟಕದ್ದೇ ಆಗಿದೆ. ಭವಿಷ್ಯತ್ತಿನಲ್ಲೂ ಅದು ಕನ್ನಡದ ನೆಲವೇ ಆಗಿರು
ತ್ತದೆ. ಕರ್ನಾಟಕದ ಒಂದಿಂಚು ನೆಲವನ್ನೂ ಯಾರಿಗೂ ಬಿಟ್ಟುಕೊಡುವುದಿಲ್ಲವೆಂದು ಹಿಂದಿನ ಎಲ್ಲಾ ಮುಖ್ಯಮಂತ್ರಿಗಳು ಹೇಳುತ್ತಾ ಬಂದಿದ್ದಾರೆ; ಅದರಲ್ಲಿ ರಾಜಿಯಿಲ್ಲ. ಹಾಗೆಯೇ ಬೆಳಗಾವಿಯಲ್ಲಿ ನಾವು ಕನ್ನಡಿಗರು, ಮರಾಠಿಗರು ಅನ್ಯೋನ್ಯವಾಗಿ ಬದುಕುತ್ತಿದ್ದೇವೆ. ಅಗತ್ಯವಿದ್ದಲ್ಲಿ, ಗಡಿಭಾಗದಲ್ಲಿ ಕನ್ನಡವನ್ನು ಬೆಳೆಸಲು ವಿವಿಧ ಕಾರ್ಯಕ್ರಮಗಳನ್ನು ಸರ್ಕಾರ ಯೋಜಿಸಲಿ. ಇಲ್ಲಿಯ ಕನ್ನಡ ಶಾಲೆಗಳನ್ನು ಉನ್ನತೀಕರಿಸಲಿ. ಅಗತ್ಯ ಶಿಕ್ಷಕರನ್ನು ನೇಮಿಸಲಿ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ
ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಏನು ಸಾಧ್ಯವೋ ಅದೆಲ್ಲವನ್ನೂ ಅನುಷ್ಠಾನಕ್ಕೆ
ತರಲಿ. ಕನ್ನಡದ ಬಗ್ಗೆ ಜನಸಾಮಾನ್ಯರಲ್ಲಿ ಒಲವು ಬೆಳೆಯಲು ಏನು ಕ್ರಮ ತೆಗೆದು
ಕೊಳ್ಳಬೇಕೋ ಅದನ್ನು ಮಾಡಲಿ. ಆದರೆ ಯಾರೇ ಆಗಿರಲಿ, ಸತ್ತು ಹೋಗಿರುವ ಎಂಇಎಸ್ನ ಭಾಷಿಕ ಹೋರಾಟವನ್ನು ಕೆದಕಿ ಜೀವಂತಗೊಳಿಸದಿರಲಿ.

ಸತ್ತ ಹೆಣಕ್ಕೆ ಜೀವ ತುಂಬಿ ಅದು ದೆವ್ವವಾಗಿ ಕಾಡುವಂತೆ ಮಾಡುವುದು ಕೂಡದು. ಸ್ವತಃ ಕೋಳ ಕೊಟ್ಟು ಬಂಧಿಸಿಕೊಳ್ಳುವುದು ಯಾಕೆ? ಬೆಳಗಾವಿ ರಾಜ್ಯದ ಅವಿಭಾಜ್ಯ ಅಂಗ ಎಂಬ ಠರಾವು ಮಾಡಿಸುವುದರಿಂದ ತಪ್ಪುಸಂದೇಶ ರವಾನೆ ಆಗುವ ಸಾಧ್ಯತೆಯಿದೆ. ಇದುವರೆಗೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಆಗಿರಲಿಲ್ಲವೇ ಎಂಬ ಅಭಿಪ್ರಾಯ ರೂಪಗೊಳ್ಳುತ್ತದೆ. ಅಂಥ ಅಭಿಪ್ರಾಯ ಸೃಷ್ಟಿಸುವವರಿದ್ದಾರೆ. ಅದಕ್ಕೆ ಅವಕಾಶವನ್ನು ನಾವೇ ಸೃಷ್ಟಿಸಿಕೊಡಬಾರದು.

