ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರ್ನಾಟಕ ರಾಜ್ಯೋತ್ಸವ’ವೇ ಸರಿ

Last Updated 2 ನವೆಂಬರ್ 2022, 19:45 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯೋತ್ಸವಕ್ಕೆ ಸಂಬಂಧಿಸಿದಂತೆ ಚಂದ್ರಕಾಂತ ವಡ್ಡು ಮತ್ತು ರಘುನಂದನ ಅವರು ಎತ್ತಿರುವ ಧ್ವನಿಯನ್ನು (ವಾ.ವಾ., ನ. 2) ಪ್ರಬಲವಾಗಿ ಸಮರ್ಥಿಸುತ್ತೇನೆ. ಸಂವಿಧಾನದ ಮೊದಲ ಶೆಡ್ಯೂಲ್‌ನಲ್ಲಿರುವ ರಾಜ್ಯಗಳ ಪಟ್ಟಿಯಲ್ಲಿ ‘ಕರ್ನಾಟಕ’ ಎಂಬ ರಾಜ್ಯವಿದೆಯೇ ವಿನಾ, ‘ಕನ್ನಡ ರಾಜ್ಯ’ ಎಂದಿಲ್ಲ. ಅಂದಾಗ, ಕನ್ನಡ ರಾಜ್ಯೋತ್ಸವಕ್ಕೆ ಏನು ಅರ್ಥ?

ಕರ್ನಾಟಕದಲ್ಲಿ ಕನ್ನಡವಲ್ಲದೇ ಉರ್ದು, ತುಳು, ಬ್ಯಾರಿ, ಕೊಡವ, ಬಂಜಾರ್... ಹೀಗೆ (2011ರ ಜನಗಣತಿ) 156 ಮಾತೃಭಾಷೆಗಳು ಇವೆ. ಕರ್ನಾಟಕ ಅವರೆಲ್ಲರಿಗೂ ಸೇರಿದ್ದು. ನವೆಂಬರ್ 1ರಂದು ಉದಯವಾಗಿದ್ದು ಕರ್ನಾಟಕ. ಅಂದು ನಾವು ‘ಎಲ್ಲರೂ’ ಸೇರಿ ಆಚರಿಸಬೇಕಾದದ್ದು ‘ಕರ್ನಾಟಕ ರಾಜ್ಯೋತ್ಸವ’. ನಮ್ಮಂಥ ಕನ್ನಡ ಭಾಷಾಭಿಮಾನಿಗಳು ಕನ್ನಡೋತ್ಸವವನ್ನು ಬೇರೊಂದು ದಿನ ಆಚರಿಸೋಣ. ಒಂದು ಕಡೆ ‘ಕನ್ನಡ’ ಇನ್ನೊಂದು ಕಡೆ, ‘ಕರ್ನಾಟಕ’ ಎಂದು ಎರಡನ್ನೂ ಬಳಸುವ, ಪ್ರಕಟಿಸುವ (‘ಕನ್ನಡ’ ಸರ್ಕಾರವಲ್ಲ), ಕರ್ನಾಟಕ ಸರ್ಕಾರ ಹೆಚ್ಚು ಪ್ರಬುದ್ಧ ನಿಲುವನ್ನು ತಾಳಬೇಕು.

-ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT