ಹಾರೈಕೆ ಮಾತುಗಳ ವೈಭವೀಕರಣ ಬೇಡ

‘ನಾನು ರಾಜನಾಗುವೆ ಎಂದು ನೊಣವಿನಕೆರೆ ಅಜ್ಜಯ್ಯ ಬಾಲ್ಯದಲ್ಲಿ ಹೇಳಿದ್ದರು. ಅಜ್ಜಯ್ಯನ ಅನುಗ್ರಹದಿಂದ ಮುಖ್ಯಮಂತ್ರಿ ಆಗುತ್ತಿದ್ದೇನೆ’ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಇಂಥ ಮಾತುಗಳನ್ನು ಆಡುವುದು ಸಮಾಜಕ್ಕೆ ಬೇರೆಯದೇ ಆದ ಸಂದೇಶವನ್ನು ಕೊಡುತ್ತದೆ. ಮಠಮಂದಿರಗಳಿಗೆ ಮಕ್ಕಳನ್ನು ಕರೆದುಕೊಂಡು ಬರುವ ಭಕ್ತರಿಗೆ ಅಲ್ಲಿನ ಗುರುಗಳು, ‘ನಿಮ್ಮ ಮಗು ಮುಂದೆ ದೊಡ್ಡ ಮನುಷ್ಯನಾಗುತ್ತಾನೆ; ರಾಜ್ಯ, ದೇಶ ಆಳುತ್ತಾನೆ’ ಎಂದು ಹಾರೈಕೆಯ ನುಡಿ ಹೇಳುವುದು ಸಾಮಾನ್ಯ ಸಂಗತಿ. ಇದಕ್ಕೆ ವಿಶೇಷ ಮಹತ್ವ ಕೊಡಬೇಕಾಗಿಲ್ಲ. ಕಂದಾಚಾರ ಹೆಚ್ಚಾಗುವ ಅಪಾಯ ಇರುವುದರಿಂದ ಇಂಥ ಮಾತುಗಳ ವೈಭವೀಕರಣವೂ ಸರಿಯಲ್ಲ.

⇒ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ

‘ವಿಐಪಿ ಸಂಸ್ಕೃತಿ’ಗೆ ಬೇಕಿದೆ ತುರ್ತು ಚಿಕಿತ್ಸೆ

ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ಸಂಚಾರಕ್ಕಾಗಿ ಅರ್ಧಗಂಟೆ ರಸ್ತೆ
ಬಂದ್ ಮಾಡಲಾಗಿದೆ. ಇದರಿಂದ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಲು ಪರದಾಡಿ ಕೊನೆಗೆ ರಸ್ತೆಮಧ್ಯದಲ್ಲಿ ಕುಳಿತು ಪತಿ ಧರಣಿ ಮಾಡಿದ್ದಾರೆ. ದೇಶದಲ್ಲಿ ‘ವಿಐಪಿ ಸಂಸ್ಕೃತಿ’ಯು ಕೆಟ್ಟ ಸಂಪ್ರದಾಯವಾಗಿದೆ; ಇದು ಅಸಾಂವಿಧಾನಿಕವೂ ಆಗಿದೆ. ಭದ್ರತೆ ವಿಷಯದಲ್ಲಿ ಇದು ಅನಿವಾರ್ಯವಾದರೂ ಗಂಟೆಗಟ್ಟಲೆ ಸವಾರ
ರಿಗೆ ದಿಗ್ಬಂಧನ ಹಾಕುವುದು ಎಷ್ಟು ಸರಿ? ಮಂತ್ರಿ ಮಹೋದಯರಿಗೆ ಅವರ ಕೆಲಸ ಎಷ್ಟು ಮುಖ್ಯವೋ, ಸಾಮಾನ್ಯ ಪ್ರಜೆಯ ಕೆಲಸವೂ ಅಷ್ಟೇ ಮುಖ್ಯವಲ್ಲವೆ? ಪ್ರತಿಯೊಬ್ಬರಿಗೂ ಅವರವರದೇ ಆದ ತುರ್ತು ಇರುತ್ತದೆ. ಅದನ್ನು ಆಡಳಿತ ನಡೆಸುವವರು ಅರ್ಥ ಮಾಡಿಕೊಳ್ಳಬೇಕು. ಅಧಿಕಾರಸ್ಥರು ಮಾಡಿಕೊಂಡಿರುವ ಈ ಅಲಿಖಿತ ಗೊಡ್ಡು ಸಂಪ್ರದಾಯಕ್ಕೆ ತಿಲಾಂಜಲಿ ನೀಡಬೇಕಿದೆ.

