ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ: ಅಪಾರ್ಥಕ್ಕೆ ದಾರಿ

Last Updated 29 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಸಿಬ್ಬಂದಿಯು ಹಗಲು-ರಾತ್ರಿ ಕೆಲಸ ಮಾಡಿ ಆಯ್ಕೆಪಟ್ಟಿ ಸಿದ್ಧಪಡಿಸಿರುವುದಾಗಿ ಆಯೋಗದ ಕಾರ್ಯದರ್ಶಿ ಹೇಳಿದ್ದಾರೆ (ಪ್ರ.ವಾ., ಏ. 28). ಸಮಸ್ಯೆ ಇರುವುದೇ ಈ ವಿಚಾರದಲ್ಲಿ. ಕೆಪಿಎಸ್‌ಸಿ ರಾತ್ರಿ ವೇಳೆಯಲ್ಲೇ ಹೆಚ್ಚಾಗಿ ಕೆಲಸ ಮಾಡುವ ಅಭ್ಯಾಸ ಇಟ್ಟುಕೊಂಡಿದೆ ಎಂಬುದನ್ನು ಈ ಹಿಂದೆ ಅದರೊಟ್ಟಿಗೆ ತಳಕು ಹಾಕಿಕೊಂಡ ಹಗರಣಗಳು ಸೂಚಿಸುತ್ತವೆ.

ನಿರ್ಬಂಧ ಇರುವ ಈ ವೇಳೆಯಲ್ಲಿ ಹಗಲು ಕೆಲಸ ಮಾಡಿದರೇ ಅನುಮಾನದಿಂದ ನೋಡುವ ಸ್ಥಿತಿ ಇದೆ. ಹೀಗಿರುವಾಗ ರಾತ್ರಿ ಕೆಲಸ ಮಾಡುವುದು ಖಂಡಿತ ಬೇರೆ ಬಗೆಯ ಅರ್ಥಗಳಿಗೆ, ಅಪಾರ್ಥಗಳಿಗೆ ದಾರಿ ಮಾಡಿಕೊಡುತ್ತದೆ.

-ಸುಶಾಂತ ಬನಾರಿ, ಮಾಡ್ನೂರು, ಪುತ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT