ಪುಸ್ತಕ ಸಂಸ್ಕೃತಿಗಾಗಿ ಹೋರಾಟ ಅಗತ್ಯ

ರಾಜ್ಯ ಸರ್ಕಾರವು ಕಳೆದೆರಡು ವರ್ಷಗಳಿಂದ ಪುಸ್ತಕಗಳನ್ನು ಖರೀದಿಸುತ್ತಿಲ್ಲ. ಇದರಿಂದ ಪ್ರಕಾಶಕರು, ಲೇಖಕರು ಹಾಗೂ ಓದುಗರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಸಚಿವರು, ಆಯುಕ್ತರು, ಪ್ರಧಾನ ಕಾರ್ಯದರ್ಶಿ ಅವರನ್ನು ಹಲವು ಬಾರಿ ಭೇಟಿ ಯಾಗಿ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಸಗಟು ಖರೀದಿ, ರಾಜಾರಾಂ ಮೋಹನ್ ರಾಯ್ ಯೋಜನೆ, ಪರಿಶಿಷ್ಟ ಜಾತಿ ಮತ್ತು ಗಿರಿಜನ ಯೋಜನೆಯಡಿ ಪುಸ್ತಕಗಳ ಖರೀದಿ ನಿಂತುಹೋಗಿದೆ. ಸಾರ್ವಜನಿಕರಿಗೆ ಪುಸ್ತಕ ರೂಪದಲ್ಲಿ ಜ್ಞಾನ ಹಂಚುತ್ತಿರುವ ಲೇಖಕರಿಗೂ, ಪ್ರಕಾಶಕರಿಗೂ, ಪುಸ್ತಕ ಸಂಸ್ಕೃತಿಗೂ ಅಪಚಾರ ಎಸಗುತ್ತಿರುವ ಸರ್ಕಾರದ ಕ್ರಮ ಪ್ರಶ್ನಾರ್ಹ. ಓದುಗರು, ಲೇಖಕರು, ಪ್ರಕಾಶಕರು ತಾವು ಪ್ರಕಟಿಸಿರುವ ಪುಸ್ತಕಗಳ ಜೊತೆಗೆ ಆಗಮಿಸಿ ವಿಧಾನಸೌಧದ ಮುಂದೆ ಧರಣಿ ಕುಳಿತು ‘ಪುಸ್ತಕ ಸಂಸ್ಕೃತಿ’ ಉಳಿಸುವ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಇದಕ್ಕೆ ಅವಕಾಶ ನೀಡದೆ ಖರೀದಿಸಬೇಕಿದೆ.

-ನಿಡಸಾಲೆ ಪುಟ್ಟಸ್ವಾಮಯ್ಯ, ಬೆಂಗಳೂರು

ಉಚಿತ ಯೋಜನೆ: ದೇಶದ ಪ್ರಗತಿಗೆ ಕುತ್ತು

ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲಲು ಉಚಿತ ಯೋಜನೆಗಳಿಗೆ ಜೋತುಬಿದ್ದಿವೆ. ಕರ್ನಾಟಕದಲ್ಲಿ ಪಂಚ ಗ್ಯಾರಂಟಿಗೆ ಸಾಕಷ್ಟು ಹಣ ಖರ್ಚಾಗುತ್ತಿದೆ.

ಈಗ ತಮಿಳುನಾಡಿನಲ್ಲಿ ಹೆಚ್ಚು ಸ್ಥಾನ ಪಡೆದಿರುವ ಟಿವಿಕೆ ಪಕ್ಷವೂ ಉಚಿತ ಯೋಜನೆಗಳ ಭರಪೂರ ಭರವಸೆ ನೀಡಿದೆ. ಇಂಥ ಯೋಜನೆಗಳು ಬಡವರ್ಗದವರ ಪರವಾಗಿದ್ದರೆ ತೊಂದರೆಯಿಲ್ಲ; ಆದರೆ, ಇವು ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತವೆ. ಬಡವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ಶಿಕ್ಷಣ,ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಉಚಿತ ವೈದ್ಯಕೀಯ ಸೌಲಭ್ಯ ನೀಡುವಂತಹ ಯೋಜನೆ ಜಾರಿಗೊಳಿಸುವುದು ಒಳಿತು. ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುವಂತಹ ಯೋಜನೆಗಳಿಂದ ಭವಿಷ್ಯದಲ್ಲಿ ಆರ್ಥಿಕ ಹಾನಿ ತಪ್ಪಿದ್ದಲ್ಲ.

