ರಾಷ್ಟ್ರಧ್ವಜ ಬಳಕೆ: ಎಚ್ಚರ–ವಿವೇಕ ಅಗತ್ಯ

ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕರಕುಶಲ ವಸ್ತುಪ್ರದರ್ಶನವನ್ನು ‘ತ್ರಿವರ್ಣ ಧ್ವಜ’ದ ಟೇಪು ಕತ್ತರಿಸಿ ಉದ್ಘಾಟಿಸಲು ನಿರಾಕರಿ ಸಿದ ವಿಡಿಯೊ ಹರಿದಾಡುತ್ತಿದೆ. ಒಂದು ಕ್ಷಣ ಯೋಚಿಸಿ: ತ್ರಿವರ್ಣ ಧ್ವಜದ ಟೇಪು ಕತ್ತರಿಸಿದ್ದರೆ ಯಾವ ಪ್ರತಿಕ್ರಿಯೆ ಬರುತ್ತಿತ್ತು? ಟೇಪು ಕತ್ತರಿಸದೆ ಇದ್ದುದರಿಂದ ಈಗ ಯಾವ ಪ್ರತಿಕ್ರಿಯೆ ಬರುತ್ತಿದೆ? ಅವರು ತ್ರಿವರ್ಣ ಧ್ವಜದ ಟೇಪು ಕತ್ತರಿಸಿ ಉದ್ಘಾಟಿಸದೆ ಇದ್ದುದು ಒಳ್ಳೆಯದಾಯಿತು. ಯಾವುದೇ ದೇಶದ ಬಾವುಟಕ್ಕೆ ಚಾರಿತ್ರಿಕ, ಸಾಂಸ್ಕೃತಿಕ ಮಹತ್ವ ಇರುವಂತೆಯೇ ಭಾವನಾತ್ಮಕ ಆಯಾಮವೂ ಇರುತ್ತದೆ. ಧ್ವಜ, ದೇಶದ ಅಸ್ಮಿತೆ. ಟೇಪ್ನಲ್ಲಿನ ಬಾವುಟ ಕತ್ತರಿಸಿ, ತುಂಡಾಗಿಸಿ ನೆಲಕ್ಕೆ ಬಿಸಾಕುವುದು, ಅದನ್ನು ತುಳಿದು ನಡೆಯುವುದು ಘೋರ ಪಾತಕ ಕೆಲಸ. ಒಮರ್ ಅವರು ಟೇಪು ಕತ್ತರಿಸದೆ ಇದ್ದುದರಿಂದ ಆಗುವ ‘ಅಚಾತುರ್ಯ’ ತಪ್ಪಿದೆ.

⇒ಆರ್.ಜಿ. ಹಳ್ಳಿ ನಾಗರಾಜ, ಬೆಂಗಳೂರು

ಋತುಚಕ್ರ ರಜೆ ಮತ್ತು ಮಹಿಳೆಯರ ಘನತೆ

ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗೆ ಸಮಾನವಾಗಿ ಹೆಜ್ಜೆ ಹಾಕುತ್ತಿ ದ್ದಾರೆ. ಆದರೆ, ಋತುಚಕ್ರದ ಸಮಯದಲ್ಲಿ ಅವರು ಅನುಭವಿಸುವ ದೈಹಿಕ ಮತ್ತು ಮಾನಸಿಕ ವೇದನೆಗಳು ನಾಲ್ಕು ಗೋಡೆಗಳ ಮಧ್ಯೆಯಷ್ಟೇ ಚರ್ಚೆಯಾಗುತ್ತವೆ. ಕೆಲಸದ ಸ್ಥಳಗಳಲ್ಲಿ ಅದಕ್ಕೆ ಪೂರಕವಾದ ವಾತಾವರಣ ಇನ್ನೂ ನಿರ್ಮಾಣವಾಗಿಲ್ಲ. ಈ ನಿಟ್ಟಿನಲ್ಲಿ ಋತುಚಕ್ರದ ರಜೆಯನ್ನು ಕಡ್ಡಾಯಗೊಳಿಸುವುದು ಮಾನವೀಯತೆ ಯಷ್ಟೇ ಅಲ್ಲ, ಅದು ಮಹಿಳೆಯರ ಮೂಲಭೂತ ಹಕ್ಕಿಗೆ ಸಲ್ಲುವ ಗೌರವವೂ ಹೌದು. ಮಹಿಳಾ ಸಬಲೀಕರಣವು ಭಾಷಣಕ್ಕೆ ಸೀಮಿತವಾಗಬಾರದು. ಅವರ ಜೈವಿಕ ಅನಿವಾರ್ಯತೆಯನ್ನು ಅರ್ಥೈಸಿಕೊಂಡು, ಅದಕ್ಕೆ ಪೂರಕವಾದ ನಿಯಮ ರೂಪಿಸಿದಾಗಷ್ಟೇ ನಿಜವಾದ ಸಮಾನತೆ ಸಾಧ್ಯ. ಋತುಚಕ್ರದ ರಜೆಯನ್ನು ಕಡ್ಡಾಯ
ಗೊಳಿಸುವುದು ಮಹಿಳೆಯರ ಘನತೆ ಎತ್ತಿ ಹಿಡಿಯುವ ಐತಿಹಾಸಿಕ ನಡೆಯಾಗಲಿದೆ.