⇒ಡಿ.ಎಸ್. ಚೌಗಲೆ, ಬೆಳಗಾವಿ

ಬಸ್: ಅಂಕೆ ಮೀರಿದ ಮೊಬೈಲ್ ಬಳಕೆ

ಕೆಎಸ್ಆರ್ಟಿಸಿ ಬಸ್ಗಳಲ್ಲಿ ಈ ಹಿಂದೆ ಬೀಡಿ, ಸಿಗರೇಟ್ ಸೇದುವ ಪರಿಪಾಠ ಇತ್ತು. ದಂಡ ಹಾಕಲು ಶುರು ಮಾಡಿದ ಮೇಲೆ ಆ ಪರಿಪಾಠ ನಿಂತಿದೆ. ಈಗ ಹೊಸ
ದೊಂದು ಸಮಸ್ಯೆ ಶುರುವಾಗಿದೆ. ಅದೆಂದರೆ, ಮೊಬೈಲ್ ಎಂಬ ದೆವ್ವದ ಕಾಟ. ಬಸ್ಗಳಲ್ಲಿ ಮೊಬೈಲ್ ಸ್ಪೀಕರ್ ಉಪಯೋಗಿಸಬಾರದೆಂಬ ನಿಯಮ ಜಾರಿಗೊಳಿಸಿ ಹಲವು ವರ್ಷಗಳೇ ಕಳೆದಿವೆ. ಆದರೂ, ಮೊಬೈಲ್ ಸದ್ದು ಸಹ ಪ್ರಯಾಣಿಕರಿಗೆ ಕಿರಿಕಿರಿ ಮಾಡುತ್ತದೆ. ಕೆಲವರು ಜೋರಾಗಿ ಹಾಡುಗಳನ್ನು ಹಾಕಿಕೊಂಡು ಕೇಳುತ್ತಾರೆ. ರೀಲ್ಸ್, ಸಿನಿಮಾ ನೋಡುತ್ತಾರೆ. ಸರ್ಕಾರವು ಈ ಮೊಬೈಲ್ ಶೂರರಿಗೆ ಹೆಚ್ಚಿನ ದಂಡ ವಿಧಿಸಿ ಸಹ ಪ್ರಯಾಣಿಕರ ಮನಃಶಾಂತಿ ಕಾಪಾಡಲಿ.

⇒ರಾಜಶೇಖರ ಮೂರ್ತಿ, ಎಚ್.ಡಿ. ಕೋಟೆ

ಹು-ಧಾ ಇಬ್ಭಾಗವಾಗುವುದು ಅಪೇಕ್ಷಿತ

ಗ್ರೇಟರ್ ಬೆಂಗಳೂರಿನ ನಕ್ಷೆ ಬದಲಾಗಿದೆ. ಐದು ಪಾಲಿಕೆಗಳನ್ನಾಗಿ ಮಾಡಲಾಗಿದೆ. ಆಡಳಿತವು ಸರಾಗವಾಗಿ ನಡೆಯಲಿ ಎಂಬ ಸದುದ್ದೇಶ ಇದರ ಹಿಂದೆ ಅಡಗಿದೆ. ಅದೇ ರೀತಿ ಹುಬ್ಬಳ್ಳಿ– ಧಾರವಾಡ ಎರಡು ವಿಭಾಗವಾಗಲಿ; ಜನಸಾಮಾನ್ಯರ ಜೊತೆ ಸಮಂಜಸ ಸಂವಹನದಿಂದ ಮತ್ತೆ ಉತ್ತಮ ಕ್ರಿಯಾಶೀಲತೆ ಪ್ರದರ್ಶಿಸಲಿ.

⇒ಅನಿಲಕುಮಾರ ಮುಗಳಿ, ಧಾರವಾಡ

ಜಗತ್ತಿಗೆ ಬೇಕಾದುದು ಯುದ್ಧವಲ್ಲ, ಬುದ್ಧ!