-ಡಿ.ವಿ. ಸಂಜಯ್, ಚಿಕ್ಕಮಗಳೂರು

ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆ ಹೇಗೆ?

ಮಕ್ಕಳ ಮನೋವಿಜ್ಞಾನ ಮತ್ತು ಪಾಲಕರ ಮನೋವೃತ್ತಿಗೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಆದ್ಯತೆ ಸಿಗುತ್ತಿಲ್ಲ. ಇದು ಶೈಕ್ಷಣಿಕ ರಂಗದ ಬೌದ್ಧಿಕ ದಿವಾಳಿತನಕ್ಕೆ ನಿದರ್ಶನ.ಪರರ ಮಕ್ಕಳ ಸಾಧನೆಯತ್ತ ಬೆಟ್ಟು ಮಾಡುತ್ತಾ ಪಾಲಕರು ತಮ್ಮ ಮಕ್ಕಳ ಅಂತರಂಗದ ಪ್ರತಿಭೆಯನ್ನು ನಿಷ್ಕರುಣೆಯಿಂದ ಹೊಸಕಿ ಹಾಕುತ್ತಿದ್ದಾರೆ. ಮಕ್ಕಳಿಗೆ ಭೌತಿಕಸೌಲಭ್ಯಗಳ ಕನಸು ತೋರಿಸುತ್ತಾ ಅವರನ್ನು ರಕ್ತಮಾಂಸದ ರೋಬೊಟ್ಗಳನ್ನಾಗಿಸುತ್ತಿದ್ದಾರೆ. ಮತ್ತೊಂದೆಡೆ ಸರ್ಕಾರ ಕ್ಯಾಪಿಟೇಷನ್ ಮತ್ತು ಡೊನೇಷನ್ ಲಾಬಿಗೆಮಣಿದಿದೆ. ಇದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವರದಾನವಾಗಿದೆ. ಈ ಸಂಸ್ಥೆಗಳು ಐಷಾರಾಮಿ ಕ್ಲಾಸ್ ರೂಂಗಳೇ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿ ಎಂಬಂತೆ ವೈಭವೀಕರಿಸುವ ಜಾಹೀರಾತು ನೀಡುತ್ತವೆ; ಪಾಠೋಪಕರಣ, ಬೋಧನಾ ಕೌಶಲವನ್ನು ನಗಣ್ಯಗೊಳಿಸುತ್ತಿವೆ. ಈ ನಡುವೆಯೇ ‘ಮಗು ಕೇಂದ್ರಿತ ಶಿಕ್ಷಣ’ವೆಂದು ಶಿಕ್ಷಣ ತಜ್ಞರು ಸೆಮಿನಾರ್ಗಳಲ್ಲಿ ಮೇಜು ಕುಟ್ಟುತ್ತಿದ್ದಾರೆ. ಇವರೆಲ್ಲರ ಆಟ ನೋಡುತ್ತಾ ಮಕ್ಕಳು ಮೂಕರಾಗಿದ್ದಾರೆ.

- ಡಿ.ಎಂ. ನದಾಫ್, ಅಫಜಲಪುರ

ಮಮತಾ: ಉದ್ಧಟತನವೊ? ಸೊಕ್ಕೋ?

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಹೀನಾಯವಾಗಿ ಸೋತರೂ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡುವುದಿಲ್ಲ ವೆಂದು ಘೋಷಿಸುತ್ತಿದ್ದಂತೆಯೇ, 2021ರಲ್ಲಿ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಜೋ ಬೈಡನ್ ಅವರಿಗೆ ಅಧಿಕಾರ ಬಿಟ್ಟುಕೊಡಲು ನಿರಾಕರಿಸಿ ರಂಪಾಟ ಮಾಡಿದ ಡೊನಾಲ್ಡ್ ಟ್ರಂಪ್ ನೆನಪಾದರು. ‘ಸಿಎಂ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ; ರಾಜ್ಯಪಾಲರನ್ನು ಭೇಟಿಯಾಗುವುದಿಲ್ಲ’ ಮುಂತಾದ ಸವಾಲುಗಳನ್ನು ಮುಂದಿಟ್ಟಿರುವ ಮಮತಾ, ‘ಬಿಜೆಪಿಯ ಗೆಲುವು ಜನಾದೇಶವಲ್ಲ; ಒಳಸಂಚಿನದು’ ಎಂದು ಆರೋಪಿಸಿದ್ದಾರೆ. ‘ನಾನು ಸೋತಿಲ್ಲ. ರಾಜೀನಾಮೆ ಕೊಡುವುದಿಲ್ಲ, ಹೋರಾಡುತ್ತೇನೆ’ ಎಂದು ಹೇಳಿರುವುದು ಅವಿವೇಕದ ವರ್ತನೆ.

‘ಬಿಜೆಪಿ ಗೆಲುವಿಗೆ ಚುನಾವಣಾ ಆಯೋಗವೆಂಬ ಖಳನಾಯಕನ ಪಾತ್ರವೇ ನಿರ್ಣಾಯಕ’ ಎನ್ನುತ್ತಿರುವ ಅವರು, ಇದುವರೆಗೂ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಇವಿಎಂಗಳ ವಿರುದ್ಧ ಹೊರಬರುತ್ತಿದ್ದ ಆಪಾದನೆಯನ್ನು ಈಗ ತಪ್ಪಿಸಿದಂತಾಗಿದೆ. ಹದಿನೈದು ವರ್ಷ ಗಳಷ್ಟು ದೀರ್ಘಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿರುವ ಮತ್ತು ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ನಲ್ಲಿ ತನ್ನ ಸರ್ಕಾರದ ಪರ ತಾನೇ ಸ್ವತಃ ವಾದ ಮಂಡನೆ ಮಾಡಿರುವ ಅವರಿಗೆ ಸಂವಿಧಾನದ 164 ಮತ್ತು 172ನೇ ವಿಧಿಗಳ ಪರಿಚಯ ಇಲ್ಲವೇ? ತಮ್ಮ ನಡೆನುಡಿ ಮತ್ತು ವರ್ತನೆಗಳನ್ನು ಹದ್ದುಬಸ್ತಿಗೆ ತರುವ ಶಕ್ತಿ ಸಂವಿಧಾನಕ್ಕೆ ಇಲ್ಲವೆಂದು ಮಮತಾ ಭಾವಿಸುವುದಾದರೆ ಅದು ಇನ್ನಷ್ಟು ದಿನ ಪ್ರಚಾರದಲ್ಲಿ ಉಳಿಯುವ ಹುನ್ನಾರ ಎಂದಷ್ಟೇ ಅರ್ಥೈಸಬೇಕಾ

ಗುತ್ತದೆ. ‘ತಮ್ಮ ಕೊರಳಿಗೆ ತಾವೇ ಉರುಳು ಹಾಕಿಕೊಳ್ಳಲಿ’ ಎಂದು ಈ ಬೆಳವಣಿಗೆಯನ್ನು ತೀವ್ರ ವಾಗಿ ಪ್ರತಿಭಟಿಸದೆ ಇರುವ ಬಿಜೆಪಿ ತಂತ್ರವನ್ನು ಮಮತಾ ಅರ್ಥ ಮಾಡಿಕೊಳ್ಳಬೇಕು. ಮಮತಾರ ಮಾನಸಿಕತೆ ಹೀಗಾಗಬಾರದಿತ್ತು.

-ಸಿ.ಎಚ್. ಹನುಮಂತರಾಯ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.