⇒ಗೌರಿ ತ್ರಿವೇಣಿ ದೊಡ್ಮನೆ, ಹೊಸಪೇಟೆ

ಚಾರಿತ್ರಿಕ ಘಟನೆಯ ತಪ್ಪು ವ್ಯಾಖ್ಯಾನ ಸಲ್ಲ

2002ರಲ್ಲಿ ಆಂಧ್ರಪ್ರದೇಶವನ್ನು ವಿಭಜಿಸಿ ತೆಲಂಗಾಣ ರಾಜ್ಯ ರಚಿಸಲಾಯಿತು. ಆಗಿನ ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಸಂಸದ ತೇಜಸ್ವಿ ಸೂರ್ಯ ಅವರು, ಭಾರತ–ಪಾಕಿಸ್ತಾನದ ವಿಭಜನೆಗೆ ಹೋಲಿಸಿದ್ದಾರೆ. ಅವರ ಈ ಅಪ್ರಬುದ್ಧ ನಡೆ ಯಿಂದ ಕನ್ನಡಿಗರು ತಲೆತಗ್ಗಿಸುವಂತಾಗಿದೆ. ಈ ಹಿಂದೆಯೂ ನೆಹರೂ ಕುರಿತಂತೆ ಆಡಿದ ಅವರ ಮಾತುಗಳು ಟೀಕೆಗೆ ಗುರಿಯಾಗಿದ್ದವು. ಸಂಸತ್ನಲ್ಲಿ ಚರ್ಚಿಸಲು ಸಾಕಷ್ಟು ವಿಷಯಗಳಿವೆ. ಹೀಗಿದ್ದರೂ ಜವಾಬ್ದಾರಿಯುತ ಸಂಸದರು ಚಾರಿತ್ರಿಕ ಘಟನೆಗಳನ್ನು ತಪ್ಪಾಗಿ ವ್ಯಾಖ್ಯಾನಿಸುವುದು ದುರದೃಷ್ಟಕರ. ಇನ್ನಾದರೂ ಅವರು ಪ್ರಬುದ್ಧವಾಗಿ ವರ್ತಿಸಲಿ. ಜನಪ್ರತಿನಿಧಿಗಳು ಬಿಡುಬೀಸಾಗಿ ಮಾತನಾಡದೆ ಕರ್ನಾಟಕದ ಹಿರಿಮೆಯು ಹೆಚ್ಚುವಂತೆ ನಡೆದುಕೊಳ್ಳಲಿ.