ಕೊಲ್ಲಿ ಯುದ್ಧದ ಪರಿಣಾಮವು ದೇಶದ ಜನಸಾಮಾನ್ಯರಿಗೆ ತಟ್ಟಿದೆ. ಎಮ್ಮೆಗೆ ಜ್ವರ ಬಂದರೆ ಕೋಣನಿಗೆ ಬರೆ ಹಾಕಿದಂತಾಗಿದೆ. ದಿನಬಳಕೆಯ ವಸ್ತುಗಳು, ಚಿನ್ನ–ಬೆಳ್ಳಿ,
ಪೆಟ್ರೋಲ್–ಡೀಸೆಲ್ ಬೆಲೆ ಏರಿಕೆಯಾಗಿದೆ. ದರ ಏರಿಕೆಯು ನಾಗರಿಕರ ಜೇಬಿಗೆ ಅಕ್ಷರಶಃ ಹೊರೆಯಾಗುತ್ತಿದೆ. ಯುದ್ಧ ಹೀಗೆಯೇ ಮುಂದುವರಿದರೆ ಚಿಲ್ಲರೆ ಹಣ
ದುಬ್ಬರ ಹೆಚ್ಚಲಿದೆ. ರೂಪಾಯಿ ಮೌಲ್ಯ ಮತ್ತಷ್ಟು ಕುಸಿಯಲಿದೆ. ಇದು ದೇಶದ ಆರ್ಥಿಕತೆಯ ಬೆಳವಣಿಗೆಗೆ ಅಡ್ಡಿಯಾಗಲಿದೆ. ಕೇಂದ್ರ ಸರ್ಕಾರವು 2047ರ ಹೊತ್ತಿಗೆ ‘ವಿಕಸಿತ ಭಾರತ’ದ ಕನಸು ಹೊತ್ತಿದೆ. ಜಾಗತಿಕ ಬಿಕ್ಕಟ್ಟುಗಳು ತಹಬಂದಿಗೆ ಬರದಿದ್ದರೆ ಈ ಕನಸು ಈಡೇರುವುದು ದೂರದ ಮಾತು. ಯುದ್ಧಕ್ಕಿಂತ ಈಗ ಜಗತ್ತಿಗೆ ಬುದ್ಧನ ಅವಶ್ಯಕತೆ ಹೆಚ್ಚಿದೆ.

⇒ಅಜಯ್ ಎನ್.ಎಸ್., ಹಾವೇರಿ

ಅಧಿಕಾರದ ಗುಂಗು ಮತ್ತು ವ್ಯಾಮೋಹ

ಕಾಂಗ್ರೆಸ್ನ ಉಳಿಕೆ ಮತಗಳ ಬೆಂಬಲದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಸದಸ್ಯತ್ವದ ಅವಧಿಯು ಜೂನ್ಗೆ
ಅಂತ್ಯವಾಗಲಿದೆ. ಭಗೀರಥನು ತನ್ನ ಪೂರ್ವಜರ ಉದ್ಧಾರಕ್ಕಾಗಿ ಸಿಂಹಾಸನ
ತೊರೆದು, ಹಿಮಾಲಯದಲ್ಲಿ ಶಿವನಿಗಾಗಿ ಕಠಿಣ ತಪಗೈದರೆ, ಗೌಡರು ತಮ್ಮ
ಕುಟುಂಬದ ಉದ್ಧಾರಕ್ಕಾಗಿ 92ರ ಹರೆಯದಲ್ಲೂ ಮತ್ತೊಂದು ಅವಧಿಗೆ
ರಾಜ್ಯಸಭೆ ಪ್ರವೇಶಿಸಲು ತಪಗೈಯುತ್ತಿದ್ದಾರೆ. ಆದರೆ, ಜೆಡಿಎಸ್ಗೆ ಸಂಖ್ಯಾ
ಬಲ ಇಲ್ಲ. ಬಿಜೆಪಿ ಬಳಿ ಇರುವ ಸಂಖ್ಯಾಬಲದಿಂದಲಾದರೂ ರಾಜ್ಯಸಭೆಗೆ ಆಯ್ಕೆ ಮಾಡಲು ಕಮಲ ಪಾಳಯದ ವರಿಷ್ಠರನ್ನು ಕೇಂದ್ರ ಸಚಿವ ಎಚ್.ಡಿ.
ಕುಮಾರಸ್ವಾಮಿಯವರು ಓಲೈಸುತ್ತಿದ್ದಾರೆ. ಅವರ ‘ಭಗೀರಥ ನಡೆ’ಯಲ್ಲಿ ಗೌಡರ ಮನೆತನದ ಪಾರಂಪರಿಕ ಸ್ವಾರ್ಥ ಸಾಧಕತನವು ಕಣ್ಣಿಗೆ ರಾಚುತ್ತಿದೆ.
ತಮಗಾಗಿ– ತಮ್ಮ ಕುಟುಂಬಕ್ಕಾಗಿ– ತಮ್ಮ ಪಕ್ಷಕ್ಕಾಗಿ ಹಗಲಿರುಳು ದುಡಿದವ
ರಿಗೆ ಅವಕಾಶ ಮಾಡಿಕೊಡಬೇಕಾಗಿದ್ದ ‘ಗೌಡರು’, ಅಧಿಕಾರಕ್ಕಾಗಿ ಹಪಹಪಿ
ಸುವುದು ಅವರ ಹಿರಿತನ–ಗೌರವಕ್ಕೆ ಚ್ಯುತಿ ತರುವುದಿಲ್ಲವೇ?

ಸಿದ್ಧಲಿಂಗಸ್ವಾಮಿ ಹಿರೇಮಠ, ತುಮಕೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.