⇒ರಾಜು ಬಿ. ಲಕ್ಕಂಪುರ, ಜಗಳೂರು

ನೈರುತ್ಯ ರೈಲ್ವೆಯ ಮಲತಾಯಿ ಧೋರಣೆ

ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯ ಮೂರು ರೈಲ್ವೆ ವಿಭಾಗಗಳ ಗೂಡ್ಸ್ ವಿಭಾಗದ ಸರಕು ಸಾಗಾಣಿಕೆ ಆದಾಯ ಗಳಿಕೆಯಲ್ಲಿ ಹುಬ್ಬಳ್ಳಿ ವಿಭಾಗವು ಮೊದಲಿನಿಂದಲೂ ಮುಂಚೂಣಿಯಲ್ಲಿದೆ. 2025–26ನೇ ಆರ್ಥಿಕ ವರ್ಷದಲ್ಲಿ ಹುಬ್ಬಳ್ಳಿ ವಿಭಾಗದಲ್ಲಿ ₹4,097.94 ಕೋಟಿ ಆದಾಯ ಸಂಗ್ರಹವಾಗಿದೆ. ಬೆಂಗಳೂರು ವಿಭಾಗದಲ್ಲಿ ₹351.45 ಕೋಟಿ ಹಾಗೂ ಮೈಸೂರು ವಿಭಾಗದಲ್ಲಿ ₹908.12 ಕೋಟಿ ಸಂಗ್ರಹವಾಗಿದೆ. ಹುಬ್ಬಳ್ಳಿ ವಿಭಾಗದ ಆದಾಯದಲ್ಲಿ ವಿಜಯನಗರ, ಬಳ್ಳಾರಿ ಜಿಲ್ಲೆಗಳಿಂದ ಶೇ 70ರಷ್ಟು ಗಳಿಕೆ ಇದ್ದರೂ ರೈಲ್ವೆ ಸೌಲಭ್ಯದಲ್ಲಿ ಈ ಎರಡು ಜಿಲ್ಲೆಗಳನ್ನು ಕಡೆಗಣಿಸಲಾಗಿದೆ. ಬಿಜೆಪಿ ಪ್ರಭಾವಿ ಸಂಸದರ ಕ್ಷೇತ್ರಗಳಿಗೆ ಆದ್ಯತೆ ನೀಡಿ ಅಧಿಕ ಆದಾಯ ನೀಡುತ್ತಿರುವ ಜಿಲ್ಲೆಗಳನ್ನು ನಿರ್ಲಕ್ಷಿಸಿರುವುದು ಸರಿಯೆ?

⇒ವೈ. ಯಮುನೇಶ್, ಹೊಸಪೇಟೆ

ಗೋವಿನ ಹತ್ಯೆ: ಇಬ್ಬಗೆಯ ನೀತಿ ಯಾರದು?

ಒಂದೆಡೆ ಗೋವಿನ ಹತ್ಯೆಗೆ ಪ್ರೋತ್ಸಾಹಿಸಿ, ಇನ್ನೊಂದೆಡೆ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಒತ್ತಾಯಿಸುವುದು ಮುಸ್ಲಿಂ ಧರ್ಮಗುರುಗಳ ಇಬ್ಬಗೆಯ ನೀತಿ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಗೋವು ಈಗಾಗಲೇ ನಮ್ಮ ತಾಯಿ; ತಾಯಿ ಮತ್ತು ಮಗುವಿನ ನಡುವಿನ ಸಂಬಂಧ
ವನ್ನು ವ್ಯಾಖ್ಯಾನಿಸಲು ಯಾವುದೇ ಘೋಷಣೆಯ ಅಗತ್ಯವಿಲ್ಲವೆಂದು ಪ್ರತಿಪಾದಿಸಿ
ದ್ದಾರೆ. ಹಾಗಿದ್ದರೆ ದೇಶದಲ್ಲಿನ ಗೋಮಾಂಸ ರಫ್ತು ವ್ಯವಹಾರವನ್ನು ಇಡೀ ವಿಶ್ವ
ದಲ್ಲೇ 2ನೇ ಸ್ಥಾನಕ್ಕೆ ಏರುವಂತೆ ಮಾಡಿರುವುದು ಕೂಡ ಇಬ್ಬಗೆಯ ನೀತಿಯಲ್ಲವೇ?

⇒ತಾ.ಸಿ. ತಿಮ್ಮಯ್ಯ, ಬೆಂಗಳೂರು

ನೇಮಕ ವಿಳಂಬ: ಇನ್ನೆಷ್ಟು ದಿನ ವನವಾಸ

ಪರಿಶಿಷ್ಟ ಜಾತಿಯ ಒಳಮೀಸಲಾತಿ ವಿಷಯವಾಗಿ ಒಂದು ವರ್ಷ ಸರ್ಕಾರಿ ಹುದ್ದೆ
ಗಳ ನೇರ ನೇಮಕಾತಿಯು ಸ್ಥಗಿತಗೊಂಡಿತು. ಮೀಸಲಾತಿ ಸರಿಯಾಗಿ ಹಂಚಿಕೆ
ಯಾಗಿಲ್ಲವೆಂದು ಮತ್ತೆ ಮುಂದೂಡಲಾಯಿತು. ಈ ನಡುವೆ ವಿಧಾನಸಭಾ ಉಪಚುನಾವಣೆಯೂ ತಡೆಗೋಡೆಯಾಯಿತು. ಒಳಮೀಸಲಾತಿ ಜಾರಿಯಾದರೂ ರೋಸ್ಟರ್ ಬಿಂದುಗಳ ವರ್ಗೀಕರಣ ಗೊಂದಲವು ಮತ್ತೆ ಅಡ್ಡಿಯಾಯಿತು. ಎಲ್ಲ ಆತಂಕಗಳು ನಿವಾರಣೆಯಾಗಿವೆ ಎನ್ನುವಾಗಲೇ ಮುಖ್ಯಮಂತ್ರಿ ಬದಲಾವಣೆ ವಿಷಯ ಮುನ್ನೆಲೆಗೆ ಬಂದು ನೇಮಕಾತಿಯು ಹಳ್ಳ ಹಿಡಿದಿದೆ. ಇನ್ನೊಂದು ವರ್ಷ
ಮುಗಿದರೆ 2028ರ ಚುನಾವಣೆಗೆ ಸರ್ಕಾರ ಸಜ್ಜಾಗಲಿದೆ. ಉದ್ಯೋಗ ನಂಬಿ
ಕೊಂಡು ಕುಳಿತವರಿಗೆ ಇನ್ನೆಷ್ಟು ದಿನ ವನವಾಸ ಎಂಬುದು ತಿಳಿಯದಾಗಿದೆ.

⇒ಪವನ್ ಜಯರಾಂ, ಚಾಮರಾಜನಗರ

ಮಕ್ಕಳ ಮೊಗ್ಗಿನ ಮನಸ್ಸು ಚಿವುಟದಿರಿ

‘ಪ್ರಜಾವಾಣಿ’ಯ ಜೂನ್ 2ರ ಸಂಚಿಕೆಯಲ್ಲಿ ಎರಡು ವಿಶಿಷ್ಟ ಫೋಟೊಗಳು ಪ್ರಕಟವಾಗಿವೆ. ಶಾಲೆಯ ಪ್ರಾರಂಭದ ದಿನ ಶಿಕ್ಷಕಿಯರು ಮಕ್ಕಳಿಗೆ ಪುಷ್ಪವೃಷ್ಟಿ ಮಾಡಿ ಸ್ವಾಗತಿಸುತ್ತಿರುವ ಫೋಟೊ ಒಂದು; ‘ಶ್ರೀರಾಮ ಸೇನೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’ಯ ಸದಸ್ಯರು ಹದಿಹರೆಯದ ವಿದ್ಯಾರ್ಥಿಗಳಿಗೆ ಶಾಲೆಯ ಆವರಣದಲ್ಲಿ ಕೇಸರಿ ಶಾಲು ಕೊಡುತ್ತಿರುವ ಫೋಟೊ ಇನ್ನೊಂದು. ಶಿಕ್ಷಕರಲ್ಲಿ ಮನವಿ ಇಷ್ಟೆ: ಮೊದಲ ದಿನ ಮಕ್ಕಳ ಮೇಲೆ ಹೂಮಳೆ ಸುರಿಸದಿದ್ದರೂ ಪರವಾಗಿಲ್ಲ. ಶಾಲಾ ದಿನಗಳಲ್ಲಿ ಎಳೆಯ ಮನಸ್ಸಿನ ಮೇಲೆ ಶಿಸ್ತಿನ ಹೆಸರಿನಲ್ಲಿ ಸಲ್ಲದ ಕಟ್ಟುಪಾಡು ಹೇರದೆ ಸ್ವಚ್ಛಂದವಾಗಿ ಕಲಿಯಲು ಬಿಡಿ. ‘ಸೇನೆ’ ಸದಸ್ಯರಲ್ಲಿ ಮನವಿ: ಕಾರಣ ಏನೇ ಇರಲಿ, ಹರೆಯದ ಹುಡುಗರ ಮನದಲ್ಲಿ ಸ್ನೇಹ–ಸೌಹಾರ್ದ ಮೂಡಿಸುವ ಬದಲು, ಧರ್ಮ–ಜಾತಿ ತಾರತಮ್ಯ ನಿವಾರಣೆಯ ಸೋಗಿನಲ್ಲಿ ಪರೋಕ್ಷವಾಗಿ ಮತೀಯ ದ್ವೇಷಭಾವ ಬಿತ್ತಬೇಡಿ.

ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.