⇒ಶಾಂತಕುಮಾರ್, ಸರ್ಜಾಪುರ

ಕ್ಷೇತ್ರ ಮರುವಿಂಗಡಣೆ: ಅಸಮಾನತೆ ಸೃಷ್ಟಿ

ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆಯು ಸಂಕೀರ್ಣವಾದುದು. ಜನಸಂಖ್ಯೆಯ ಆಧಾರದ ಮೇಲೆ ನಡೆಯಲು ನಿರ್ಧರಿಸಿರುವ ಈ ಪ್ರಕ್ರಿಯೆಯು ರಾಜ್ಯಗಳ ನಡುವೆ ದೊಡ್ಡ ಕಂದಕ ಸೃಷ್ಟಿಸಲಿದೆ. ಕರ್ನಾಟಕ, ತಮಿಳುನಾಡು, ಕೇರಳದಂತಹ ರಾಜ್ಯಗಳು ಕುಟುಂಬ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿ ಸಿವೆ; ಆ ಮೂಲಕ ದೇಶದ ಏಳಿಗೆಗೆ ಕಾರಣವಾಗಿವೆ. ಜನಸಂಖ್ಯೆ ಆಧಾರದ ಮೇಲೆ ಸೀಟು ಹಂಚಿಕೆಯಾದರೆ ಈ ರಾಜ್ಯಗಳಿಗೆ ಲೋಕಸಭಾ ಸ್ಥಾನಗಳ ಸಂಖ್ಯೆ ಕಡಿಮೆಯಾಗಲಿದೆ. ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಪ್ರಾದೇಶಿಕ ಅಸಮತೋಲನ ಸೃಷ್ಟಿಸುವುದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು. ಸಂಸತ್ನಲ್ಲಿ ಮಂಡಿಸುವ ಮಸೂದೆಗಳು ಅಸಮತೋಲನ ಸೃಷ್ಟಿಸುವುದಕ್ಕೆ ದಾರಿಯಾಗಬಾರದು.

⇒ಕೃಷ್ಣಮೂರ್ತಿ ಆರ್., ತರೀಕೆರೆ

ಶೌಚಾಲಯ: ಪ್ರತಿ ನಾಗರಿಕನ ಆತ್ಮಗೌರವ

ಕರ್ನಾಟಕವು ‘ಬಯಲು ಶೌಚ ಮುಕ್ತ’ ರಾಜ್ಯವೆಂದು ಹೆಮ್ಮೆಯಿಂದ ಘೋಷಿಸಿ ಕೊಂಡಿದೆ. ಆದರೆ, ಈ ಸಂಭ್ರಮದ ಅಡಿಯಲ್ಲಿ ಬಡವರ ಕಣ್ಣೀರು ಮರೆಯಾಗಿದೆ. ಇಂದಿಗೂ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ದಲಿತ ಸಮುದಾಯದ ಕುಟುಂಬಗಳ ಶೇ 50ರಷ್ಟು ಮನೆಗಳಲ್ಲಿ ಶೌಚಾಲಯವಿಲ್ಲ. ಇದು ವ್ಯವಸ್ಥೆಯ ಅಟ್ಟಹಾಸಕ್ಕೆ ಸಾಕ್ಷಿ. ಕತ್ತಲಾದ ಮೇಲೆ ಹೆಣ್ಣುಮಕ್ಕಳು ಅಸಹಾಯಕತೆಯಿಂದ ಬಯಲಿಗೆ ಹೋಗುವ ಸ್ಥಿತಿ ಎಷ್ಟು ನೋವಿನದು? ಮೂಲಸೌಕರ್ಯದ ಕೊರತೆ ಬರೀ ಅಂಕಿ-ಅಂಶಗಳ ಆಟವಲ್ಲ; ಅದು ಮನುಷ್ಯನ ಘನತೆಯ ಪ್ರಶ್ನೆ. ಅಭಿವೃದ್ಧಿಯ ಮಂತ್ರ ಪಠಿಸುವ ಸರ್ಕಾರಗಳು ಕಟ್ಟಕಡೆಯ ವ್ಯಕ್ತಿಯ ನೋವಿಗೆ ಸ್ಪಂದಿಸದಿದ್ದರೆ, ಆ ಪ್ರಗತಿಗೆ ಅರ್ಥವಿದೆಯೆ? ಕಾಗದದ ಮೇಲಿನ ಘೋಷಣೆಗಿಂತ, ಬಡವನ ಮನೆಯ ಬಾಗಿಲಿಗೆ ಸೌಲಭ್ಯ ತಲಪಿದಾಗಷ್ಟೆ ನಿಜವಾದ ಬದಲಾವಣೆ ಸಾಧ್ಯ. ಶೌಚಾಲಯ ಬರೀ ಕಟ್ಟಡವಲ್ಲ; ಅದು ಪ್ರತಿಯೊಬ್ಬ ನಾಗರಿಕನ ಆತ್ಮಗೌರವ.

⇒ಯು.ಎಂ. ನಂದೀಶ, ಕೊಟ್ಟೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.